Su From So Tumbadchi Manjula
- ಕನ್ನಡದ ಸು ಫ್ರಂ ಸೋ ಸಿನಿಮಾ ಮರಾಠಿಗೆ ರಿಮೇಕ್
- ಮರಾಠಿಯಲ್ಲಿ ತುಂಬಾಡ್ಚಿ ಮಂಜುಳಾ ಎಂದು ಟೈಟಲ್
- ತುಂಬಾಡ್ಚಿ ಮಂಜುಳಾ ಜೂನ್ 5ರಂದು ಚಿತ್ರಮಂದಿರಗಳಲ್ಲಿ ರಿಲೀಸ್
Su From So:
ಆಗಿದ್ದು, ತುಂಬಾಡ್ಚಿ ಮಂಜುಳ ಹೆಸರಲಿನಲ್ಲಿ
ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಹಾರರ್ ಹಾಗೂ ಕಾಮಿಡಿ ಮಿಶ್ರಣ ಪ್ರೇಕ್ಷಕರಿಗೆ ರಸದೌತಣ ನೀಡೋದಂತು ಗ್ಯಾರಂಟಿ ಎನ್ನಲಾಗುತ್ತಿದೆ.
ಕನ್ನಡದಲ್ಲಿ ಸು ಫ್ರಂ ಸೋ ಟೈಟಲ್ನೊಂದಿಗೆ ಸಿನಿಮಾ ರಿಲೀಸ್ ಆಗಿತ್ತು. ಮರಾಠಿಯಲ್ಲಿ ತುಂಬಾಡ್ಚಿ ಮಂಜುಳಾ ಅಂದರೆ ತುಂಬಾಡ್ನ ಮಂಜುಳ ಎಂದು ಟೈಟಲ್ನ ಅರ್ಥ ಎನ್ನಲಾಗುತ್ತಿದೆ.
ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?
ಜೀ ಸ್ಟುಡಿಯೋಸ್ ಅರ್ಪಿಸುವ ಈ ಚಿತ್ರವನ್ನು ವಿವಿದ್ ಕೊರಗಾಂವ್ಕರ್ ನಿರ್ದೇಶಿಸಿದ್ದು, ಉಮೇಶ್ ಕುಮಾರ್ ಬನ್ಸಲ್ ಹಾಗೂ ಬವೇಶ್ ಜನವಲೇಕರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಜಿತೇಂದ್ರ ಜೋಶಿ, ಓಂ ಭೂತ್ಕರ್, ಸಾಯಿ ತಮ್ಹಾಂಕರ್ ಹಾಗೂ ಹಿರಿಯ ನಟಿ ಉಷಾ ನಾಡ್ಕರ್ಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಇಲ್ಲ ಎಂದು ಸಿನಿ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದ ಹೊತ್ತಲ್ಲೇ ಸು ಫ್ರಂ ಸೋ ಸಿನಿಮಾ ರಿಲೀಸ್ ಆಗಿತ್ತು. ಜೆಪಿ ತುಮಿನಾಡು, ರಾಜ್ ಬಿ ಶೆಟ್ಟಿ, ಶನೀಲ್ ಗೌತಮ್, ಪ್ರಕಾಶ್ ತುಮಿನಾಡು, ಸಂಧ್ಯಾ ಅರೆಕರೆ ನಟನೆ ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತ್ತು.
ಟ್ರೈಲರ್ನಲ್ಲಿ ಏನಿದೆ?
ತುಂಬಾಡ್ಚಿ ಮಂಜುಳಾ ಸಿನಿಮಾವು ಸು ಫ್ರಂ ಸೋನಂತೆ ಪ್ರಶಾಂತವಾದ ಸುಂದರ ಹಳ್ಳಿಯ ಹಿನ್ನೆಲೆಯಲ್ಲಿ ಸಾಗುತ್ತದೆ. ಸುತ್ತಲೂ ಗ್ರೀನರಿಯಿಂದ ಕೂಡಿರುವ ಊರು ಅಲ್ಲಿ ಕೇಶವ್ ಎಂಬಾತನ ಅಜ್ಜಿಯ ನಿಗೂಢ ಸಾವಿನ ಸುತ್ತ ಇಡೀ ಕಥೆ ಹೆಣೆಯಲ್ಪಟ್ಟಿದೆ. ಅಜ್ಜಿಯ ನಿಗೂಢ ಮರಣದ ಬೆನ್ನಲ್ಲೇ ಆ ಹಳ್ಳಿಗೆ ಒಬ್ಬ ಯುವತಿಯ ಆಗಮನವಾಗುತ್ತದೆ. ಆಕೆಯ ಎಂಟ್ರಿಯ ನಂತರ ಇಡೀ ಹಳ್ಳಿಯಲ್ಲಿ ವಿಚಿತ್ರ ವಿದ್ಯಮಾನಗಳು ಮತ್ತು ದೆವ್ವದ ಕಾಟ ಶುರುವಾಗುತ್ತದೆ. ಹಳ್ಳಿಯಲ್ಲಿ ದೆವ್ವ ಕಾಣಿಸಿಕೊಂಡ ತಕ್ಷಣವೇ ಅಲ್ಲಿನ ಜನರ ನೆಮ್ಮದಿ ಕೆಟ್ಟು, ಸಂಪೂರ್ಣ ಗೊಂದಲ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ. ಆದರೆ, ಈ ಭಯದ ನಡುವೆಯೇ ಹಳ್ಳಿಗರ ವಿಚಿತ್ರ ನಡವಳಿಕೆಗಳು ಮತ್ತು ವದಂತಿಗಳು ಸಿನಿಮಾದಲ್ಲಿ ಭರಪೂರ ಹಾಸ್ಯವನ್ನು ಸೃಷ್ಟಿಸಲಿವೆ ಎಂಬುದನ್ನು ಟ್ರೈಲರ್ ಸಾಬೀತುಪಡಿಸಿದೆ.
ಇದು ಕೇವಲ ದೆವ್ವದ ಕಥೆಯಷ್ಟೇ ಅಲ್ಲದೆ, ಸಮಾಜದಲ್ಲಿ ಹರಡುವ ವದಂತಿಗಳು ಹಾಗೂ ಮಾನವನ ಮತಿಭ್ರಮಣೆಯ ಸುತ್ತ ಸಾಗುವ ಒಂದು ‘ಸೋಷಿಯಲ್ ಹಾರರ್’ ಕಥಾಹಂದರವನ್ನು ಹೊಂದಿದೆ ಎಂದು ಚಿತ್ರತಂಡ ಹೇಳಿದೆ. (ಏಜೆನ್ಸೀಸ್).