Rupali Ganguly (ಚಿತ್ರ X) 
ಕಿರುತೆರೆ

ಗುಲಾಬಿ ಆನೆ ಚಂಚಲ್ ಸಾವು: ಪ್ರಧಾನಿ ಮೋದಿಗೆ ಪತ್ರ ಬರೆದ ನಟಿ ರೂಪಾಲಿ ಗಂಗೂಲಿ! Rupali Ganguly

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಗುಲಾಬಿ ಫೋಟೋಶೂಟ್​ನಲ್ಲಿ ಭಾಗವಹಿಸಿದ್ದ ಆನೆ ಚಂಚಲ್​ ಸಾವು
  • ಕಿರುತೆರೆ ನಟಿ ರೂಪಾ ಗಂಗೂಲಿ ಪ್ರಾಣಿ ಹಕ್ಕುಗಳ ಪರ ಧ್ವನಿ ಎತ್ತಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ
  • ಈ ಘಟನೆಯು ಭಾರತ ಮತ್ತು ವಿದೇಶಗಳಲ್ಲಿನ ಜನರ ಮನಸ್ಸಿಗೆ ತೀವ್ರ ಅಘಾತವನ್ನುಂಟು ಮಾಡಿದೆ
  • ಆನೆಗಳ ಶೋಷಣೆಯ ವಿರುದ್ಧ ಸಾರ್ವಜನಿಕರು ಎಷ್ಟು ಬಲವಾದ ಭಾವನೆ ಹೊಂದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ
ರಾಜಸ್ಥಾನ: ಇತ್ತೀಚೆಗೆ ರಾಜಸ್ಥಾನದ ಜೈಪುರದಲ್ಲಿ ಗುಲಾಬಿ ಫೋಟೋಶೂಟ್​ನಲ್ಲಿ ಭಾಗವಹಿಸಿದ್ದ ಆನೆ ಚಂಚಲ್​ ಸಾವನ್ನಪ್ಪಿದ್ದು, ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಆದಾಗ್ಯೂ, ಕಿರುತೆರೆ ನಟಿ ರೂಪಾ ಗಂಗೂಲಿ (Rupali Ganguly) ಪ್ರಾಣಿ ಹಕ್ಕುಗಳ ಪರ ಧ್ವನಿ ಎತ್ತಿದ್ದು, ಆನೆ ಸವಾರಿಯ ಬಗ್ಗೆ ಕ್ರಮಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಆನೆಯ ಸಾವಿನ ಬಗ್ಗೆ ಮರುಕ ವ್ಯಕ್ತಪಡಿಸಿದ ರುಪಾಲಿ ಗಂಗೂಲಿ ವನ್ಯಜೀವಿ ಸಂರಕ್ಷಣೆಯ ಕುರಿತು ತಮಗಿರುವ ಬದ್ಧತೆಯನ್ನು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪತ್ರದಲ್ಲೇನಿತ್ತು?

ಈ ಘಟನೆಯು ಭಾರತ ಮತ್ತು ವಿದೇಶಗಳಲ್ಲಿನ ಜನರ ಮನಸ್ಸಿಗೆ ತೀವ್ರ ಅಘಾತವನ್ನುಂಟು ಮಾಡಿದೆ. ಆನೆಗಳ ಶೋಷಣೆಯ ವಿರುದ್ಧ ಸಾರ್ವಜನಿಕರು ಎಷ್ಟು ಬಲವಾದ ಭಾವನೆ ಹೊಂದಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ. ವನ್ಯ ಜೀವಿ ದಿನದಂದು ನೀವು ಪ್ರಾಣಿಗಳ ರಕ್ಷಣೆಯ ಬಗ್ಗೆ ಹಂಚಿಕೊಂಡಿದ್ದೀರಿ. ಅದೇ ಗೌರವದಿಂದ ನಾನು ನಿಮ್ಮಲ್ಲಿ ವಿನಂತಿಸುವುದೇನೆಂದರೆ, ಇಂಡೋನೇಷ್ಯಾ ಈಗಾಗಲೇ ಮಾಡಿದಂತೆ ಭಾರತದಲ್ಲೂ ಎಲ್ಲಾ ಆನೆ ಸವಾರಿಗಳನ್ನು ರದ್ದುಗೊಳಿಸಬೇಕು. ನಮ್ಮ ರಾಷ್ಟ್ರೀಯ ಪರಂಪರೆಯ ಪ್ರಾಣಿಯಾದ ಆನೆಯನ್ನು ಇಂತಹ ಕ್ರೂರ ಪ್ರದರ್ಶನಗಳಿಗೆ ಬಳಸುವುದನ್ನು ತಪ್ಪಿಸಲು ರೋಬೋಟಿಕ್ ಆನೆಗಳು, ಅಲಂಕೃತ ಎಲೆಕ್ಟ್ರಿಕ್ ವಾಹನಗಳು ಮತ್ತು ಇತರ ಪ್ರಾಣಿ-ಮುಕ್ತ ಪರ್ಯಾಯಗಳನ್ನು ಬಳಸಲು ಉತ್ತೇಜಿಸಬೇಕು ಎಂದು ಬರೆದಿದ್ದಾರೆ.

ಅಮೆರ್ ಕೋಟೆಯಂತಹ ಪ್ರವಾಸಿ ತಾಣಗಳಲ್ಲಿ ಕ್ರೌರ್ಯದ ಬಗ್ಗೆ ಕಳವಳ

ಆನೆ ಚಂಚಲ್​ ಸಾವು ಕೇವಲ ಆಕಸ್ಮಿಕವಲ್ಲ. ಬದಲಾಗಿ ಆನೆಯ ಮಾಲೀಕ ಸದ್ದಿಕ್ ಖಾನ್ ಅವರ ನಿರ್ಲಕ್ಷ್ಯದ ಭಾಗವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು. ಈ ಹಿಂದೆ ಮಾಲ್ಟಿ ಎಂಬ ಹೆಸರಿನ ಮತ್ತೊಂದು ಆನೆಯೂ ಇವರ ವಶದಲ್ಲಿತ್ತು. ಆ ಆನೆಯನ್ನು ಜೈಪುರದ ಪ್ರಸಿದ್ಧ ಅಮೇರ್ ಕೋಟೆಯಲ್ಲಿ ಪ್ರವಾಸಿಗರ ಸವಾರಿಗಾಗಿ ಬಳಸಲಾಗುತ್ತಿತ್ತು. ಆ ಸಮಯದಲ್ಲಿ ಆನೆಯ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಈ ವಿಷಯದಲ್ಲಿ ಪೆಟಾ (PETA) ಇಂಡಿಯಾ ಮಧ್ಯಪ್ರವೇಶಿಸಿ, ಆನೆಯನ್ನು ಆತನಿಂದ ರಕ್ಷಿಸಿ ಅಭಯಾರಣ್ಯಕ್ಕೆ (Sanctuary) ಸ್ಥಳಾಂತರಿಸುವಂತೆ ಮಾಡಿತ್ತು ಎಂದರು.
ಗುಲಾಬಿ ಬಣ್ಣದ ಫೋಟೋಶೂಟ್ ತಕ್ಷಣದ ಆಕ್ರೋಶವನ್ನು ಹುಟ್ಟುಹಾಕಿದರೂ, ಪ್ರವಾಸೋದ್ಯಮದಲ್ಲಿ ಆನೆಗಳು ಎದುರಿಸುವ ತೊಂದರೆಗಳು ಹೆಚ್ಚಾಗಿ ಗಮನಕ್ಕೆ ಬರುವುದಿಲ್ಲ. ಆದಾಗ್ಯೂ, ಅವು ಕೆಲಸ ಮಾಡದೇ ಇದ್ದಾಗ ಅವುಗಳನ್ನು ಸರಪಳಿಯಿಂದ ಬಂಧಿಸಲಾಗುತ್ತದೆ ಮತ್ತು ಶಸ್ತ್ರಾಸ್ತ್ರಗಳನ್ನು ಬಳಸಿ ನಿಯಂತ್ರಿಸಲಾಗುತ್ತದೆ. ಇದು ತೀವ್ರ ದೈಹಿಕ ಯಾತನೆ ಮತ್ತು ಮಾನಸಿಕ ಆಘಾತಕ್ಕೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಸಾರ್ವಜನಿಕ ಆಕ್ರೋಶ

ಆನೆಗಳು ಅತ್ಯಂತ ಬುದ್ಧಿವಂತ ಮತ್ತು ಸಾಮಾಜಿಕ ಪ್ರಾಣಿಗಳು. ಅವುಗಳನ್ನು ನೈಸರ್ಗಿಕ ಪರಿಸರದಿಂದ ದೂರವಿಟ್ಟು, ಜನನಿಬಿಡ ಪ್ರದೇಶಗಳಲ್ಲಿ ಕಟ್ಟಿಹಾಕುವುದು ಅಥವಾ ಗದ್ದಲದ ನಡುವೆ ಸವಾರಿಗಾಗಿ ಬಳಸುವುದು ಅವುಗಳಲ್ಲಿ ತೀವ್ರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಈ ಕಳವಳವನ್ನು ಪ್ರತಿಧ್ವನಿಸಿದ ಗಂಗೂಲಿ, ಕೇರಳದಂತಹ ಪ್ರದೇಶಗಳು ಈಗಾಗಲೇ ಬದಲಾವಣೆಯನ್ನು ಸ್ವೀಕರಿಸಲು ಪ್ರಾರಂಭಿಸಿವೆ. ಅತಿರಪಿಲ್ಲಿ ಜಲಪಾತಗಳ ಬಳಿಯಿರುವ ತಂಬೂರ್ಮೋಳಿ ಬಟರ್‌ಫ್ಲೈ ಗಾರ್ಡನ್‌ನಲ್ಲಿ ಯಾಂತ್ರಿಕ ಆನೆ ಸಫಾರಿ ಅನುಭವಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.

ಚಂಚಲ್​ ಸಾವು!

65 ವರ್ಷದ ಚಂಚಲ್ (ಆನೆ) ಫೆಬ್ರವರಿ 26 ರಂದು ಆನೆ ಸಾವನ್ನಪ್ಪಿದೆ ಎಂದು ಮಾಲೀಕ ಶಾದಿಕ್ ಖಾನ್ ಖಚಿತಪಡಿಸಿದ್ದಾರೆ. ಈ ವಿವಾದದ ಕೇಂದ್ರಬಿಂದು ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ ವಿರುದ್ಧ ಯಾವುದೇ ನೆಪ ನೀಡಿದರೂ ಕಾನೂನು ಕ್ರಮ ಕೈಗೊಳ್ಳಬೇಕು. ಎಂದು ಸಾರ್ವಜನಿಕರು ಅರಣ್ಯ ಇಲಾಖೆ ಕರೆ ನೀಡಿದ್ದಾರೆ (ಏಜೆನ್ಸೀಸ್​).