ಸಿನಿವಾಣಿ

ಪೀಕು ಸಿನಿಮಾದ ರಿಮೇಕ್​ನಲ್ಲಿ ತ್ರಿಷಾ

ಕರಿಯಪ್ಪ ಅರಳಿಕಟ್ಟಿ

ಬೆಂಗಳೂರು: ಹಿಂದಿ ಸಿನಿಮಾಗಳು ದಕ್ಷಿಣ ಭಾರತದ ಇಂಡಸ್ಟ್ರಿಗಳಲ್ಲಿ ರಿಮೇಕ್ ಆಗುವುದು ಹೊಸದೇನಲ್ಲ. ಇದೀಗ ಅದೇ ರೀತಿ ದೀಪಿಕಾ ಪಡುಕೋಣೆ ನಟಿಸಿದ್ದ ‘ಪೀಕು’ ಚಿತ್ರ ಕಾಲಿವುಡ್ ಮತ್ತು ಟಾಲಿವುಡ್​ನಲ್ಲಿ ರಿಮೇಕ್ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಅಷ್ಟೇ ಅಲ್ಲ ದೀಪಿಕಾ ನಟಿಸಿದ್ದ ಪಾತ್ರವನ್ನು ತ್ರಿಷಾ ಕೃಷ್ಣನ್ ಮಾಡಲಿದ್ದಾರೆ ಎಂಬುದೂ ಸುದ್ದಿಯಾಗಿದೆ.

2015ರಲ್ಲಿ ಬಾಲಿವುಡ್​ನಲ್ಲಿ ತೆರೆಕಂಡಿದ್ದ ‘ಪೀಕು’ ಚಿತ್ರವನ್ನು ಶೂಜಿತ್ ಸಿರ್ಕಾರ್ ನಿರ್ದೇಶನ ಮಾಡಿದ್ದರು. ಅಮಿತಾಬ್ ಬಚ್ಚನ್, ಇರ್ಫಾನ್ ಖಾನ್, ದೀಪಿಕಾ ಒಟ್ಟಿಗೆ ನಟಿಸಿದ್ದರು. 25 ಕೋಟಿ ಬಜೆಟ್​ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 140 ಕೋಟಿ ರೂ. ಗಳಿಕೆ ಮಾಡಿತ್ತು. ಇದೀಗ ಆ ಚಿತ್ರದ ರಿಮೇಕ್ ಹಕ್ಕುಗಳನ್ನು ದಕ್ಷಿಣದ ಖ್ಯಾತ ನಿರ್ವಪಕ ರೊಬ್ಬರು ಖರೀದಿಸಿದ್ದು, ಇನ್ನೇನು ಶೀಘ್ರದಲ್ಲಿ ಇನ್ನುಳಿದ ಎರಡು ಪಾತ್ರಗಳು ಮತ್ತು ನಿರ್ದೇಶಕರ ಆಯ್ಕೆಯೂ ಅಂತಿಮವಾಗಲಿದೆ. ಈಗಾಗಲೇ ತ್ರಿಷಾ ನಟಿಸುವುದು ಬಹುತೇಕ ಖಚಿತವಾಗಿದೆಯಂತೆ.