ಪತಿ ಸೂರಜ್ ನಂಬಿಯಾರ್ನನ್ನು ಅನ್‌ಫಾಲೋ ಮಾಡಿದ ಮೌನಿ ರಾಯ್
- ವಿಚ್ಚೇದನ ಪಡೆಯಲು ಮುಂದಾದ ನಾಗಿನ್ ನಟಿ?
- ಪತಿ ಸೂರಜ್ ನಂಬಿಯಾರ್ನನ್ನು ಅನ್‌ಫಾಲೋ ಮಾಡಿದ ಮೌನಿ ರಾಯ್
- ಸೋಷಿಯಲ್ ಮೀಡಿಯಾನಲ್ಲಿ ಸದ್ದು ಮಾಡುತ್ತಿರುವ ಡಿವೋರ್ಸ್ ವದಂತಿ
ಮುಂಬೈ: ಸಿನಿಮಾ ತಾರೆಗಳ ಮದುವೆ ಸುದ್ದಿ ಎಷ್ಟು ಚರ್ಚೆಗೆ ಗ್ರಾಸವಾಗುತ್ತದೆ, ವಿಚ್ಚೇದನದ ಸುದ್ದಿ, ಅಷ್ಟೇ ಅಥವಾ ಅದಕ್ಕಿಂತ ಹೆಚ್ಚಿನದಾಗಿ ಸದ್ದು ಮಾಡುತ್ತದೆ.
ಕಿರುತೆರೆ ಹಾಗೂ ಬಾಲಿವುಡ್ ಸಿನಿಮಾಗಳ ಮೂಲಕ ಮನೆಮಾತಾಗಿದ್ದ ನಟಿ ಮೌನಿ ರಾಯ್ (Mouni Roy Divorce) ಪತಿ ಸೂರಜ್ ನಂಬಿಯಾರ್ರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿರುವುದು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಡಿವೋರ್ಸ್ ಪಡೆಯಲಿದ್ದಾರಾ ನಾಗಿನ್ ನಟಿ?
ಸದ್ಯ ಸೋಷಿಯಲ್ ಮೀಡಿಯಾನಲ್ಲಿ ಚರ್ಚೆ ನಡೆಯುತ್ತಿರುವ ಪ್ರಕಾರ, ಮೌನಿ ರಾಯ್ ಹಾಗೂ ಸೂರಜ್ ನಂಬಿಯಾರ್ ಇಬ್ಬರು ಪರಸ್ಪರರನ್ನು ಅನ್‌ಫಾಲೋ ಮಾಡಿಕೊಂಡಿದ್ದಾರೆ.
ಹಾಗೆಯೇ ಸೂರಜ್ ನಂಬಿಯಾರ್ ಇನ್ಸ್ಟಾಗ್ರಾಮ್ ಖಾತೆಯಿಂದ ತಮ್ಮ ಮದುವೆಯ ಫೋಟೊಗಳನ್ನು ಸಹ ಡಿಲೀಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರಿಂದ ಇವರಿರ್ವರ ದಾಂಪತ್ಯ ಜೀವನ ಸುಖಕರವಾಗಿಲ್ಲ ಎನ್ನುವುದು ಜನರ ಅಭಿಪ್ರಾಯವಾಗಿದೆ.
ಆದರೆ ಈ ಕುರಿತು ಮೌನಿಯಾಗಲೀ ಅಥವಾ ಸೂರಜ್ ಆಗಲಿ ಯಾವುದೇ ಅಧಿಕೃತ ಹೇಳಿಕೆ ಇಲ್ಲಿವರೆಗೆ ನೀಡದ ಕಾರಣ ಇದು ಕೇವಲ ವದಂತಿ ಎಂದೇ ನಾವು ತಿಳಿದು ಕೊಳ್ಳುವುದು ಉತ್ತಮ.
ಅಭಿಮಾನಿಗಳು ಏನಂತಾರೆ?
ಮೌನಿ ರಾಯ್ ವಿಚ್ಚೇದನದ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ನಾಗಿನಿಯ ಅಭಿಮಾನಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹೌದು, ಮೌನಿ ತನ್ನ ಗಂಡನೊಂದಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಈಗ ಅದನ್ನು ನಿಲ್ಲಿಸಿದ್ದಾರೆ, ಏನೋ ಸಮಸ್ಯೆ ಖಂಡಿತವಿದೆ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ಅವರು ತಮ್ಮ ಖಾಸಗಿತನದ ಗೌಪ್ಯತೆಗಾಗಿ ಹೀಗೆ ಮಾಡಿರಬಹುದು, ಇದನ್ನು ವಿಚ್ಚೇದನದ ಜೊತೆ ತಾಳೆ ಹಾಕುವುದು ಸರಿಯಲ್ಲ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಗೋವಾದಲ್ಲಿ ಮದುವೆಯಾಗಿದ್ದ ಜೋಡಿ!
ಬಾಲಿವುಡ್ ನಟಿ, ಕಿರುತೆರೆ ಕ್ವಿನ್ ಮೌನ್ ರಾಯ್ 2022 ರಲ್ಲಿ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ಗೋವಾದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮೌನಿ ರಾಯ್ ಬಂಗಾಳದವರಾಗಿದ್ದು, ಸೂರಜ್ ಕೇರಳದವರಾಗಿದ್ದರಿಂದ ಇವರ ಮದುವೆ ಎರಡು ಸಂಪ್ರದಾಯಗಳ ಮಿಶ್ರಣದಲ್ಲಿ ಜರುಗಿತ್ತು,(ಏಜನ್ಸೀಸ್).