ಸಿನಿವಾಣಿ

ನಾಳೆ ಥಿಯೇಟರ್​ಗಳಲ್ಲಿ ರಮ್ಮಿ ಆಟ ; ನಾಯಕನಾದ ನಿರೂಪಕ ರಾಘವ ಸೂರ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಆನ್​ಲೈನ್​ ಗೇಮ್​ ಆಡುತ್ತಾ ಜನ ಮೊದಲು ಟೈಮ್​ಪಾಸ್​ ಮಾಡುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆನ್​ಲೈನ್​ ಗೇಮ್​ಗಳೂ ವಂಚಕ ದಂಧೆಗಳಾಗಿ ಬದಲಾಗಿವೆ. ಆನ್​ಲೈನ್​ ಗೇಮ್​ಗಳು ಈಗಿನ ಯುವಜನತೆಯನ್ನು ಹೇಗೆ ಹಾಳು ಮಾಡುತ್ತಿವೆ? ಅದರಿಂದ ಏನೆಲ್ಲಾ ಅನಾಹುತಗಳಾಗುತ್ತಿವೆ ಎಂಬುದರ ಬಗ್ಗೆಯೇ ‘ರಮ್ಮಿ ಆಟ‘ ಎಂಬ ಸಿನಿಮಾ ಮೂಡಿಬಂದಿದ್ದು, ನಾಳೆ ರಾಜ್ಯಾದ್ಯಂತ ತೆರೆಗೆ ಬರಲಿದೆ.

ಉಮರ್​ ಷರೀಫ್​ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಬರೆದು ನಿರ್ದೇಶಿಸಿ, ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ‘ರಮ್ಮಿ ಆಟದ ಚಟಕ್ಕೆ ಕೆಲವರು ತಮ್ಮ ಮನೆ, ಮಠ ಕಳೆದುಕೊಂಡು ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಹಣದಾಸೆಗೆ ಬಿದ್ದು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆನ್​ಲೈನ್​ ರಮ್ಮಿ ಆಡುವುದರಿಂದ ಏನೇನು ತೊಂದರೆಗಳಾಗುತ್ತವೆ? ಜನ ಹೇಗೆಲ್ಲ ಮೋಸ ಹೋಗುತ್ತಿದ್ದಾರೆ? ಎಂಬುದರ ಕುರಿತ ಚಿತ್ರವಿದು. ಸಂಭಾಷಣೆಯೇ ನಮ್ಮ ಚಿತ್ರದ ಹೀರೋ‘ ಎಂದು ಮಾಹಿತಿ ನೀಡುತ್ತಾರವರು.

ನಿರೂಪಕ ರಾಘವ್​ ಸೂರ್ಯ ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಬಗ್ಗೆ ಅನುಭವ ಹಂಚಿಕೊಂಡರು. ಅವರಿಗೆ ಮಂಗಳೂರು ಮೂಲದ ವಿನ್ಯಾ ಶೆಟ್ಟಿ ನಾಯಕಿಯಾಗಿದ್ದು, ಅವರು ಗೌರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸೈಯದ್​ ಇರ್ಫಾನ್​, ಸ್ನೇಹಾ ರಾವ್​, ನಂದಿನಿ ಗೌಡ, ಅಭಿ ಗೌಡ, ಶ್ರೀಕರ್​ ರೋಷನ್​, ಪಾವನಾ, ಗಿರೀಶ್​ ತಾರಾಗಣದಲ್ಲಿದ್ದಾರೆ.