ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ
- ಫೆ.26ರಂದು ನಟ 'ವಿರೋಶ್' ವಿವಾಹ ಮಹೋತ್ಸವ
- ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ವಿಜಯ್-ರಶ್ಮಿಕಾ ಮದುವೆ
- ಸ್ಟಾರ್ ಜೋಡಿಯ ಮದುವೆ ಹಿನ್ನೆಲೆ ಹಳೆಯದ್ದನ್ನು ಮೆಲುಕು ಹಾಕುತ್ತಿರುವ ಫ್ಯಾನ್ಸ್
- ನಮ್ಮ ಸೊಸೆಗೆ ಈ ಗುಣವಿದ್ದರೆ ಸಾಕು ಎಂದಿದ್ದ ವಿಜಯ್ ದೇವರಕೊಂಡ ತಾಯಿ
VIROSH Wedding: ಟಾಲಿವುಡ್ ಸ್ಟಾರ್ ನಟ ವಿಜಯ್ ದೇವರಕೊಂಡ ಹಾಗೂ ಪ್ಯಾನ್ ಇಂಡಿಯಾ ಸುಂದರಿ ರಶ್ಮಿಕಾ ಮಂದಣ್ಣರ ಮದುವೆ ದಿನಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಭವ್ಯ ಅರಮನೆಯಲ್ಲಿ ವಿಜಯ್-ರಶ್ಮಿಕಾ ವಿವಾಹ ನಡೆಯಲಿದ್ದು, ಕುಟುಂಬ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರ ಈ ಶುಭ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸದ್ದಿಲ್ಲದೇ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ, ಅಲ್ಲಲ್ಲಿ ಕೆಲವೊಮ್ಮೆ ಜೊತೆಗೆ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವರಿಬ್ಬರು ಪ್ರೀತಿಯಲ್ಲಿ ಇರುವುದು ಖಚಿತ ಎಂಬುದನ್ನು ಹೇಳಲಾಗುತ್ತಿತ್ತು. ಇದು ಒಮ್ಮೆ ಆಗಿದ್ದರೆ, ನೆಟ್ಟಿಗರು ಮತ್ತು ಸ್ಟಾರ್ ಜೋಡಿಯ ಅಭಿಮಾನಿಗಳು ಸುಮ್ಮನಾಗುತ್ತಿದ್ದರೇನೋ. ಆದರೆ, ಹಲವು ಬಾರಿ ರಶ್ಮಿಕಾ-ವಿಜಯ್ ಒಟ್ಟಿಗೆ ಓಡಾಡುತ್ತಿರುವ, ಊಟ ಸವಿಯುತ್ತಿರುವ ದೃಶ್ಯಗಳು ವೈರಲ್ ಆಯಿತು. ಇದು ಈ ಜೋಡಿಯ ಪ್ರೀತಿ ಸಂಬಂಧವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿತು.
ಇವರಿಬ್ಬರ ಜೋಡಿ ಎಂಗೇಜ್ಮೆಂಟ್ ಮಾಡಿಕೊಂಡ ಬಳಿಕವೇ ಹಲವರಿಗೆ ರಶ್ಮಿಕಾ-ವಿಜಯ್ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಕಿವಿಗೆ ಬಿದ್ದಿತು. ಅಂದಿನಿಂದಲೂ ಈ ಜೋಡಿಯ ಅಭಿಮಾನಿಗಳು ಮತ್ತು ನೆಟ್ಟಿಗರು, ಅವರ ಹಳೆಯ ಫೋಟೋಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರೀ-ಅಪ್ಲೋಡ್ ಮಾಡುತ್ತಿದ್ದಾರೆ. ಈ ಪೈಕಿ, ವಿಜಯ್ ತಾಯಿ, ತಮ್ಮ ಸೊಸೆ ಹೇಗಿರಬೇಕು? ಅವರಿಗೆ ಯಾವ ಗುಣವಿರಬೇಕು ಎಂಬುದನ್ನು ವೇದಿಕೆಯಲ್ಲಿ ಹೇಳಿಕೊಂಡ ವಿಡಿಯೋವೊಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಸದ್ದು ಮಾಡುತ್ತಿದೆ.
2018ರಲ್ಲಿ ನಡೆದ ತೆಲುಗಿನ ಸೂಪರ್ಹಿಟ್ ಚಿತ್ರ 'ಗೀತ ಗೋವಿಂದಂ' ಸಕ್ಸಸ್ ಸಂಭ್ರಮದ ವೇದಿಕೆಯಲ್ಲಿ ವಿಜಯ್ ತಾಯಿಗೆ ನಿರೂಪಕಿ ಒಂದು ಪ್ರಶ್ನೆಯನ್ನು ಕೇಳಿದರು. ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ಮತ್ತು ತಂದೆ ಗೋವರ್ಧನ್ ರಾವ್ ಅವರಿಗೆ ನಿಮ್ಮ ಭಾವಿ ಸೊಸೆ ಹೇಗಿರಬೇಕು ಎಂಬ ಆಸೆಯಿದೆ ಎಂದು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಮಾಧವಿ ಅವರು, ಆಕೆ ನನ್ನ ಮಗನನ್ನು ಎಲ್ಲೇ ಮೀರಿ ಪ್ರೀತಿಸಬೇಕು. ಮುಖ್ಯವಾಗಿ, ಅವನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಇನ್ನು ವಿಜಯ್ ತಂದೆ ಗೋವರ್ಧನ್ ಮಾತನಾಡಿ, "ನನ್ನ ಮಗನಿಗೆ ಯಾರು ಹಿಡಿಸುತ್ತಾರೋ, ಅವರನ್ನೇ ಮದುವೆಯಾಗಲಿ. ಇದಕ್ಕೆ ನಮ್ಮದೇನು ಅಡ್ಡಿಯಿಲ್ಲ. ನನಗೆ ಜಾತಿ ಅಥವಾ ಧರ್ಮದ ಬಗ್ಗೆ ಯಾವುದೇ ಮಾತಿಲ್ಲ. ಆದರೆ, ಭಾರತೀಯ ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದವರನ್ನೇ ಮದುವೆಯಾದರೆ ಇನ್ನೂ ಸಂತೋಷ" ಎಂದು ಹೇಳಿದ್ದರು. ಅಂದು ವಿಜಯ್ ದೇವರಕೊಂಡ ಅವರ ತಂದೆ ಆಡಿದ ಮಾತು ಇದೀಗ ಕಡೆಗೂ ನಿಜವಾಗಿದೆ,(ಏಜೆನ್ಸೀಸ್).