ನಾಮಿನೇಟ್ ವಿಚಾರಕ್ಕೆ ಕಿರಣ್ ಶಾಸ್ತ್ರಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಜೊತೆ ವಾಗ್ವಾದ.
ಅಸಹ್ಯದಲ್ಲಿ ಅಸಹ್ಯ ಎಂದು ನಾಮಿನೇಟ್ ಮಾಡಿದ ಗಾನವಿ, ಕಿರಣ್ ಶಾಸ್ತ್ರಿ ಕಿಡಿ.
ಕಿರಣ್ ಶಾಸ್ತ್ರಿಗೆ ಮರ್ಯಾದೆ ನೀಡುವ ಬಗ್ಗೆ ಪಾಠ ಮಾಡಿದ ಪ್ರಶಾಂತ್.
ಬಿಗ್ಬಾಸ್ ಮನೆಗೆ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಹೈಜಾಕರ್ಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಗಾನವಿ ಅವರು ಯಶಸ್ ಮತ್ತು ಕಿರಣ್ ಅವರ ಸ್ಥಾನ ಕಿತ್ತುಕೊಂಡಿದ್ದರೆ, ಪ್ರಶಾಂತ್ ಅವರು ಲಿಖಿತ್ ಮತ್ತು ಮಂಜನ ಸ್ಥಾನ ಹೈಜಾಕ್ ಮಾಡಿಕೊಂಡರು. ಸದ್ಯ ರಿಲೀಸ್ ಆಗಿರುವ ಪ್ರೋಮೋದಲ್ಲಿ ನಾಮಿನೇಷನ್ ವಿಚಾರಕ್ಕೆ ಕಿರಣ್ ಶಾಸ್ತ್ರಿ ಮತ್ತು ಇತರ ಸ್ಪರ್ಧಿಗಳ ನಡುವೆ ತೀವ್ರ ವಾಗ್ವಾದ ನಡೆದಿದೆ. ಮೂವರು ಸ್ಪರ್ಧಿಗಳು ಎಂಟ್ರಿಯಾದ ಮೊದಲ ದಿನವೇ ಮನೆಯಲ್ಲಿ ಮಾತಿನ ಚಕಮಕಿ ಜೋರಾಗಿದ್ದು, ಮುಂದೇನಾಗುತ್ತೋ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.
ಮನೆಯಲ್ಲಿ ಅರ್ಹರಲ್ಲದ ಸದಸ್ಯರ ಭಾವಚಿತ್ರವನ್ನು ಸುಟ್ಟು ಅದಕ್ಕೆ ತಕ್ಕ ಕಾರಣವನ್ನು ನೀಡುವ ಮೂಲಕ ನಾಮಿನೇಟ್ ಮಾಡಬೇಕಾದ ಚಟುವಟಿಕೆಯನ್ನು ಬಿಗ್ಬಾಸ್ ಕೊಟ್ಟಿದ್ದರು. ಈ ವೇಳೆ ಗಗನ್, ಪ್ರಶಾಂತ್ ಹಾಗೂ ಗಾನವಿ ಸೇರಿದಂತೆ ಹಲವರು ಕಿರಣ್ ಶಾಸ್ತ್ರಿ ಹೆಸರನ್ನು ನಾಮಿನೇಟ್ ಮಾಡಿ ಬದಲಾದವರಂತೆ ನಟಿಸುತ್ತಿದ್ದೀರಿ ಎಂದು ವಾಗ್ವಾದಕ್ಕಿಳಿದರು. ಈ ವೇಳೆ ಗಾನವಿ ಕಿರಣ್ ಅವರನ್ನು ಅಸಹ್ಯ ಎಂದಿರುವುದು ಸಾಕಷ್ಟು ಟೀಕೆಗೆ ಕಾರಣವಾಗಿದೆ.
ಬಿಗ್ಬಾಸ್ 12ರಲ್ಲಿ ರಿಷಾ ಗೌಡ ಅವರು ಧ್ರುವಂತ್ ಅವರಿಗೆ ವ್ಯಾ ಎಂದಿದ್ದ ವಿಚಾರವನ್ನೇ ಮುಂದಿಟ್ಟುಕೊಂಡು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದರು. ಅವರ ಪೋಷಕರು, ಊರಿನವರು ಬಿಗ್ಬಾಸ್ ನೋಡುತ್ತಾರೆ. ಅವರ ಮನಸ್ಸಿಗೆ ಇದೆಲ್ಲ ಹೇಗಾಗಬೇಡ ಎಂದು ಕಿಡಿಕಾರಿದ್ದರು. ಸದ್ಯ ಬಿಗ್ಬಾಸ್ 13ರಲ್ಲಿ ಗಾನವಿ ಅವರು ಕಿರಣ್ ಅವರಿಗೆ ಅಸಹ್ಯ ಎಂದು ಬಳಕೆ ಮಾಡಿರುವುದು ಸರಿಯಲ್ಲ ಎನ್ನುವುದು ವೀಕ್ಷಕರ ದೂರಾಗಿದೆ. ಹೀಗಾಗಿ ಸುದೀಪ್ ಅವರು ಈ ಬಗ್ಗೆ ಕ್ಲಾಸ್ ತೆಗೆದುಕೊಳ್ಳುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇತರರ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ತಂದ್ ಹಾಕಿ ತಮಾಷೆ ಮಾಡುವ ಸ್ವಭಾವ ನನಗೆ ಒಂಚೂರು ಇಷ್ಟವಿಲ್ಲ. ಅಸಹ್ಯದಲ್ಲಿ ಅಸಹ್ಯ ಅಂತಾನೆ ನಿಮ್ಮನ್ನ ನಾಮಿನೇಟ್ ಮಾಡ್ತಿದ್ದೇನೆ ಎಂದು ಗಾನವಿ ಹೇಳಿದರು. ನನ್ನನ್ನು ಜಡ್ಜ್ ಮಾಡಲು ನಿಮಗೇನು ಯೋಗ್ಯತೆ ಇದೆ?" ಎಂದು ಕಿರಣ್ ಶಾಸ್ತ್ರಿ ಹೇಳಿದರು. ಮಹಿಳೆಯರಿಗೆ ಹೋಗಿ, ಬನ್ನಿ, ನೀವು ಮೇಡಂ ಅಂತ ಹೇಳಬೇಕು. ಹೋಗು, ನೀನು ಅಲ್ಲ, ಕೇಳಿಸ್ಕೋ ಎಂದು ಪ್ರಶಾಂತ್ ಗೌಡ ಅವರು ಕಿರಣ್ ಶಾಸ್ತ್ರಿ ವಿರುದ್ಧ ಕೆಂಡಕಾರಿರುವುದು ಪ್ರೋಮೋದಲ್ಲಿದೆ.
ಒಟ್ಟಾರೆಯಾಗಿ ಏನೇ ಆದರೂ ಸಹ ಬಿಗ್ಬಾಸ್ ಮನೆಯಲ್ಲಿ ಅಸಹ್ಯ ಎನ್ನುವ ಪದ ಬಳಕೆ ಜೊತೆಗೆ ಶಾಸ್ತ್ರಿ ಅವರೇ ಮನೆ ಮಂದಿಗೆ ಐವತ್ತು ಪೈಸೆಗೆ ಬೆಲೆ ಇಲ್ಲ ಎಂದಿದ್ದಕ್ಕೆ ಸುದೀಪ್ ಪದ ಬಳಕೆ ಮಾಡಿದ್ದರು. ಇಷ್ಟಾದರೂ ಮಾತಿನ ಗಡಿ ಮೀರಿ ಮಾತನಾಡುತ್ತಿರುವ ಸ್ಪರ್ಧಿಗಳಿಗೆ ಕಿಚ್ಚ ಕ್ಲಾಸ್ ತೆಗೆದುಕೊಳ್ಳುತ್ತಾರಾ ಎನ್ನುವುದನ್ನು ಕಾದು ನೊಡಬೇಕಾಗಿದೆ.
ವೈಲ್ಡ್‌ಕಾರ್ಡ್ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟ ಮೊದಲ ದಿನವೇ ನಾಮಿನೇಷನ್‌ನಲ್ಲಿ ದೊಡ್ಡ ಟ್ವಿಸ್ಟ್ ನಡೆದಿದೆ.ಈ ವಾರ ಅತಿ ಹೆಚ್ಚು ನಾಮಿನೇಟ್ ಆಗಿರುವುದು ಕಿರಣ್ ಶಾಸ್ತ್ರಿ. ಗಗನ್ ಚಿನ್ನಪ್ಪ, ಗಾನವಿ, ಪ್ರಶಾಂತ್, ಸಂಗೀತಾ ಭಟ್, ಮಂಜುನಾಥ್, ಸೌಂದರ್ಯ ಶೆಟ್ಟಿ, ಲಿಖಿತ್ ಗೊಂಡಿ ಮತ್ತು ಜಗದೀಶ್ ಸೇರಿದಂತೆ ಒಟ್ಟು 8 ಸ್ಪರ್ಧಿಗಳು ಕಿರಣ್ ಶಾಸ್ತ್ರಿ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಕಿರಣ್ ಶಾಸ್ತ್ರಿ ನಂತರ ಹೆಚ್ಚು ವೋಟ್ಸ್ ಪಡೆದವರು ಧನುಷ್. ಯಶಸ್ ಕೃಷ್ಣ, ಗಗನ್ ಚಿನ್ನಪ್ಪ, ಸೌಂದರ್ಯ, ಕಾವ್ಯ ಗೌಡ ಮತ್ತು ಜಗದೀಶ್ ಧನುಷ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇನ್ನು ಲಿಖಿತ್ ಅವರನ್ನು ಯಶಸ್ ಕೃಷ್ಣ, ಸೋನಿಕಾ, ಆಸಿಯಾ ಫಿರ್ದೋಸ್ ಮತ್ತು ಸಂಗೀತಾ ಭಟ್ ನಾಮಿನೇಟ್ ಮಾಡಿದ್ದಾರೆ. ಒಟ್ಟಾರೆ ಈ ವಾರ ನಾಮಿನೇಷನ್ ಪಟ್ಟಿಯಲ್ಲಿ ಕಿರಣ್ ಶಾಸ್ತ್ರಿ, ಧನುಷ್, ಲಿಖಿತ್ ಗೊಂಡಿ, ಮಂಜುನಾಥ್, ಯಶಸ್ ಮತ್ತು ಸಂಗೀತಾ ಭಟ್ ಡೇಂಜರ್ ಝೋನ್‌ನಲ್ಲಿದ್ದಾರೆ, (ಏಜೆನ್ಸೀಸ್).