Trisha Krishnan ಚಿತ್ರ Instagram 
ಸಿನಿವಾಣಿ

ಸಿಂಪಲ್ ಸೂಟ್… ಆದರೆ 12,000 ಬೆಲೆ! ತ್ರಿಶಾ ಸ್ಟೈಲ್ ಸೀಕ್ರೆಟ್ ಏನು? Trisha Krishnan

Trisha Krishnan: ನಟಿ ತ್ರಿಶಾ ಕೃಷ್ಣನ್ ತಮ್ಮ 43 ನೇ ಹುಟ್ಟುಹಬ್ಬವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ ಭೇಟಿ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳ ಕಣ್ಣಿಗೆ ಬಿದ್ದಾಗ, ಅವರ ಸರಳತೆ ಎಲ್ಲರ ಗಮನ ಸೆಳೆಯಿತು. ಸದಾ ಗ್ಲಾಮರಸ್ ಆಗಿ ಕಾಣುವ ನಟಿ, ಅತ್ಯಂತ ಸೊಗಸಾದ ಮತ್ತು ಚಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಉಡುಪಿನ ಬಗ್ಗೆ ಎಲ್ಲೆಡೆ ಮಾತು ಕೇಳಿಬರುತ್ತಿದೆ. 
ನಟಿ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಅವರ ಚಿತ್ರಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು, ಗೂಗಲ್​ ಲೆನ್ಸ್ ಪ್ರಕಾರ ಅವರು ಧರಿಸಿದ್ದ ಈ ಸುಂದರವಾದ ಉಡುಪು ಪ್ರಸಿದ್ಧ ಡಿಸೈನರ್ ಪ್ಲಾಟ್‌ಫಾರ್ಮ್ 'ಅಜಾ ಫ್ಯಾಷನ್ಸ್' ನಿಂದ ಆರಿಸಲ್ಪಟ್ಟಿದ್ದು, ಇದರ ಬೆಲೆ ಸರಿಸುಮಾರು 12000 ರೂ ಎಂದು ಅಂದಾಜಿಸಲಾಗಿದೆ. 

ಉಡುಪಿನ ವಿಶೇಷತೆ ಏನು?

ಇದು ದಂತದ ಬಣ್ಣದ (Ivory) ಕೈಮಗ್ಗದ ಹತ್ತಿ ಬಟ್ಟೆ  V-ನೆಕ್ ವಿನ್ಯಾಸವನ್ನು ಒಳಗೊಂಡಿದ್ದು, ಹತ್ತಿಯಿಂದ ಮಾಡಲ್ಪಟ್ಟಿದೆ. ಇದು ಬೇಸಿಗೆಗೆ ಉತ್ತಮ ಆಯ್ಕೆಯಾಗಿದೆ. ಕುರ್ತಾದ ಮೂರು-ಕಾಲು ಭಾಗದ ತೋಳುಗಳು  (3/4thSleeves) ಮತ್ತು ಸೈಡ್ ಸ್ಲಿಟ್‌ಗಳು ಈ ಉಡುಪಿಗೆ ಆಧುನಿಕ ಹಾಗೂ ಚಿಕ್ ಲುಕ್ ನೀಡಿದ್ದವು. ಈ ಕುರ್ತಾವನ್ನು ನೇರವಾದ ಪ್ಯಾಂಟ್​ನಿಂದ ಹೂವಿನ ದುಪ್ಪಟ್ಟಾದೊಂದಿಗೆ ಜೋಡಿಸಿದ್ದರು. ನೋಡಲು ತುಂಬಾ ಸುಂದರವಾಗಿ ಕಾಣುತ್ತಿದ್ದರು. 

ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಸುಳಿವು

ತ್ರಿಶಾ ದೇವಸ್ಥಾನಕ್ಕೆ ಭೇಟಿ ನೀಡುವ ಬಗ್ಗೆ ಒಂದು ದಿನ ಮೊದಲೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಸುಳಿವು ನೀಡಿದ್ದರು. ನಂತರ ಕೃಷ್ಣನ ದೇವಸ್ಥಾನದಿಂದ ತೆಗೆದ ಫೋಟೋ ಮತ್ತು  ವೆಂಕಟೇಶ್ವರನಿಗೆ ಪ್ರಾರ್ಥನೆ ಸಲ್ಲಿಸುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 

ರಾಜಕೀಯ ಫಲಿತಾಂಶದಂದೇ ತ್ರಿಶಾ ಭೇಟಿ! 

ವಿಶೇಷವೆಂದರೆ, ತ್ರಿಶಾ ಅವರ ಜನ್ಮದಿನ ಮತ್ತು ತಿರುಪತಿ ಭೇಟಿಯು ದಳಪತಿ ವಿಜಯ್ ಅವರ ರಾಜಕೀಯ ಭವಿಷ್ಯ ನಿರ್ಧಾರವಾಗುವ ದಿನದಂದೇ ನಡೆದಿರುವುದರಿಂದ ನಟಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗಿರಬಹುದು ಎಂಬ ಊಹಾಪೋಹಗಳು ಪ್ರಾರಂಭವಾಗಿದ್ದವು. ಆದಾಗ್ಯೂ, ವಿಜಯ್ ಮೊದಲ ಬಾರಿಗೆ ಟಿವಿಕೆ ಪಕ್ಷದ ಮೂಲಕ ಚುನಾವಣಾ ಕಣಕ್ಕಿಳಿದಿದ್ದು, 108 ಸೀಟುಗಳನ್ನು ಗೆಲ್ಲುವ ಮೂಲಕ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ (ಏಜೆನ್ಸೀಸ್).