ಕಿರುತೆರೆ

Bigg Boss ಮನೆಗೆ ಎಂಟ್ರಿಯಾಗುತ್ತಲೇ ಗಾನವಿ ಹಾವಳಿ; ಯಶಸ್ ಮತ್ತು ಕಿರಣ್ ಸ್ಥಾನ ಹೈಜಾಕ್

  • ಬಿಗ್ ಬಾಸ್ ಸೀಸನ್ 13ರಲ್ಲಿ ಹೈಜಾಕರ್ ಆಗಿ ಹಳ್ಳಿ ಪವರ್​ನ ಗಾನವಿ ಎಂಟ್ರಿ

  • ಯಶಸ್ ಮತ್ತು ಕಿರಣ್ ಶಾಸ್ತ್ರಿ ಸ್ಥಾನವನ್ನು ಹೈಜಾಕ್ ಮಾಡಿ, ಫ್ಲೈಟ್​ಗೆ ಕಳುಹಿಸಿದ ಗಾನವಿ

  • ಚೆನ್ನಾಗ್ ಅವ್ರೇ ಎಂದ ಯಶಸ್​ಗೆ ನೀವು ಓವರ್ ಡ್ರ್ಯಾಮಾಟಿಕ್​ ಎನಿಸುತ್ತೀರಿ ಎಂದ ಗಾನವಿ

Bigg Boss Kannada13: ಬಿಗ್​ಬಾಸ್​ ಮನೆಯಿಂದ ಇಬ್ಬರು ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ವೈಷ್ಣವಿ ಕೌಂಡಿಲ್ಯ ಮತ್ತು ಅವಿನಾಶ್​ ಅವರು ಶನಿವಾರ ಎಕ್ಸಿಟ್​ ಆದರು. ಅವರು ಅತ್ತ ಸಾಗುತ್ತಲೇ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳು ಬಿಗ್​ಬಾಸ್ ಮನೆಗೆ ಬಂದಿದ್ದಾರೆ. ಗಾನವಿ ಗೌಡ, ಸೋನಿಕಾ ಗೌಡ ಹಾಗೂ ಕಾಮಿಡಿಯನ್​ ಪ್ರಶಾಂತ್​ ಗೌಡ. ಸದ್ಯ ರಿಲೀಸ್ ಆದ ಪ್ರೋಮೋದಲ್ಲಿ ದೊಡ್ಮನೆಗೆ ಗಾನವಿ ಎಂಟ್ರಿಯಾಗಿದ್ದಾರೆ.

ಹಳ್ಳಿ ಪವರ್​ ಶೋನಲ್ಲಿ ಇದ್ದ ಗಾನವಿ ಅವರು ಸದ್ಯ ಬಿಗ್​ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದಾರೆ. ಬಿಗ್​ಬಾಸ್​ನಲ್ಲಿ ಅವರು ಒಬ್ಬ ಟಫ್​ ಸ್ಪರ್ಧಿಯಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪ್ರೊಮೋದಲ್ಲಿ ಏನಿದೆ?

ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಡುತ್ತಲೇ ಗಾನವಿ ಇಬ್ಬರ ಸ್ಥಾನ ಹೈಜಾಕ್​ ಮಾಡಿದ್ದಾರೆ. ಗಾನವಿಯನ್ನು ಕಂಡ ಯಶಸ್​​ ಸಖತ್​ ಆಗಿ ಅವ್ರೇ ಎಂದ ಯಶಸ್​ಗೆ ಗಾನವಿ ಗುನ್ನಾ ಕೊಟ್ಟಿದ್ದಾರೆ.

ಬಿಗ್​ಬಾಸ್ ಕೊಟ್ಟ ಟಾಸ್ಕ್​ ಪ್ರಕಾರ ಯಶಸ್ ಮತ್ತು ಕಿರಣ್​ ಸ್ಥಾನವನ್ನು ಹೈಜಾಕ್​ ಮಾಡಿ ಮತ್ತೆ ಫ್ಲೈಟ್​ಗೆ ಕಳುಹಿಸುವಂತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯಶಸ್ ಮತ್ತು ಕಿರಣ್​ ಅವರನ್ನು ಉದ್ದೇಶಿಸಿ ಮಾತನಾಡಿದ ಗಾನವಿ, ನೀವು ತುಂಬಾ ಓವರ್ ಡ್ರಾಮ್ಯಾಟಿಕ್ ಆಗಿ ಕಾಣಿಸುತ್ತೀರಿ ಎಂದು ಯಶಸ್​ಗೆ ಹೇಳಿದ್ದಾರೆ. ಇನ್ನೂ ಕಿರಣ್​ಗೆ ಅಕ್ಕ ಅಕ್ಕ ಎಂದುಕೊಂಡು ನೀವು ಮಾಡುವುದನ್ನು ನೋಡಿದರೆ ಕಿರಿಕಿರಿ ಉಂಟಾಗುತ್ತದೆ. ಮನೆಯಲ್ಲಿ ನೀವು ಬೇರೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂದು ಇಬ್ಬರ ಸ್ಥಾನ ಕಿತ್ಕೊಂಡು ಫ್ಲೈಟ್​ಗೆ ಕಳುಹಿಸಿದ್ದಾರೆ.

ಯಾರು ಈ ಗಾನವಿ

ಹಳ್ಳಿ ಪವರ್ ಶೋ ನಲ್ಲಿಯೂ ಗಾನವಿ ಸಾಕಷ್ಟು ಸದ್ದು ಮಾಡಿದ್ದರು. ಅವರನ್ನು ಘಾಟಿ ಗಾನವಿ ಎಂತಲೇ ಕರೆಯಲಾಗುತ್ತಿತ್ತು. ಮೊದಲ ರನ್ನರ್​ ಅಪ್​ ಆಗಿ ಗಾನವಿ ಹೊರಹೊಮ್ಮಿದ್ದರು. ಗಾನವಿ ಅವರ ಕಾನ್ಫಿಡೆಂಟ್​ ಹಾಗೂ ವ್ಯಕ್ತಿತ್ವವೂ ನೇರ ಮತ್ತು ದಿಟ್ಟವಾಗಿದ್ದು, ಬಿಗ್​ಬಾಸ್​ ಮನೆಯಲ್ಲಿ ಮತ್ತಷ್ಟು ಹಗ್ಗ-ಜಗ್ಗಾಟ, ಪ್ರೇಮ್​ ಕಹಾನಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ.

ಯಾರ್ಯಾರು ಎಂಟ್ರಿ

ಘಾಟಿ ಗಾನವಿ ಸದ್ಯ ಹೈಜಾಕರ್ ಗಾನವಿ ಆಗಿದ್ದಾರೆ. ಇವರೊಂದಿಗೆ ಕಾಮಿಡಿಯನ್​ ಪ್ರಶಾಂತ್​ ಗೌಡ ಎಂಟ್ರಿ ಕೊಟ್ಟಿದ್ದಾರೆ. ಯಾರು ಏನೇ ಹೇಳಲಿ ನಾನು ಕಾಮಿಡಿ ಮಾಡುತ್ತೇನೆ ಎಂದು ಹೇಳಿರುವ ಪ್ರಶಾಂತ್​ ಎಂಟರ್ಟೈನ್​ಮೆಂಟ್ ಮರೆಯಾಗಿರುವ ಮನೆಯಲ್ಲಿ ಯಾವ ಮಟ್ಟಕ್ಕೆ ಮನರಂಜನೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

ಸೋನಿಕಾ ಗೌಡ

ನಟಿ ಹಾಗೂ ಉದ್ಯಮಿ ಎನಿಸಿಕೊಂಡಿರುವ ಸೋನಿಕಾ ಗೌಡ ಬಿಗ್​ಬಾಸ್ ಮನೆಗೆ ಎಂಟ್ರಿಯಾಗಲು ಸಜ್ಜಾಗಿದ್ದಾರೆ. ಬಿಗ್​ಬಾಸ್​ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮುಂದೆ ನಟನಾ ಲೋಕಕ್ಕೆ ಪ್ರವೇಶ ಪಡೆಯಬಹುದು ಎಂದು ಹೇಳಿದ್ದರು. ಸದ್ಯ ಮೂವರು ವೈಲ್ಡ್​ ಕಾರ್ಡ್​ ಸ್ಪರ್ಧಿಗಳ ಜೊತೆ ತಾಂಡವ್​ ರಾಮ್​ ಮತ್ತೆ ತಮ್ಮ ಬಿಗ್​ಬಾಸ್​ ಜರ್ನಿ ಮುಂದುವರೆಸಿತ್ತಿದ್ದು, ನಾಲ್ವರ ಆಟ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ, (ಏಜೆನ್ಸೀಸ್).