ಕಿರುತೆರೆ ನಟಿ ಕಾವ್ಯಾ ಗೌಡ ದಂಪತಿ 
ಕಿರುತೆರೆ

ಕಾವ್ಯಾಗೆ ಆ ಹುಚ್ಚು ಹಿಡಿದಿದೆ... ಆಕೆಯ ಗಂಡ ಮಾದಕ ವ್ಯಸನಿ, ಪ್ಯಾಂಟ್​ ಬಿಚ್ಚಿ ಅಶ್ಲೀಲ ವರ್ತನೆ! ಸ್ಫೋಟಕ ಆರೋಪಗಳು...Kavya Gowda

ಪ್ರಮುಖ ಮುಖ್ಯಾಂಶಗಳು

  • ಕಿರುತೆರೆ ನಟಿ ಕಾವ್ಯಾ ಗೌಡ ಅವರ ಕೌಟುಂಬಿಕ ಕಲಹ ಇದೀಗ ಬೀದಿಗೆ ಬಿದ್ದಿದೆ
  • ವಾರಗಿತ್ತಿಯರ ಕಿತ್ತಾಟ ಇದೀಗ ಹಾದಿ ರಂಪ ಬೀದಿ ರಂಪ ಆಗಿದೆ
  • ಕಾವ್ಯಾಳ ವಾರಗಿತ್ತಿ ಪ್ರೇಮಾ ಅವರ ತಂದೆ ರವಿಕುಮಾರ್​ ಸ್ಫೋಟಕ ಆರೋಪ ಮಾಡಿದ್ದಾರೆ
ಬೆಂಗಳೂರು: ಕಿರುತೆರೆ ನಟಿ ಕಾವ್ಯಾ ಗೌಡ ( Kavya Gowda ) ಅವರ ಕೌಟುಂಬಿಕ ಕಲಹ ಇದೀಗ ಬೀದಿಗೆ ಬಿದ್ದಿದೆ. ವಾರಗಿತ್ತಿಯರ ಕಿತ್ತಾಟ ಇದೀಗ ಹಾದಿ ರಂಪ ಬೀದಿ ರಂಪ ಆಗಿದ್ದು, ಎರಡೂ ಕುಟುಂಬದವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ. ಇದರ ನಡುವೆ ಕಾವ್ಯಾಳ ವಾರಗಿತ್ತಿ ಪ್ರೇಮಾ ಅವರ ತಂದೆ ರವಿಕುಮಾರ್​, ಕಾವ್ಯಾ ಮತ್ತು ಸೋಮಶೇಖರ್​ ದಂಪತಿ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪ್ರೇಮಾ ಅವರ ತಂದೆ ರವಿಕುಮಾರ್ ವಿಜಯವಾಣಿ ಡಿಜಿಟಲ್​ ಜತೆ ಮಾತನಾಡಿದ್ದು, ಕಾವ್ಯಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.​ ನನ್ನ ಮಗಳು ಪ್ರೇಮಾಳನ್ನು ರೇವಣ್ಣ ಅವರೇ ತುಂಬಾ ಆಸೆಯಿಂದ ತನ್ನ ಮಗನಿಗೆ ಮದುವೆ ಮಾಡಿಕೊಂಡರು. ನಾನು ಕಲ್ಕೆರೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದೆ. ರೇವಣ್ಣ ಕೂಡ ಸದಸ್ಯರಾಗಿದ್ದರು. ನಮಗೆ ನಿಮ್ಮ ಕುಟುಂಬದಲ್ಲೇ ಹೆಣ್ಣು ಬೇಕು ಅಂತ ಕೇಳಿ ಮಾಡಿಕೊಂಡು ಹೋದರು. ಆದರೆ, ಕಾವ್ಯಾ ಗೌಡ ಮದುವೆಯಾದ ಬಳಿಕ ಎಲ್ಲವು ಶುರುವಾಯಿತು. ರೇವಣ್ಣ ಅವರು ಮನೆಯನ್ನು ತುಂಬಾ ದೊಡ್ಡದಾಗಿ ಮತ್ತು ವಿಶಾಲವಾಗಿ ಕಟ್ಟಿದ್ದಾರೆ. ಆ ಮನೆಯಲ್ಲಿ ಯಾರು, ಎಲ್ಲಿರುತ್ತಾರೆ ಅನ್ನೋದೆ ಗೊತ್ತಾಗುವುದಿಲ್ಲ. ನೂರಾರು ಕೋಟಿ ರೂ. ಖರ್ಚು ಮಾಡಿ ಮನೆ ಕಟ್ಟಿದ್ದಾರೆ. ಆ ಮನೆ ಕಾವ್ಯಾ ಗೌಡಳ ಕಣ್ಣು ಕುಕ್ಕುತ್ತೆ. ರೀಲ್ಸ್​ ಮತ್ತು ಶಾರ್ಟ್ಸ್​ ಮಾಡಿ ಮಾಡಿ, ಆ ಮನೆ ನಂದೇ ಅನ್ನೋ ರೀತಿ ಆಡ್ತಾ ಇದಾಳೆ. ನಮಗೆ ಆ ಮನೆ ಬೇಕಾಗೂ ಇಲ್ಲ. ಅದಕ್ಕೆ ಆ ಮನೆಯನ್ನು ನಾವು ಬಿಟ್ಟುಬಿಟ್ಟಿದ್ದೇವೆ. ಏಕೆಂದರೆ, ನಮಗೂ ಬೇಕಾದಷ್ಟು ಆಸ್ತಿ ಇದೆ. ಆದರೆ, ನಾವು ಬೇರೆ ಮನೆ ಕಟ್ಟಿಕೊಳ್ಳುವವರೆಗೂ ಆ ಮನೆಯಲ್ಲಿ ಇರಿ ಅಂತ ರೇವಣ್ಣ ಅವರು ಹೇಳಿದ್ರು. ನಮ್ಮ ಅಳಿಯ ಮನೆ ಕಟ್ಟೋವರೆಗೂ ಒಂದು ಶೆಡ್​ ಹಾಕ್ಕೊಂಡು ಆ ಶೆಡ್​ಗೆ ಬಂದುಬಿಡುತ್ತಿದ್ದ. ಆದರೆ, ರೇವಣ್ಣ ಅವರು ಬಿಡಲಿಲ್ಲ. ಯಾರೂ ಹೋಗಬೇಡಿ, ಮನೆ ಕಟ್ಟಿಕೊಳ್ಳುವವರೆಗೂ ನೀವು ಈ ಮನೆಯಲ್ಲೇ ಇರಿ ಎಂದು ಒತ್ತಾಯ ಮಾಡಿದರು ಎಂದು ಪ್ರೇಮಾ ಅವರ ತಂದೆ ರವಿಕುಮಾರ್​ ಹೇಳಿದ್ದಾರೆ. 
ಕಾವ್ಯಾ ಗೌಡ ಮಾತ್ತೆತ್ತಿದರೆ ಆಚೆ ಹೋಗಿ ಎನ್ನುತ್ತಿದ್ದಳು. ಕಾವ್ಯಾಳ ಗಂಡ ಸೋಮಶೇಖರ್​, ಪ್ಯಾಂಟ್​ ಬಿಚ್ಚಿ ಅಸಭ್ಯವಾಗಿ ನಡೆದುಕೊಂಡನು. ಇದರಿಂದ ನಮಗೆಲ್ಲ ಬೇಜಾರಾಯಿತು. ಅತ್ಯಾಚಾರಕ್ಕೆ ಬೆದರಿಕೆ ಹಾಕಿದರು ಅಂತಾ ಹೇಳ್ತಾ ಇದಾರೆ, ನಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿದ್ದಾರೆ. ನಾವೇಕೆ ಆ ಮಾತು ಹೇಳಲಿ. ಎಲ್ಲರನ್ನು ಕೂರಿಸಿ ಮಾತನಾಡುವಾಗಲೇ ಇಷ್ಟೆಲ್ಲ ನಡೆದಿದೆ. ಅವರು ಮಾಡಿದ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ. ಕೊನೆಯಲ್ಲಿ ಮಗನ ಅಶ್ಲೀಲ ಮಾತುಗಳನ್ನು ತಡೆಯಲಾರದೇ ರೇವಣ್ಣ ಅವರೇ ಗೇಟಿಂದ ಆಚೆ ಹೋಗು ಅಂತ ತಳ್ಳಿದರು. ಆ ಬಳಿಕವೇ ಅವರು ಪೊಲೀಸ್​ ಠಾಣೆಗೆ ಹೋದರು ಎಂದು ರವಿಕುಮಾರ್​ ತಿಳಿಸಿದರು. 

ಮನೆ ನೋಡಿ ಮದುವೆ ಆದಳು

ಆ ಮನೆ ನನ್ನ ಮಗಳಿಗೆ ಅಂತಾನೇ ರೇವಣ್ಣ ಅವರು ಹೇಳಿದ್ದರು. ಆದರೆ, ಕಾವ್ಯಾ ಗೌಡ ಆ ಮನೆಯನ್ನು ನೋಡಿ ಸೋಮಶೇಖರ್​ನನ್ನ ಮದುವೆಯಾದಳು. ಅವರಿಬ್ಬರದು ಅಂತರ್ಜಾತಿ ಮದುವೆ. ವಿವಾಹಕ್ಕೂ ಮುನ್ನ ಮನೆ ನೋಡಿದಳು. ಹೀಗಾಗಿಯೇ ಆತನನ್ನು ಮದುವೆ ಆಗಲು ಒಪ್ಪಿಕೊಂಡಳು. ಮದುವೆಯಾದ ಬಳಿಕ ಆರಂಭದಲ್ಲಿ ಅವರಿಬ್ಬರನ್ನು ಮನೆಗೆ ಸೇರಿಸಿರಲಿಲ್ಲ. ಆದರೆ, ನಿಧಾನವಾಗಿ ಆ ಮನೆಯನ್ನು ಪ್ರವೇಶ ಮಾಡಿದಳು. ಮನೆಗೆ ಬಂದ ಮೇಲೆ ಆ ಮನೆ ನಂದು ನಂದು ಅಂತಾ ಹೇಳಿಕೊಳ್ಳಲು ಶುರು ಮಾಡಿದಳು. ರೀಲ್ಸ್​, ಶಾರ್ಟ್ಸ್​ ಮಾಡುವ ಮೂಲಕ ನನ್ನ ಮನೆ ಅಂತ ಹೇಳೋಕೆ ಆರಂಭಿಸಿದಳು. ಇದನ್ನು ನಾವು ರೇವಣ್ಣ ಅವರ ಗಮನಕ್ಕೆ ತಂದೆವು. ಬಳಿಕ ರೇವಣ್ಣ ಅವರು ಕೂರಿಸಿ, ಬುದ್ಧಿಮಾತು ಹೇಳಿದರು. ಈ ವೇಳೆ ನನ್ನ ಮಗಳೇ ಆ ಮನೆ ಬೇಡ ಅಂತಾ ಹೇಳಿದಳು. ರೀಲ್ಸ್​ ಎಲ್ಲ ಮಾಡಿ ಈ ಮನೆ ನಂದು ಅಂತಾ ಹೇಳಿದ್ದಾಳೆ. ನನಗೆ ಈ ಮನೆ ಬೇಡ ಎಂದು ನನ್ನ ಮಗಳೇ ಹೇಳಿದಳು. ಅಲ್ಲದೆ, ಬೇರೆ ಮನೆ ಕಟ್ಟಿಕೊಳ್ಳುವುದಾಗಿ ಹೇಳಿದಳು. ಸದ್ಯ ಮನೆ ನಿರ್ಮಾಣ ಆರಂಭವಾಗಿದೆ. ಅಲ್ಲಿಯವರೆಗೆ ಶೀಟ್​ ಮನೆಯಲ್ಲಿ ಇರುತ್ತೇವೆ ಎಂದು ಹೇಳಿದೆವು. ಆದರೆ, ನೂರಾರು ಕೋಟಿಗೆ ಬಾಳಿದವರು, ಶೀಟ್​ ಮನೆಯಲ್ಲಿ ಇರೋದು ನನಗೆ ಇಷ್ಟವಿಲ್ಲ ಎಂದು ಹೇಳಿ ರೇವಣ್ಣ ಅವರೇ ನಮ್ಮನ್ನು ತಡೆದರು. ನನ್ನ ಮಗಳನ್ನು ಮತ್ತು ಅಳಿಯನನ್ನು ಅದೇ ಮನೆಯಲ್ಲಿ ಇರಿಸಿದರು. ನಾನು ಕೂಡ ಅವರನ್ನು ಒಪ್ಪಿಸಿ, ಅದೇ ಮನೆಯಲ್ಲಿ ಇರಿಸಿದೆ. ಒಂದು ವರ್ಷದಿಂದ ಮನೆಯಲ್ಲಿ ಇದ್ದರು. ಊಟ ಮಾಡುವಾಗಲೆಲ್ಲ ಕಾವ್ಯಾ ಗೌಡ ಜಗಳ ಮಾಡುತ್ತಾಳೆ ಎಂದರು. ಅಲ್ಲದೆ, ಮಗುವಿಗೆ ಹೊಡೆದಿದ್ದಾರೆ ಎಂಬ ಆರೋಪವೂ ಕೂಡ ಸುಳ್ಳು ಎಂದು ಹೇಳಿದರು. 

ಡ್ರಗ್ಸ್​ ಅಡಿಕ್ಟರ್​ 

ಕಾವ್ಯಾಳ ಗಂಡ ಸೋಮಶೇಖರ್​ ಓರ್ವ ಮಾದಕ ವ್ಯಸನಿ. ನಿತ್ಯವೂ ಆತ ಡ್ರಗ್ಸ್​ ತೆಗೆದುಕೊಳ್ಳುತ್ತಾನೆ. ಇಷ್ಟೆಲ್ಲ ಆದರೂ ಆತ ಪೊಲೀಸ್​ ಠಾಣೆಗೆ ಬಂದಿಲ್ಲ. ಕಾವ್ಯಾನೇ ಎಲ್ಲವನ್ನು ನೋಡಿಕೊಳ್ಳುತ್ತಿದ್ದಾಳೆ. ರಕ್ತದ ಸ್ಯಾಂಪಲ್​ ತೆಗೆದುಕೊಂಡುಬಿಡುತ್ತಾರೆ ಅನ್ನೋ ಭಯದಲ್ಲಿ ಠಾಣೆಗೆ ಬರುತ್ತಿಲ್ಲ. ಆಸ್ಪತ್ರೆಯಲ್ಲಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾಳೆ. ನಾನು ಇನ್ಸ್​ಪೆಕ್ಟರ್​ಗೂ ಕೂಡ ಆತ ಡ್ರಗ್ಸ್​ ಅಡಿಕ್ಟರ್​ ಎಂದು ಹೇಳಿದ್ದೇನೆ. ಆತ ಮಾದಕ ವ್ಯಸನಿ ಅನ್ನೋದು ಇಡೀ ಊರಿಗೆ ಗೊತ್ತಿದೆ. ಅವರ ತಂದೆಗೂ ನಾನೇ ಹೇಳಿದ್ದೇನೆ. ಆದರೆ, ಸೋಮಶೇಖರ್​ ತಂದೆ-ತಾಯಿಗೂ ಮರ್ಯಾದೆ ಕೊಡುವುದಿಲ್ಲ ಎಂದರು.

ಬರೀ ವಿದೇಶ ಪ್ರವಾಸ

ಕಾವ್ಯಾ ಗೌಡಗೆ ಪಬ್ಲಿಸಿಟಿ ಹುಚ್ಚು ಇದೆ. ಎಲ್ಲೇ ಹೋದರು ಜನ ನನ್ನ ಹತ್ತಿರ ಬರಬೇಕು ಮತ್ತು ತನ್ನ ಬಳಿ ಸೆಲ್ಫಿ ತೆಗೆದುಕೊಳ್ಳಬೇಕು ಅನ್ನೋ ಹುಚ್ಚು ಇದೆ. ಆಕೆ ತನ್ನ ಅತ್ತೆ-ಮಾವನ ಜತೆಯೂ ಚೆನ್ನಾಗಿರಲಿಲ್ಲ. ಯಾರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ. ಬರೀ ವಿದೇಶ ಪ್ರವಾಸ, ಮೋಜು-ಮಸ್ತಿ ಇದರಲ್ಲೇ ಕಾಲ ಕಳೆಯುತ್ತಿದ್ದಳು. ಆಕೆಯಿಂದ ಯಾವ ಸಂಪಾದನೆಯೂ ಇಲ್ಲ. ಎಲ್ಲವೂ ರೇವಣ್ಣ ಅವರು ಕೊಡುವ ದುಡ್ಡಿನಿಂದಲೇ ನಡೆಯುತ್ತಿದೆ. ಇಬ್ಬರು ಮಕ್ಕಳಿಗೆ ರೇವಣ್ಣ ಅವರು ಪ್ರತಿ ತಿಂಗಳು ತಲಾ 10 ಲಕ್ಷ ರೂ. ಕೊಡುತ್ತಾರೆ. ಅದೇ ಹಣದಲ್ಲಿ ಕಾವ್ಯಾ ಮತ್ತು ಆಕೆಯ ಗಂಡ ಮಜಾ ಮಾಡುತ್ತಾರೆ. ಆದರೆ, ನನ್ನ ಅಳಿಯ ತನ್ನ ಬಿಜಿನೆಸ್​ಗೆ ಬಳಸಿಕೊಳ್ಳುತ್ತಾನೆ ಎಂದರು.

ಯಾವ ರೀತಿ ಮಾಡೋದು ಅಂತಾ ಹೇಳಿಕೊಡುತ್ತಾರಂತೆ

ಕಾವ್ಯಾ ಮನೆ ಕಡೆ ತುಂಬಾ ಬಡವರು. ನಾನು ಈ ಮಾತನನ್ನು ಹೇಳಬಾರದು. ಕಾವ್ಯಾ ಮನೆಯವರು ಬನ್ನೇರುಘಟ್ಟ ಬಳಿ ಚಿಕನ್​ ಅಂಗಡಿ ಮತ್ತು ಹಂದಿ ಮಾಂಸದ ಅಂಗಡಿ ಇಟ್ಟಿದ್ದರಂತೆ. ಈಗಲೂ ಹಂದಿ ಮಾಂಸದ ಅಂಗಡಿ ಇದೆ ಎನ್ನುತ್ತಾರೆ. ಕಾವ್ಯಾ ಗೌಡ ಅವರು ಹಣ ಸಂಪಾದನೆ ಯಾವ ರೀತಿ ಮಾಡೋದು ಅಂತಾ ಹೇಳಿಕೊಡುತ್ತಾರಂತೆ. ಕಾವ್ಯಾಳ ಜನಪ್ರಿಯತೆ ನೋಡಿ ನನ್ನ ಮಗಳಿಗೆ ಹೊಟ್ಟೆ ಕಿಚ್ಚು ಬಂದಿಲ್ಲ. ನನ್ನ ಮಗಳನ್ನು ನಾನು ಆ ರೀತಿ ಬೆಳೆಸಿಲ್ಲ. ನಾನು ಕೂಡ 100 ಕೋಟಿ ರೂ. ಆಸ್ತಿಯ ಒಡೆಯ. ನನ್ನ ಬಳಿ 15 ಕಾರುಗಳಿವೆ. ನೇಮು-ಫೇಮು ನಮಗೆ ಅವಶ್ಯಕತೆ ಇಲ್ಲ. ಹೆಸರಿದ್ದರೇನು ಗುಣ ಹಾಗೂ ಸಂಸ್ಕಾರ ಮುಖ್ಯ. ನಾನದನ್ನು ನನ್ನ ಮಗಳಿಗೆ ಕಲಿಸಿದ್ದೇನೆ. ಸೆಲೆಬ್ರಿಟಿ ಅಂದ ಕಾರಣಕ್ಕೆ ಆಕೆ ಮಾಡಿದ್ದೇ ಸರಿ ಇರುತ್ತಾ? ಆಕೆಯ ಗುಣ ಸ್ವಲ್ಪವೂ ಸರಿಯಿಲ್ಲ ಎಂದು ರವಿಕುಮಾರ್​ ಹೇಳಿದ್ದಾರೆ.

ಕಾವ್ಯಾ ಮಾಡಿದ ಆರೋಪ ಏನು?

ಮೊನ್ನೆ (ಜ.26) ನಮ್ಮ ಮೇಲೆ ಹಲ್ಲೆ ಮಾಡಲಾಗಿದೆ. ಅಲ್ಲದೆ, ನನ್ನ ಗಂಡನಿಗೆ ಚಾಕುವಿನಿಂದ ಭುಜಕ್ಕೆ ಹಿರಿಯಲಾಗಿದೆ. ನನ್ನ ಮೇಲೆ ದೊಣ್ಣೆಯಿಂದ ಥಳಿಸಲಾಗಿದೆ. ಇದಿಷ್ಟೇ ಅಲ್ಲದೆ, ಅತ್ಯಾಚಾರದ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ನಂದೀಶ್ ಅವರ ಪತ್ನಿ ಪ್ರೇಮಾ, ಪ್ರಿಯಾ, ಹಾಗೂ ರವಿ ಕುಮಾರ್ ಎಂಬುವರ ವಿರುದ್ಧ ಕಾವ್ಯಾ ಅವರು ದೂರು ದಾಖಲಿಸಿದ್ದಾರೆ. 

ಕಾವ್ಯಾ ಹೇಳಿದ ಮಾತೇನು?

ಇನ್ನು ಈ ಘಟನೆಯ ಬಗ್ಗೆ ಮಾಧ್ಯಮಗಳಗೊಂದಿಗೆ ಮಾತನಾಡಿದ ಕಾವ್ಯ ಗೌಡ, ತಪ್ಪು ತಿಳುವಳಿಕೆ ಮತ್ತು ಸುಳ್ಳು ಆರೋಪಗಳೇ ಈ ಘರ್ಷಣೆಗೆ ಕಾರಣವಾಯಿತು ಎಂದರು. ನಾವು ಯಾವುದೇ ತಪ್ಪು ಮಾಡಿಲ್ಲ. ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಗಲಾಟೆಯ ಸಮಯದಲ್ಲಿ ನನಗೆ ಬೆದರಿಕೆಗಳನ್ನು ಹಾಕಲಾಗಿದೆ. ಮನೆಯ ಸಿಸಿಟಿವಿ ಕ್ಯಾಮೆರಾಗಳನ್ನು ನೋಡಿದರೆ ಸತ್ಯಾಂಶ ಬಯಲಾಗುತ್ತದೆ ಎಂದು ಹೇಳಿದ್ದಾರೆ. ಇದೇ ವೇಳೆ ತನ್ನ ಪತಿಯ ಚೇತರಿಕೆ ಮತ್ತು ಮಗುವಿನ ಸುರಕ್ಷತೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾವ್ಯಾ, ಕಾನೂನು ವ್ಯವಸ್ಥೆಯಲ್ಲಿ ನನಗೆ ಸಂಪೂರ್ಣ ನಂಬಿಕೆ ಇದ್ದು, ಕಾನೂನಿನ ಮೂಲಕ ನ್ಯಾಯ ಬಯಸುತ್ತಿರುವುದಾಗಿ ಹೇಳಿದರು.
ಅಂದಹಾಗೆ, ಕಾವ್ಯ ಗೌಡ ಕನ್ನಡ ದೂರದರ್ಶನದಲ್ಲಿ ಪ್ರಸಿದ್ಧ ಮುಖವಾಗಿದ್ದು, ರಾಧಾ ರಮಣ ಮತ್ತು ಗಾಂಧಾರಿಯಂತಹ ಧಾರಾವಾಹಿಗಳ ಮೂಲಕ ಖ್ಯಾತಿಗೆ ಏರಿದರು. ಅವರು 2021 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ಸೋಮಶೇಖರ್ ಅವರನ್ನು ವಿವಾಹವಾದರು. ದಂಪತಿಗೆ ಒಂದು ಹೆಣ್ಣು ಮಗು ಇದೆ. ರಾಧಾ ರಮಣ, ಗಾಂಧಾರಿ, ಮೀರಾ ಮಾಧವ ಸೇರಿದಂತೆ ಹಲವು ಧಾರವಾಹಿಗಳಲ್ಲಿ ಕಾವ್ಯಾ ಗೌಡ ನಟಿಸಿದ್ದಾರೆ.