ಸಿನಿವಾಣಿ

7 ವರ್ಷದ ದಾಂಪತ್ಯಕ್ಕೆ ಬ್ರೇಕ್; ಕಿರುತರೆ ನಟಿ ಐಶ್ವರ್ಯಾ ಪಿಸ್ಸೆ ಡಿವೋರ್ಸ್ ಕನ್ಫರ್ಮ್, ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಾರ್ನಿಂಗ್..Aishwarya Pisse

  • ಕಿರುತರೆ ನಟಿ ಐಶ್ವರ್ಯಾ ಪಿಸ್ಸೆ ದಾಂಪತ್ಯ ಜೀವನದಲ್ಲಿ ಬಿರುಕು, ಡಿವೋರ್ಸ್​ ಬಗ್ಗೆ ಪೋಸ್ಟ್.

  • ಸಂತು ಸ್ಟ್ರೇಟ್​ ಫಾರ್ವರ್ಡ್​ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸಿದ್ದ ಐಶ್ವರ್ಯಾ ಪಿಸ್ಸೆ.

  • ಮಾನಹಾನಿಕರ ವಿಚಾರ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ.

TV actress Aishwarya Pisse confirms divorce: ಸಂತು ಸ್ಟ್ರೇಟ್​ ಫಾರ್ವರ್ಡ್​ ಸಿನಿಮಾದಲ್ಲಿ ಯಶ್ ತಂಗಿಯಾಗಿ ನಟಿಸಿ, ಮಾಂಗಲ್ಯ, ಸರ್ವ ಮಂಗಳ ಮಾಂಗಲ್ಯೇ, ಪುನರ್ ವಿವಾಹ ಸೀರಿಯಲ್​​ನಲ್ಲಿ ನಟಿಸಿದ್ದ ಐಶ್ವರ್ಯಾ ಪಿಸ್ಸೆ ಅವರು ತಮ್ಮ ಪತಿಯಿಂದ ಡಿವೋರ್ಸ್​ ಪಡೆದುಕೊಂಡ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

'ಅನುರೂಪ' ಧಾರಾವಾಹಿ ಮೂಲಕ ಹೆಚ್ಚು ಫೇಮಸ್ ಆದ ಐಶ್ವರ್ಯಾ ಪಿಸ್ಸೆ ಕನ್ನಡ ಸೀರಿಯಲ್​ ಮಾತ್ರವಲ್ಲ. ತೆಲುಗಿನಲ್ಲಿಯೂ ಸಾಕಷ್ಟು ಸೀರಿಯಲ್​ನಲ್ಲಿ ನಟಿಸಿದ್ದಾರೆ. ಮುಕ್ಕುಪುಡಕ, ಅಗ್ನಿ ಸಾಕ್ಷಿ, ಕಸ್ತೂರಿ, ನಿನೈಕ ತೇರಿಂದ ಮನಮೇ ತಮಿಳು ಸೀರಿಯಲ್​​ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಗೆದ್ದುಕೊಂಡಿದ್ದಾರೆ

ತಮ್ಮ ವೈವಾಹಿಕ ಜೀವನದ ಬಗ್ಗೆ ಈಗಾಗಲೇ ಹಬ್ಬಿರುವ ಸಾಕಷ್ಟು ವದಂತಿಗಳಿಗೆ ತೆರೆ ಎಳೆದ ಅವರು ನಾವು ಪರಸ್ಪರ ಯೋಚಿಸಿ, ಡಿವೋರ್ಸ್ ಪಡೆದುಕೊಂಡಿದ್ದೇವೆ. ಆದರೆ, ಮುಂದೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಕಂಡು ಬಂದರೆ ಕ್ರಮ ಕೈಗೊಳ್ಳೋದು ಗ್ಯಾರಂಟಿ ಎಂದು ಕಟ್ಟೆಚ್ಚರಿಕೆ ಕೊಟ್ಟಿದ್ದಾರೆ. ಆದರೆ, ಮುದ್ದು ಮುಖದ ಚೆಲುವೆ ಐಶ್ವರ್ಯಾ ಪಿಸ್ಸೆ ಅವರ ಜೀವನದಲ್ಲಿ ಮಾಂಗಲ್ಯ ಹಾಗೂ ವೈವಾಹಿಕ ಜೀವನಕ್ಕಾದದ್ದು ಏನು. ಇಬ್ಬರಲ್ಲಾದ ವೈಮನಸ್ಸು ಏನು ಎನ್ನುವುದು ಹಲವಾರು ಫ್ಯಾನ್ಸ್​ಗೆ ಕಾಡುತ್ತಿರುವ ಪ್ರಶ್ನೆಯಾಗಿದೆ.

ಐಶ್ವರ್ಯಾ ಪೋಸ್ಟ್​ನಲ್ಲಿ ಹೀಗಿದೆ

ನನ್ನೆಲ್ಲಾ ಪ್ರೀತಿಯ ಅಭಿಮಾನಿಗಳಿಗೆ, ಫಾಲೋವರ್ಸ್‌ಗಳಿಗೆ ಹಾಗೂ ಹಿತೈಷಿಗಳಿಗೆ, ನನ್ನ ವೈಯಕ್ತಿಕ ಜೀವನದ ಸುತ್ತ ಹರಡುತ್ತಿರುವ ಅನಗತ್ಯ ವದಂತಿಗಳು ಮತ್ತು ಊಹಾಪೋಹಗಳಿಗೆ ತೆರೆ ಎಳೆಯುವ ಉದ್ದೇಶದಿಂದ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡುವುದು ಅಗತ್ಯವೆಂದು ಭಾವಿಸಿದ್ದೇನೆ.

ನಾನು ಮತ್ತು ನನ್ನ ಪತಿ ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದೇವೆ. ಸಾಕಷ್ಟು ಯೋಚನೆ ಮತ್ತು ಪರಸ್ಪರ ಒಪ್ಪಿಗೆಯೊಂದಿಗೆ, ನಾವು ಪರಸ್ಪರ ಒಪ್ಪಿಗೆಯ ವಿಚ್ಛೇದನ ಪಡೆದಿದ್ದೇವೆ . ಇದು ನಮ್ಮಿಬ್ಬರ ವೈಯಕ್ತಿಕ ನಿರ್ಧಾರವಾಗಿದ್ದು ಈ ಹಂತದಲ್ಲಿ ನಮಗೆ ಅಗತ್ಯವಿರುವ ಖಾಸಗಿತನ ಮತ್ತು ನೆಮ್ಮದಿಯನ್ನು ಗೌರವಿಸಿ, ನಮ್ಮ ಆಯ್ಕೆಯನ್ನು ಎಲ್ಲರೂ ಮಾನ್ಯ ಮಾಡಬೇಕೆಂದು ವಿನಂತಿಸುತ್ತೇನೆ ಎಂದಿದ್ದಾರೆ.

ಸುಳ್ಳು ಸುದ್ದಿ ಹಬ್ಬಿಸಬೇಡಿ

ವೀಕ್ಷಣೆಗಳು, ಫಾಲೋವರ್ಸ್, ಲೈಕ್ಸ್ ಅಥವಾ ಎಂಗೇಜ್‌ಮೆಂಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಕಥೆಗಳನ್ನು ಸೃಷ್ಟಿಸುವುದು, ದಾರಿ ತಪ್ಪಿಸುವ ವಿಡಿಯೋಗಳನ್ನು ಪ್ರಕಟಿಸುವುದು, ಆಧಾರರಹಿತ ಆರೋಪಗಳನ್ನು ಮಾಡುವುದು, ನನ್ನ ಧಾರಾವಾಹಿಯ ದೃಶ್ಯಗಳನ್ನು ಸಂದರ್ಭಕ್ಕೆ ಸಂಬಂಧವಿಲ್ಲದ ರೀತಿಯಲ್ಲಿ ಬಳಸುವುದು ಅಥವಾ ನನ್ನ ವೈಯಕ್ತಿಕ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಕಾನೂನಿನ ದೃಷ್ಟಿಯಿಂದ ಸ್ವೀಕಾರಾರ್ಹವಲ್ಲ.

ದಯವಿಟ್ಟು ತೆರೆಯ ಮೇಲಿನ ಜೀವನಕ್ಕೂ ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ. ವದಂತಿಗಳನ್ನು ಹರಡುವುದನ್ನು ಇಂದಿಗೆ ನಿಲ್ಲಿಸಿ. ಈ ಹೇಳಿಕೆಯನ್ನು ನೀಡುತ್ತಿರುವುದು ಸ್ಪಷ್ಟವಾದ ಮಿತಿಗಳನ್ನು ತಿಳಿಸುವುದಕ್ಕಾಗಿ ಮಾತ್ರವೇ ಹೊರತು, ಮತ್ತಷ್ಟು ಚರ್ಚೆಗಳಿಗೆ ಅಥವಾ ಊಹಾಪೋಹಗಳಿಗೆ ಆಹ್ವಾನ ನೀಡುವುದಕ್ಕಾಗಿ ಅಲ್ಲ. ಎಲ್ಲರೂ ನನ್ನ ಖಾಸಗಿತನವನ್ನು ಗೌರವಿಸಿ, ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ.

ಕಾನೂನು ಕ್ರಮದ ಎಚ್ಚರಿಕೆ

ನನ್ನ ಕೆಲಸವೇ ನನ್ನ ವೃತ್ತಿ. ನನ್ನ ವೈಯಕ್ತಿಕ ಜೀವನ ನನ್ನ ಖಾಸಗಿ ವಿಚಾರ. ಸುಳ್ಳು ಹಾಗೂ ಮಾನಹಾನಿಕರ ವಿಷಯಗಳನ್ನು ಸೂಕ್ತ ಕಾನೂನು ಮಾರ್ಗಗಳ ಮೂಲಕ ಎದುರಿಸಲಾಗುವುದು. ಇಂತಹ ಕೃತ್ಯಗಳು ಮುಂದುವರಿದರೆ, ಸಂಬಂಧಪಟ್ಟವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್​ ವಾರ್ನಿಂಗ್​ ಕೊಟ್ಟಿದ್ದಾರೆ, (ಏಜೆನ್ಸೀಸ್).