ಗಾನವಿ ವಿರುದ್ಧ ತಿರುಗಿ ಬಿದ್ದ ಇಡೀ ಮನೆ ಮಂದಿ
ಕಳಪೆ ಪಟ್ಟ ಪಡೆದುಕೊಂಡು ಜೈಲು ಸೇರಿದ ಗಾನವಿ
ಜಗದೀಶ್, ಗಗನ್ ಸೇರಿದಂತೆ ಹಲವರ ಜೊತೆ ವಾಗ್ವಾದ
Bigg Boss Kannada 13: ಈ ವಾರ ಬಿಗ್ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಈ ಕಾರಣದಿಂದ ಮುಂದಿನ ವಾರ ಮನೆಗೆ ಯಾವುದೇ ಪೈಲಟ್ ಇರೋದಿಲ್ಲ. ಮಂಜ ಹಾಗೂ ಲಿಖಿತ್ ಉಸ್ತುವಾರಿಯ ತೀರ್ಮಾನವೇ ಅಂತಿಮ ಎಂದು ಇಷ್ಟ ಬದಂತೆ ನಿಯಮಗಳನ್ನು ಸ್ಪರ್ಧಿಗೆ ಒಡ್ಡಿದ ಕಾರಣ ಮನೆಯಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಹೀಗಾಗಿ ಕ್ಯಾಪ್ಟನ್ಸಿ ಟಾಸ್ಕ್ ಅನ್ನೇ ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಯಿತು.
ಸಾಮಾನ್ಯವಾಗಿ ವಾರದ ಕೊನೆ ಕಳಪೆ ಪಟ್ಟ ಯಾರಿಗೆ ಕೊಡಬೇಕು ಎನ್ನುವ ಚಟುವಟಿಕೆಯನ್ನು ಬಿಗ್ಬಾಸ್ ನೀಡುತ್ತಾರೆ. ಆದರೆ, ವಾರದ ಮಧ್ಯೆಯೇ ಈ ಚಟುವಟಿಕೆ ನಡೆದಿದ್ದು, ಟಾಸ್ಕ್ಗಳಲ್ಲಿ ಉತ್ತಮವಾಗಿ ಸ್ಪರ್ಧಿಸಿ, ಟೀಂ ಅನ್ನು ವಿನ್ ಮಾಡಿದ ಗಾನವಿ ಅವರು ಇತರೆ ಸ್ಪರ್ಧಿಗಳಿಂದ ಕಳಪೆ ಪಡೆದುಕೊಂಡು ಜೈಲು ಸೇರಿದ್ದಾರೆ.
ಕ್ಯಾಪ್ಟನ್ಸಿ ರದ್ದಾಗಲು ಮುಖ್ಯ ಕಾರಣ ಮಂಜು ಮತ್ತು ಲಿಖಿತ್ ಆದರೆ, ಇದನ್ನು ಲೆಕ್ಕಿಸದ ಇತರ ಸ್ಪರ್ಧಿಗಳು ಗಾನವಿ ವಿರುದ್ಧ ತಿರುಗಿಬಿದ್ದಿದ್ದಾರೆ. ಗಾನವಿ ಭಾರ ಹೊತ್ತ ಧೀರ ಟಾಸ್ಕ್ನಲ್ಲಿ ಉತ್ತಮ ಪ್ರದರ್ಶನ ಕೊಟ್ಟಿದ್ದರು. ಅವರು ಬೇರೆಯಾರಿಗೂ ಚಾನ್ಸ್ ಕೊಡದ ಕಾರಣ ಈ ಬಗ್ಗೆ ಇತರ ಸ್ಪರ್ಧಿಗಳು ಕಿಡಿಕಾರಿದ್ದರು. ಜೊತೆಗೆ ಅವರ ಗ್ರೀನ್ ಟೀಂನಲ್ಲಿ ವೈಮನಸ್ಸು ಉಂಟಾಗಿತ್ತು. ಇನ್ನು ಗೋಲು ಇಲ್ಲಾಂದ್ರೆ ಸೋಲು ಗಾನವಿ ಟೀಂ ಗೆದ್ದಿತ್ತಾದರೂ ಅವರ ತಂಡ ಮಾತ್ರ ಈ ಬಗ್ಗೆ ಖುಷಿಯಾಗಿರಲಿಲ್ಲ.
ಚೈಲ್ಡ್ ಚಪಾತಿ ಆಡ್ದಂಗೆ ಆಡ್ತಾಳೆ. ಸರಿಯಾಗಿ ಮಾತನಾಡೋದಿಲ್ಲ ಎಂದು ಗಗನ್ ಕಿಡಿಕಾರಿದ್ದಾರೆ. ಇನ್ನೂ ಸೌಂದರ್ಯ ಅವರು ಇವರು ಯಾರು ಚಾನ್ಸ್ ಕೊಡ್ತೀವಿ ಅನ್ನೋದಕ್ಕೆ ಎಂದು ಅಣಕಿಸಿದ್ದಾರೆ. ಇದೇ ಸಿಟ್ಟಲ್ಲಿದ್ದ ಮನೆಯು ಗಾನವಿ ಅವರಿಗೆ ಕಳಪೆ ಕೊಟ್ಟಿದ್ದಾರೆ.
ಗಾನವಿ ಅವರ ಕೂಗಾಟದಿಂದ ತಲೆ ನೋವಾಗಿದೆ ಎನ್ನುತ್ತಾರೆ ಜಗದೀಶ್ ಆಗ ಗಾನವಿ ಮನೆಗೆ ಹೋಗಿ ಎಂದಿದ್ದಾರೆ. ಅದಕ್ಕೆ ಮನೆಗೆ ಹೋಗಲ್ಲ ಹೋಗುಸ್ತೀವಿ ಎಂದಿದ್ದಾರೆ. ಇನ್ನೂ ಗಾನವಿ ಅವರು ಜನರ ಮನಸ್ಸನ್ನು ಮ್ಯಾನಿಪುಲೇಟ್ ಮಾಡುತ್ತಾರೆ ಎಂದು ಗಗನ್ ಹೇಳಿದರು. ಆಗ ಗಾನವಿ ಮಾಡೋದು ಆಗ ನೀವು ಎಂದಿದ್ದಾರೆ. ಈ ವಿಚಾರವಾಗಿ ಮನೆಯಲ್ಲಿ ತೀವ್ರ ವಾಗ್ವಾದ ಹಾಗೂ ಮಾತಿನ ಚಕಮಕಿ ನಡೆದಿರುವ ದೃಶ್ಯವು ಇಂದಿನ ಪ್ರೋಮೋದಲ್ಲಿದೆ.
ಗಾನವಿಗೆ ಕಳಪೆ ಸಿಕ್ಕ ಬಗ್ಗೆ ಎಕ್ಸ್ ನಲ್ಲಿ ಪರ ವಿರೋಧ ಚರ್ಚೆ ವ್ಯಕ್ತವಾಗುತ್ತಿದೆ. ಗಾನವಿ ಸಿಂಪಥಿ ಕ್ರಿಯೇಟ್ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ಮಂದಿ ಹೇಳಿದರೆ, ಇನ್ನೂ ಕೆಲವರು ಮಂಜ ಹಾಗೂ ಲಿಖಿತ್ ಉಸ್ತುವಾರಿಯಿಂದಾಗಿ ಕ್ಯಾಪ್ಟನ್ಸಿ ಟಾಸ್ಕ್ ರದ್ದಾಗಿದೆ. ಈ ಬಗ್ಗೆ ಯಾರೊಬ್ಬರು ಮಾತನಾಡಿಲ್ಲ. ಅವರಿಗೆ ಕಳಪೆ ಕೊಟ್ಟಿಲ್ಲ ಎಂದರು.
ಮನೆಯಲ್ಲಾಗುತ್ತಿರುವ ವಿಚಾರಗಳು ವಲ್ಗರ್ ಮಾತುಗಳು ಹಾಗೂ ಲಿಖಿತ್, ಮಂಜನ ಉಸ್ತುವಾರಿ ಬಗ್ಗೆ, ಯಶಸ್ ನಿಯಮ ಮುರಿದ ವಿಚಾರದ ಬಗ್ಗೆ ಕಿಚ್ಚ ಸುದೀಪ್ ಅವರು ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಹೇಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).