ಭುವನೇಶ್ವರ್: ಒಡಿಶಾ ರಾಜ್ಯದ ಬಗ್ಗೆ ಕಾಮೆಂಟ್ ಮಾಡಿ ಭಾರಿ ಟ್ರೋಲ್ಗೆ ಒಳಗಾದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಇದೀಗ ಟ್ರೋಲ್ಗಳಿ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮವೊಂದರ ಜತೆ ಮಾತನಾಡಿದ ಆರ್ಜಿವಿ, ನಟಿ ಅಂಕೀತಾ ಮಹಾರಾಣ ಕುರಿತ ನನ್ನ ಟ್ವೀಟ್ ವಿರುದ್ಧದ ಕೇಳಿಬರುತ್ತಿರುವ ಆಕ್ರೋಶವು ಸಂಪೂರ್ಣ ಉತ್ಪ್ರೇಕ್ಷೆಯಾಗಿದೆ ಎಂದಿದ್ದಾರೆ. ನಾನೇನು ತುಂಬಾ ಹೆಚ್ಚಿನದ್ದನ್ನು ಮಾಡಿಲ್ಲವೆಂದು ಭಾವಿಸುತ್ತೇನೆ. ಭೌಗೋಳಿಕ ವಿದ್ಯಾರ್ಥಿಯಾಗದೇ ಹೊರತು ಪ್ರತಿಯೊಂದು ಸ್ಥಳದ ಬಗ್ಗೆ ಯಾರೂ ತಿಳಿಯಬಾರದೇ? ಎಂದು ಪ್ರಶ್ನಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಒಡಿಶಾದ ಜನರಿಗೆ ತೆಲುಗು ರಾಜ್ಯದ ಬಗ್ಗೆ ಏನು ತಿಳಿಯುತ್ತದೆ. ಹಿಂದಿನಿಂದಲೂ ನನಗೆ ಒಡಿಶಾ ಭಾಷೆ ತಿಳಿದಿಲ್ಲ ಅಥವಾ ಒಡಿಶಾದಲ್ಲಿ ಒಬ್ಬ ವ್ಯಕ್ತಿಯು ನನಗೆ ಪರಿಚಿತವಾಗಿಲ್ಲ ಅಥವಾ ನಾನು ಒಡಿಶಾ ಚಲನಚಿತ್ರವನ್ನು ನೋಡಿಲ್ಲ. ನಾನು ಯಾವಾಗಲು ಪ್ರಾಮಾಣಿಕವಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ತಮ್ಮ ಮುಂದಿನ ಚಿತ್ರ ಥ್ರಿಲ್ಲರ್ಗೆ ಅಂಕಿತಾ ಆಯ್ಕೆಯಾಗಿದ್ದು ಅಪ್ಸರಾ ರಾಣಿ ಎಂದು ಆರ್ಜಿವಿ ಮರುನಾಮಕರಣ ಮಾಡಿದ್ದಾರೆ. ಇದೀಗ ಒಡಿಶಾ ಬಗ್ಗೆ ತಿಳಿದುಕೊಳ್ಳಲು ಈಗ ಉತ್ಸುಕನಾಗಿದ್ದೇನೆ ಎಂದು ಆರ್ಜಿವಿ ಹೇಳಿದ್ದು, ಥ್ರಿಲ್ಲರ್ ಚಿತ್ರ ಮುಂಬೈನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ವಿವಾದ ಹುಟ್ಟಿಕೊಂಡಿದ್ದು ಹೇಗೆ?
ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿದ್ದ ಆರ್ಜಿವಿ ನನ್ನ ಮುಂದಿನ ಥ್ರಿಲ್ಲರ್ ಚಿತ್ರದಲ್ಲಿ ಅಪ್ಸರಾ ನಾಯಕಿಯಾಗಿದ್ದಾರೆ. ಒಡಿಶಾ ಮೂಲದ ಅಪ್ಸರಾ, ಡೆಹ್ರಾಡೂನ್ನಲ್ಲಿ ಜನಿಸಿದವರು. ಸದ್ಯ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ಅವರು ಅದ್ಭತ ನೃತ್ಯಗಾರ್ತಿ. ಅಲ್ಲದೆ, ಉತ್ತಮ ನಟಿಯೂ ಹೌದು ಎಂದು ಆರ್ಜಿವಿ ಪರಿಚಯಿಸಿದ್ದರು. ಮುಂದುವರಿದು ಅಪ್ಸರಾ ಅವರನ್ನು ಭೇಟಿಯಾಗುವ ಮೊದಲು, 1999ರ ಚಂಡಮಾರುತದ ನಂತರ ನಾನು ಒಡಿಶಾ ಬಗ್ಗೆ ಕೇಳಿರಲಿಲ್ಲ. ಆದರೆ, ಅಪ್ಸರಾ ಭೇಟಿಯ ನಂತರ ಒಡಿಶಾ ಎಲ್ಲಾ ಬಗ್ಗೆ ಚಂಡಮಾರುತವನ್ನು ಸೃಷ್ಟಿಸಿದೆ ಎಂದು ಅರ್ಥ ಮಾಡಿಕೊಂಡೆ ಎನ್ನವ ಮೂಲಕ ಅಪ್ಸರಾ ಸೌಂದರ್ಯವನ್ನು ವರ್ಣಿಸಿದ್ದಾರೆ. ಒಡಿಶಾದಲ್ಲಿ ಅಂತಹ ಸುಂದರಿಯರು ಇದ್ದಾರೆ ಎಂಬುದು ಇದೀಗ ಬಹಿರಂಗವಾಗಿದೆ ಎಂದು ತಿಳಿಸಿದ್ದರು.
ಇದಾದ ಬೆನ್ನಲ್ಲೇ ಒಡಿಶಾದ ನೆಟ್ಟಿಗರು ಆರ್ಜಿವಿ ವಿರುದ್ಧ ಕಿಡಿಕಾರಿದ್ದರು. ತಮ್ಮ ರಾಜ್ಯದ ಬಗೆಗಿನ ನಿರ್ದೇಶಕರ ತಿಳುವಳಿಕೆಯನ್ನು ಪ್ರಶ್ನಿಸಿದ್ದರು. ಒಡಿಶಾ ಎಂದು ಬರೆಯಲು ಒರಿಸ್ಸಾ ಎಂದು ಬರೆದಿದ್ದ ಆರ್ಜಿವಿಯನ್ನು ಟೀಕಿಸಿದರು. ಕೆಲವು ಆರ್ಜಿವಿಯನ್ನು ಬಂಧಿಸುವಂತೆಯೂ ಒತ್ತಾಯಿಸಿದ್ದರು. ಹೀಗಿದ್ದರೂ ಆರ್ಜಿವಿ ಮಾತ್ರ ಕ್ಷಮೆ ಕೋರುವ ಗೋಜಿಗೆ ಹೋಗಿಲ್ಲ. (ಏಜೆನ್ಸೀಸ್)