ಸಿನಿಮಾ ಟಿಕೆಟ್ ಕೊಳ್ಳಲು ಹಣವಿಲ್ಲದೆ ಹೊರಗೆ ಕುಳಿತಿದ್ದ ಬಾಲಕ ಇಂದು ಬಾಲಿವುಡ್ನ ಬೇಡಿಕೆಯ ನಟ
ಕಿಂಗ್ ಖಾನ್ ಶಾರುಖ್ ಖಾನ್ರ 61ನೇ ಹುಟ್ಟುಹಬ್ಬ
ಸಿನಿಮಾ ಟಿಕೆಟ್ ಕೊಳ್ಳಲು ಹಣವಿಲ್ಲದೆ, ವಾಹನಗಳನ್ನು ವೀಕ್ಷಿಸಿದ ತಂದೆ-ಮಗ
SRK and his father : ಕೈಯಲ್ಲಿ ಕಾಸಿಲ್ಲದೆ ಟಿಕೆಟ್ ಕೊಂಡುಕೊಳ್ಳಲೂ ಸಾಧ್ಯವಾಗದೆ, ಅಂದು ಥಿಯೇಟರ್ ಮುಂದೆ ಐಷಾರಾಮಿ ಕಾರುಗಳನ್ನೇ ದಿಟ್ಟಿಸುತ್ತಾ ಕುಳಿತಿದ್ದ ತಂದೆ-ಮಗ ಇಂದು ಸಾವಿರಾರು ಕೋಟಿ ಆಸ್ತಿಯ ಒಡೆಯರು..ಬಾಲಿವುಡ್ಗೆ ಒಂದರ ಹಿಂದ ಒಂದರಂತೆ ಬ್ಲಾಕ್ ಬ್ಲಸ್ಟರ್ ಸಿನಿಮಾಗಳನ್ನು ಹಿಟ್ ಕೊಟ್ಟ ಬಾಲಕನ ಹುಟ್ಟುಹಬ್ಬ ಇಂದು. ಅವರ್ಯಾರು ಅಲ್ಲ ಬಾಲಿವುಡ್ನ 'ಕಿಂಗ್ ಖಾನ್' ಎಂದು ಕರೆಸಿಕೊಳ್ಳುತ್ತಿರುವ ನಟ ಶಾರುಖ್ ಖಾನ್.
ಓಂ ಶಾಂತಿ ಓಂ, ಮೈ ಹೂನಾ, ದೇವ್ದಾಸ್, ಮೈ ನೇಮ್ ಈಸ್ ಖಾನ್, ಚಕ್ ದೇ ಇಂಡಿಯಾ, ಕಭಿ ಕುಷಿ ಕಭಿಗಂ, ಚೆನ್ನೈ ಎಕ್ಸ್ ಪ್ರೆಸ್, ಬಾಜಿ ಗರ್ ನಂತಹ ಹಿಟ್ ಸಿನಿಮಾಗಳನ್ನು ಬಾಲಿವುಡ್ಗೆ ಶಾರುಖ್ ಖಾನ್ ಕೊಟ್ಟಿದ್ದಾರೆ. ಇಂದು ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕಿಂಗ್ ಖಾನ್ ಎಂದು ಖ್ಯಾತಿ ಪಡೆದಿದ್ದಾರೆ. ಅವರನ್ನು ನೋಡಲು ನಿತ್ಯ ಸಾವಿರಾರು ಅಭಿಮಾನಿಗಳು ಕಾಯುತ್ತಾರೆ. ಇಂತಹ ಸ್ಟಾರ್ ಪಟ್ಟ ಪಡೆದುಕೊಳ್ಳಲು ಅವರು ಕಾದಿದ್ದು...ಸೋತಿದ್ದು..ಗೆದ್ದಿದ್ದು ಅಷ್ಟಿಷ್ಟಲ್ಲ.
ಇಂದು ಶಾರುಖ್ ಖಾನ್ ಅವರ ಹುಟ್ಟುಹಬ್ಬ. 61ನೇ ವಸಂತಕ್ಕೆ ಕಾಲಿಟ್ಟ ಅವರಿಗೆ ಸಿನಿಮಾ ರಂಗದ ಗಣ್ಯರು ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದಾರೆ. ಅಲ್ಲದೇ ಅವರ ಕಿಂಗ್ ಸಿನಿಮಾದ ಮೊದಲ ಹಾಡು ತು ಮಿಲ್ ಜಾಯೆಯನ್ನು ಅನಾವರಣಗೊಳಿಸಲಾಗಿದೆ. ಶಾರುಖ್ ಮತ್ತು ದೀಪಿಕಾರ ರೊಮ್ಯಾಂಟಿಕ್ ಟ್ರ್ಯಾಕ್, ಆನ್ಸ್ಕ್ರೀನ್ ಕೆಮಿಸ್ಟಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅರಿಜಿತ್ ಸಿಂಗ್ ಮತ್ತು ಮಧುಬಂತಿ ಬಾಗ್ಚಿ ಈ ಹಾಡನ್ನು ಹಾಡಿದ್ದಾರೆ.
2012 ರಲ್ಲಿ ನಡೆದ ಥಿಂಕ್ಫೆಸ್ಟ್ ಸಮಾವೇಶದಲ್ಲಿ ಹಳೆಯ ಬಾಲ್ಯದ ನೆನಪನ್ನು ಶಾರುಖ್ ಮೆಲಕು ಹಾಕಿದ್ದು ಹೀಗೆ, ತಮ್ಮ ತಂದೆ ಮೀರ್ ತಾಜ್ ಮೊಹಮ್ಮದ್ ಖಾನ್ ಮತ್ತು ಶಾರುಖ್ ಖಾನ್ ಒಮ್ಮೆ ದೆಹಲಿಯ ಕಮಾನಿ ಆಡಿಟೋರಿಯಂ ಬಳಿ ಸಿನಿಮಾ ನೋಡಲು ಹೋದೆವು. ಅಪ್ಪನ ಬಳಿ ಇಬ್ಬರಿಗೆ ಟಿಕೆಟ್ ಕೊಂಡುಕೊಳ್ಳುವಷ್ಟು ಹಣವಿರಲಿಲ್ಲ. ಇದು ನನಗೆ ಗೊತ್ತಾಗದಿರಲಿ ಎಂದು ಕಮಾನಿ ಆಡಿಟೋರಿಯಂನಿಂದ ವಾಹನಗಳ ಓಡಾಟ ನೋಡುವುದು ಅದ್ಭುತವಾರುತ್ತದೆ. ನೋಡು ಅಲ್ಲಿ ಕಾರುಗಳು, ವಾಹನಗಳ ಓಡಾಟ ಎಷ್ಟೊಂದು ಚಂದವಾಗಿದೆ ಎಂದು ನನಗೆ ಹೇಳಿದರು. ಮತ್ತೊಮ್ಮೆ ನಾನು ಅದೇ ಥಿಯೇಟರ್ಗೆ ಹೋಗುವಾಗ ವಾಹನಗಳನ್ನು ನೋಡಿಲ್ಲ. ಬದಲಾಗಿ ಆತನೊಂದಿಗೆ ಸಿನಿಮಾ ನೋಡುವ ಅನುಭವವನ್ನು ಪಡೆದುಕೊಂಡೆ
ನಾನು ಅಂದೇ ನಿರ್ಧರಿಸಿದ್ದೆ ಎಂದಿಗೂ ತಂದೆ ಬಡತನದಲ್ಲಿ ಸಾಯಬಾರದು ಎಂದು ನಾನು ದೊಡ್ಡ ಯಶಸ್ಸು ಕಾಣಲು ಬಯಸಿದೆ. ನಾನು ನನ್ನ ಮಗನನ್ನು ಸಿನಿಮಾಕ್ಕೆ ಕರೆದೊಯ್ದೆ ಥಿಯೇಟರ್ನಿಂದ ಸಿನಿಮಾ ನೋಡುವಂತೆ ಅಭಿವೃದ್ಧಿ ಕಾಣಬೇಕು..ಅಲ್ಲಿ ಕಾರು ತೋರಿಸುವಷ್ಟ ಬಡವನಾಗಬಾರದು ಎಂದು ಪಣ ತೊಟ್ಟಿದ್ದರಂತೆ.
ನನ್ನಲ್ಲಿ ಏನೋ ಸಮಸ್ಯೆ ಇದೆ ಎನಿಸುತ್ತದೆ. ಏನೂ ಅಂತಾನೆ ಅರ್ಥವಾಗೋದಿಲ್ಲ. ನನಗೆ ಸುಂದರವಾದ ಕುಟುಂಬವಿದೆ. ಸಮಯ ಕಳೆಯಲು ಕೆಲವೇ ಕೆಲವು ಒಳ್ಳೆಯ ಸ್ನೇಹಿತರಿದ್ದಾರೆ. ನಾನು ಯಾರಿಗೂ ತಿಳಿಯದವನಾಗಿ ಬದುಕಲ್ಲ. ಹೇಗೋ ಏನೋ, ಒಳಗೆ ಒಂದು ರೀತಿಯ ಖಾಲಿ ಜಾಗದ ಅನುಭವ ಕಾಡುತ್ತದೆ. ನನ್ನಲ್ಲಿ ಈ ಅಶಾಂತಿ, ವಿಚಿತ್ರ ಭಾವನೆ ಇದೆ, ಅದನ್ನು ನಾನು ನನ್ನ ಅಭಿನಯದಿಂದ ತುಂಬಿಕೊಳ್ಳುತ್ತೇನೆ ಎಂದು ಸಹ ಅಂದು ಮಾತನಾಡಿದ್ದರು.
ಶಾರುಖ್ ಖಾನ್ ಕೇವಲ 15 ವರ್ಷದವನಿದ್ದಾಗ ತನ್ನ ತಂದೆಯನ್ನು ಕ್ಯಾನ್ಸರ್ ನಿಂದ ಕಳೆದುಕೊಂಡರು. ಅವರ ತಾಯಿ ಲತೀಫ್ ಫಾತಿಮಾ ಖಾನ್ 1990 ರಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾದರು. ಒಂದು ವರ್ಷದ ನಂತರ, 1991 ರಲ್ಲಿ, ನಟ ಗೌರಿ ಖಾನ್ ಅವರನ್ನು ವಿವಾಹವಾದರು . ದಂಪತಿಗೆ ಆರ್ಯನ್, ಸುಹಾನಾ ಮತ್ತು ಅಬ್ ರಾಮ್ ಖಾನ್ ಎಂಬ ಮೂವರು ಮಕ್ಕಳಿದ್ದಾರೆ, (ಏಜೆನ್ಸೀಸ್).