ಮೀನಾಕ್ಷಿ ಚೌಧರಿ 
ಕಿರುತೆರೆ

ಒಟಿಟಿಗೆ ಮರಳಿದ ಮೀನಾಕ್ಷಿ : ಆರು ವರ್ಷಗಳ ಬಳಿಕ ವೆಬ್ ಸರಣಿಯಲ್ಲಿ ನಟಿಸಲಿದ್ದಾರೆ ನಟಿ

ಪ್ರಮುಖ ಮುಖ್ಯಾಂಶಗಳು

  • ಆನ್ ಲೈನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ತೆಲುಗು ನಟಿ
  • ಸಿದ್ದು ಜೊನ್ನಲಗಡ್ಡ ಗೆ ಜೋಡಿಯಾದ ಲಕ್ಕಿ ಭಾಸ್ಕರ್ ಹೀರೋಯಿನ್​
  • ಎರಡನೇ ಬಾರಿಗೆ ವೆಬ್ ಸರಣಿಯಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ
ಹರಿಯಾಣ ಮೂಲದ ನಟಿ ಮೀನಾಕ್ಷಿ ಚೌಧರಿ ಸದ್ಯ ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ತೆಲುಗಿನ ‘ಹಿಟ್ : ದ ಸೆಕೆಂಡ್ ಕೇಸ್’, ‘ಲಕ್ಕಿ ಭಾಸ್ಕರ್’, ‘ಸಂಕ್ರಾಂತಿಕಿ ವಸ್ತುನ್ನಾಂ’ ಮತ್ತು ತಮಿಳಿನ ‘ದ ಗ್ರೇಟೆಸ್ಟ್ ಆ್ ಆಲ್ ಟೈಮ್’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ತೆಲುಗು, ತಮಿಳು ಚಿತ್ರರಂಗಕ್ಕೆ ಕಾಲಿಡುವ ಮುಂಚೆ ಮೀನಾಕ್ಷಿ, ಆರಂಭದಲ್ಲಿ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು. ಹಿಂದಿಯ ‘ಅಪ್‌ಸ್ಟರ್ಟ್ಸ್’ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದ ಅವರು ಬಳಿಕ ‘ಔಟ್ ಆಫ್​ ಲವ್’ ಎಂಬ ವೆಬ್‌ಸರಣಿಯಲ್ಲಿ ನಟಿಸಿದ್ದರು. ಈ ಥ್ರಿಲ್ಲರ್ ಡ್ರಾಮಾವು ಎರಡು ಸರಣಿಯಲ್ಲಿ 10 ಎಪಿಸೋಡ್‌ಗಳಲ್ಲಿ ಪ್ರಸಾರವಾಗಿತ್ತು. ಈ ಸರಣಿಯಿಂದಲೇ ಮೀನಾಕ್ಷಿ ಮುನ್ನೆಲೆಗೆ ಬಂದು ದಕ್ಷಿಣ ಭಾರತ ಚಿತ್ರರಂಗಕ್ಕೆ ಆಗಮನಕ್ಕೆ ಕಾರಣವಾಗಿತ್ತು. ಇದೀಗ ಏಳು ವರ್ಷಗಳ ಬಳಿಕ ಮೀನಾಕ್ಷಿ ಚೌಧರಿ ಮತ್ತೆ ಒಟಿಟಿಗೆ ಮರಳುತ್ತಿದ್ದಾರೆ ಎಂಬುದು ವರದಿಯಾಗಿದೆ. ತೆಲುಗಿನಲ್ಲಿ ಇದು ನಿರ್ಮಾಣವಾಗಲಿದ್ದು, ವೆಂಕಿ ಅಟ್ಲೂರಿ ನಿರ್ದೇಶನ ಇರಲಿದೆ. ‘ಡಿಜೆ ಟಿಲ್ಲು’ ನಟ ಸಿದ್ದು ಜೊನ್ನಲಗಡ್ಡ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದು, ಅವರಿಗೆ ಮೀನಾಕ್ಷಿ ಜೋಡಿಯಾಗಲಿದ್ದಾರೆ. ಸಿದ್ದು ಹಾಗೂ ಮೀನಾಕ್ಷಿಗೆ ಇದು ಎರಡನೇ ವೆಬ್ ಸರಣಿಯಾಗಿದೆ. ಸಿದ್ದು ಈ ಹಿಂದೆ ತೆಲುಗಿನ ‘ಗ್ಯಾಂಗ್‌ಸ್ಟರ್’ ಸರಣಿಯಲ್ಲಿ ನಟಿಸಿದ್ದರು. ಇನ್ನು ಮೀನಾಕ್ಷಿ ಸದ್ಯ ನಾಗಾ ಚೈತನ್ಯ ನಟನೆಯ ‘ವೃಷಕರ್ಮ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. -ಏಜೆನ್ಸೀಸ್