ಬೆಂಗಳೂರು: ಸ್ಯಾಂಡಲ್‌ವುಡ್ ಕ್ಯೂಟ್ ದಂಪತಿ ಹರ್ಷಿಕಾ ಪೂಣಚ್ಚ-ಭುವನ್ ಪೊನ್ನಣ್ಣ ಸದ್ಯ ಡಬಲ್ ಖುಷಿಯಲ್ಲಿದ್ದಾರೆ. ಪುತ್ರಿ ತ್ರಿದೇವಿ ಪೊನ್ನಕ್ಕೆ ಇದೇ ಅ.3ಕ್ಕೆ ಒಂದು ವರ್ಷಕ್ಕೆ ಕಾಲಿಟ್ಟಿದ್ದಾಳೆ. ಮಗಳ ಮೊದಲ ಹುಟ್ಟುಹಬ್ಬವನ್ನು ತಾರಾ ದಂಪತಿ ಅದ್ದೂರಿಯಾಗಿ ಆಚರಿಸಿದ್ದಾರೆ. ಸ್ಯಾಂಡಲ್‌ವುಡ್ ಖ್ಯಾತ ನಟರಾದ ರಮೇಶ್ ಅರವಿಂದ್, ಗಣೇಶ್, ನಿರ್ದೇಶಕ ಯೋಗರಾಜ್ ಭಟ್, ನಟಿಯರಾದ ಜಯಮಾಲಾ, ಸುಧಾರಾಣಿ, ಮಾಲಾಶ್ರೀ, ತಾರಾ ಅನುರಾಧಾ, ಪ್ರಿಯಾಂಕಾ ಉಪೇಂದ್ರ, ಆರಾಧನಾ ರಾಮ್, ಪ್ರಣೀತಾ ಸುಭಾಷ್, ಶ್ರುತಿ ಹಾಗೂ ರಾಜಕೀಯ, ಕ್ರೀಡೆ ಸೇರಿ ವಿವಿಧ ಕ್ಷೇತ್ರದ ಗಣ್ಯರು ಆಗಮಿಸಿ ತ್ರಿದೇವಿಗೆ ಶುಭ ಕೋರಿದರು.
ಹೊಸ ಅಧ್ಯಾಯ: ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಬಾಳಲ್ಲಿ ಪುತ್ರಿ ತ್ರಿದೇವಿ ಪೊನ್ನಕ್ಕ ಅದೃಷ್ಟ ದೇವತೆಯಾಗಿದ್ದಾಳೆ. ಪುತ್ರಿ ಹುಟ್ಟುಹಬ್ಬದ ಸಂಭ್ರಮದಲ್ಲಿರುವಾಗಲೇ ಭುವನ್, ಯೋಗರಾಜ್ ಭಟ್ ನಿರ್ದೇಶನದ ಮ್ಯೂಸಿಕಲ್ ಲವ್‌ಸ್ಟೋರಿ ‘ಹಲೋ 123’ ಮೂಲಕ ಸ್ಯಾಂಡಲ್‌ವುಡ್‌ಗೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹಾಗೆಯೇ ಮಗಳ ಹುಟ್ಟುಹಬ್ಬಕ್ಕೆ ಮತ್ತೊಂದು ಸಿನಿಮಾ ‘ಬುಲ್ಲಿ’ ೋಷಣೆಯಾಗಿದ್ದು, ಜತೆಗೆ ನಿರ್ಮಾಪಕ ಗಣೇಶ್ ಮಹಾದೇವ್ ಮುಂಗಡ ಚೆಕ್ ನೀಡಿ ಪುತ್ರಿ ಬರ್ತ್‌ಡೇಗೆ ಅಚ್ಚರಿ ಉಡುಗೊರೆ ನೀಡಿದರು. ಇನ್ನು ಹರ್ಷಿಕಾ ತಾಯಿಯಾದ ಬಳಿಕ ಹೊಸ ಅಧ್ಯಾಯ ಆರಂಭಿಸುತ್ತಿದ್ದು, ‘ಚಿ.ಸೌಜನ್ಯ’ ಮೂಲಕ ನಿರ್ದೇಶಕಿಯಾಗುತ್ತಿದ್ದಾರೆ. ಜತೆಗೆ ಆ್ಯಕ್ಟಿಂಗೂ ಮರಳುತ್ತಿದ್ದಾರೆ.