Rashika Shetty 
ಕಿರುತೆರೆ

ಬಿಗ್​ಬಾಸ್​ನಲ್ಲಿ ಐ ಲವ್ಯೂ ಎಂದಿದ್ದ ಸೂರಜ್​ಗೆ 'ನಾಟ್ ಇಂಟ್ರೆಸ್ಟೆಡ್' ಎಂದಿದ್ದ ರಾಶಿಕಾ ಶೆಟ್ಟಿ: ಈ ಕಹಿ ಘಟನೆನೇ ಕಾರಣನಾ?..Rashika Shetty

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ಹಿನ್ನೆಲೆ ಇಲ್ಲದೇ ಚಿತ್ರರಂಗಕ್ಕೆ ಕಾಲಿಟ್ಟ 'ಮನದ ಕಡಲು' ಬೆಡಗಿಯ ಭಾವುಕ ಮಾತು
  • ಅಪ್ಪ-ಅಮ್ಮ ಸ್ಥಾನ ಕೊಟ್ಟಿದ್ದೇ ಆದ್ರೆ ಆತ ಅದನ್ನು ಉಳಿಸ್ಕೊಂಡಿಲ್ಲ ಎಂದು ರಾಶಿಕಾ ಭಾವುಕ
  • ಪೋಷಕರ ಕಷ್ಟ ನೋಡಿ ಬೆಳೆದ ನಾನು ಜೀವನದಲ್ಲಿ ಸ್ಟ್ರಾಂಗ್ ಆದೆ ಅದಕ್ಕೆ ಅವ್ರೇ ಕಾರಣ
Rashika Shetty: ಬಿಗ್​ಬಾಸ್ ಕನ್ನಡ ಸೀಸನ್​ 12(BiggBoss Kannada)ರ​ಲ್ಲಿ ರಾಶಿಕಾ ಶೆಟ್ಟಿ ಮತ್ತು ಸೂರಜ್ ಮಾತನಾಡುವ ಮಧ್ಯೆ ಐಲವ್ ಯೂ ಎಂದು ಸೂರಜ್ ಪ್ರಪೋಸ್ ಮಾಡಿದ್ದರು. ಆಗ ಆಕೆ 'ನಾಟ್ ಇಂಟ್ರಸ್ಟೆಡ್' ಎಂದು ನಗುತ್ತಲ್ಲೇ ತಿರಸ್ಕರಿಸಿಬಿಟ್ಟಿದ್ದರು..ಇದಕ್ಕೆ ಕಾರಣ ಏನು ಎನ್ನುವುದಕ್ಕೆ ಪೂರಕವಾಗಿ ಪಾಡ್​ಕಾಸ್ಟ್​ವೊಂದರಲ್ಲಿ ಅವರು ಹಂಚಿಕೊಂಡ ಕಹಿ ಘಟನೆಯೇ ಕಾರಣನಾ ಎಂಬ ಚರ್ಚೆಗಳು ಸದ್ಯ ಆಕೆಯ ಅಭಿಮಾನಿಗಳಲ್ಲಿ ಮೂಡಿದೆ.
ಸಿನಿಮಾ ಹಿನ್ನೆಲೆಯಿಂದ ಬಂದಿರದಂತಹ ರಾಶಿಕಾ ಶೆಟ್ಟಿ ಸಾಕಷ್ಟು ಕಷ್ಟವನ್ನು ಎದುರಿಸಿದ್ದರಂತೆ. ಚಿನ್ನದ ಚೈನ್ ಹಾಕೋಕೆ ಆಗೋಲ್ವ ಎಂದು ಅವಮಾನ ಮಾಡಿದ್ದರಂತೆ.. ಈ ಎಲ್ಲ ಸಮಸ್ಯೆ ಮಧ್ಯೆ ಆಕೆಗೆ ತನ್ನ ತಾಯಿ-ತಮ್ಮ ಹಾಗೂ ಅಪ್ಪ ಪ್ರಪಂಚವಂತೆ, ಬಾಯ್​ಫ್ರೆಂಡ್​​ನ್ನು ಸಹ ಹಾಗಯೇ ಟ್ರೀಟ್ ಮಾಡಿ, ಅಪ್ಪ-ಅಮ್ಮನ ಸ್ಥಾನ ಕೊಟ್ಟಿದ್ದೆ. ಆದ್ರೆ, ಉಳಿಸ್ಕೊಂಡಿಲ್ಲ ಎಂದು ಆರ್​ಜೆ ರಾಜೇಶ್​ ಅವರ ಪಾಡ್​​ಕಾಸ್ಟ್​​ನಲ್ಲಿ ಮಾತನಾಡಿದರು. ಇದರಲ್ಲಿ ತಮಗೆ ಪ್ರೀತಿ ಬಗ್ಗೆ ಇದ್ದ ದೃಷ್ಟಿಕೋನದ ಬಗ್ಗೆ ಹಾಗೂ ಬ್ರೇಕಪ್​ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ.

ಕಷ್ಟದಿಂದಲೇ ಸ್ಟ್ರಾಂಗ್ ಆದೆ

ನಾವು ಮಂಗಳೂರಿನಿಂದ ಮೈಸೂರಿಗೆ ಶಿಫ್ಟ್ ಆಗಿದ್ದೆವು. ಮನೆಯಲ್ಲಿ ತೀರಾ ಕಷ್ಟ ಇತ್ತು. ಅಪ್ಪ ಮನೆಯಲ್ಲೇ ಇದ್ರು ಇಲ್ಲ ಎಂದು ಅಮ್ಮ ಸಾಲಗಾರರಿಗೆ ಹೇಳುತ್ತಿದ್ದರು. ಅದನ್ನೆಲ್ಲ ನೋಡಿ ಬೆಳೆದ ನಾನು ಸ್ಟ್ರಾಂಗ್​ ಆದೆ. ಹೆಚ್ಚು ಖರ್ಚು ಮಾಡುತ್ತಿರಲಿಲ್ಲ. ಪ್ರತಿಯೊಂದನ್ನು ಸೇವ್ ಮಾಡಲು ನೋಡುತ್ತಿದ್ದೆ. ನಾನು ಹದಿನೆಂಟನೇ ವರ್ಷದವಳಿದ್ದಾಗಲೇ ಕೆಲಸಕ್ಕೆ ಹೋಗಲು ಶುರು ಮಾಡಿದೆ ಎಂದು ಹೇಳಿಕೊಂಡರು.

ಅಪ್ಪ-ಅಮ್ಮ ಅವನು ನನ್ನ ಪ್ರಪಂಚ

ಮುಂದುವರೆದು, ನಾನು 23 ವರ್ಷದವಳಿದ್ದಾಗ ಒಂದು ಶೋ ಮೂಲಕ ಒಬ್ಬರು ಪರಿಚಯವಾದರು. ಅವರನ್ನು ನಾನು ತೀರಾ ಹಂಚಿಕೊಂಡಿದ್ದೆ. ನನ್ನ ಸ್ವಭಾವನೇ ಹಾಗೆ, ಬಿಟ್ಟಿರಲಾಗದಷ್ಟು ಪ್ರೀತಿಸೋದು. ನನ್ನ ತಂದೆ-ತಾಯಿಯಿಬ್ಬರು ಎಂತಹ ಕಷ್ಟ ಕಾಲದಲ್ಲೂ ಒಬ್ಬರನೊಬ್ಬರು ಬಿಟ್ಟು ಕೊಡುತ್ತಿರಲಿಲ್ಲ. ಅವರ ಪ್ರೀತಿ ನೋಡಿ ಬೆಳೆದ ನಾನು ಅವರಂತೆ ಬದುಕಬೇಕು ಎಂದು ಆಶಿಸಿದವಳು. ನನಗೆ ಕುಟುಂಬ ಮತ್ತು ಅವನೇ ಪ್ರಪಂಚ. ಆಸ್ತಿ ಅಂತಸ್ತು ಬೇಡ. ಕೆಲಸ ಮುಗಿಸಿ ಬಂದ ಎಲ್ಲವನ್ನು ಹಂಚಿಕೊಳ್ಳುವಷ್ಟು ಸಲುಗೆ ಇರಬೇಕು ಎಂದು ಹೇಳುತ್ತ ಮುಂದುವರೆಸಿದರು.

ಅವನಿಗಾಗಿ ಸ್ವಾಭಿಮಾನನೇ ಬಿಟ್ಟೆ

ನಾನು ಆತನಿಗೆ ಅಪ್ಪ-ಅಮ್ಮನ ಸ್ಥಾನ ಕೊಟ್ಟಿದ್ದೆ. ಒಮ್ಮೆ ಆತ ಪ್ರೀತಿ ತಿರಸ್ಕರಿಸಿದ್ದ. ಆದರೂ ಜಗಳ ಇದ್ದಿದ್ದೇ ಎಂದು ನಾನು ಪದೇ ಪದೇ ಮಾತನಾಡಲು ಯತ್ನಿಸಿದೆ. ನನ್ನ ಸ್ವಾಭಿಮಾನವೇ ಬಿಟ್ಟು ಆಗಾಗ ಮೆಸೇಜ್ ಮಾಡ್ತಿದ್ದೆ ಮಾತನಾಡಿಸುತ್ತಿದ್ದೆ. ಸಂಬಂಧ ಉಳಿಸಿಕೊಳ್ಳೋಕೆ ಪ್ರಯತ್ನಿಸಿದೆ. ಆದ್ರೆ ಒಂದು ದಿನ ಬೇಡವೇ ಬೇಡ ಎಂದು ರಾಗ ಎಳೆದಾಗ ಸಾಕಿನ್ನು ಎಂದು ಒಪ್ಪಿಕೊಳ್ಳಬೇಕಾಯ್ತು ಎಂದು ಅವರು ಭಾವುಕರಾದ್ರು.

ಚಾಟಿಂಗ್ ಚಟಕ್ಕೆ ಪ್ರೀತಿ ಮಾಡ್ಬೇಡಿ

ಅಂದಿನಿಂದ ಯಾರೇ ನನ್ನನ್ನು ಪ್ರೀತಿಸುತ್ತಿದ್ದೀನಿ ಅಂತ ಹೇಳಿಕೊಂಡ್ರೆ ನಂಗೆ ನಂಬೋಕೆ ಸಾಧ್ಯಾನೆ ಇಲ್ಲ. ನಿಜಾನ ಇದು. ನಾನು ಹೇಗೆ ನಂಬೋದು ಅನಿಸುತ್ತದೆ. ಅವ್ರು ನನ್ನನ್ನು ಇಷ್ಟ ಪಡ್ತಿದ್ದಾರಾ? ಮೋಸ ಮಾಡ್ತಾರ? ಎನ್ನುವ ಅನುಮಾನಗಳು ನನ್ನನ್ನ ಕಾಡ್ತಿದೆ. ಪ್ರೀತಿಸಿದ್ರೆ ಚೆನ್ನಾಗಿರಬೇಕು. ಇಲ್ಲ ನಿಮ್ಮ ಚಾಟಿಂಗ್ ಚಟಕ್ಕೋ ಅಥವಾ ಲೋನ್ಲಿನೆಸ್ ಹೋಗ್ಬೇಕು ಅಂತನೋ ಬೇರೆಯವರಿಗೆ ಮೋಸ ಮಾಡೋದಲ್ಲ. ಹಾಗಿದ್ರೆ ಪ್ರೀತಿ ಮಾಡಲೇ ಬೇಡಿ ಎಂದು ರಾಶಿಕಾ ಶೆಟ್ಟಿ ಅತ್ತರು,(ಏಜೆನ್ಸೀಸ್).