ಪ್ರಮುಖ ಮುಖ್ಯಾಂಶಗಳು
ತೆಲುಗು ನಟ ವಿಕ್ಟರಿ ವೆಂಕಟೇಶ್ ಬಣ್ಣದ ಲೋಕಕ್ಕೆ ಕಾಲಿಟ್ಟು 40 ವರ್ಷಗಳು ಸಂದಿವೆ. ತೆಲುಗಿನ ‘ಕಲಿಯಗ ಪಾಂಡವುಲು’ (1986) ಮೂಲಕ ಸಿನಿ ಜರ್ನಿ ಆರಂಭಿಸಿದ ವೆಂಕಟೇಶ್ ಈ ನಾಲ್ಕು ದಶಕಗಳಲ್ಲಿ 75ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷವಷ್ಟೇ ನಿರ್ದೇಶಕ ಅನಿಲ್ ರವಿಪುಡಿ ಜತೆ ‘ಸಂಕ್ರಾಂತಿಕಿ ವಸ್ತುನ್ನಾಂ’ ಮೂಲಕ ಬ್ಲಾಕ್‌ಬಸ್ಟರ್ ಹಿಟ್ ನೀಡಿದ್ದ ವೆಂಕಿ ಸದ್ಯ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅನಿಲ್ ಮತ್ತು ವೆಂಕಟೇಶ್ ಕಾಂಬಿನೇಷನ್‌ನ ‘ಆದರ್ಶ ಕುಟುಂಬಂ’ ಇದೇ ಅ. 2ಕ್ಕೆ ರಿಲೀಸ್‌ಗೆ ಸಿದ್ಧತೆ ನಡೆಸುತ್ತಿದೆ. ಮತ್ತೊಂದು ಚಿತ್ರದ ಟೈಟಲ್ ನಿಗದಿಪಡಿಸಬೇಕಷ್ಟೇ. ವೆಂಕಟೇಶ್ ಜತೆ ಕಲ್ಯಾಣ್ ರಾಮ್, ಕೀರ್ತಿ ಸುರೇಶ್, ಕೃತಿ ಶೆಟ್ಟಿ ಕಲಾಬಳಗದಲ್ಲಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ವೆಂಕಟೇಶ್ ಚಿತ್ರರಂಗಕ್ಕೆ ಕಾಲಿಟ್ಟ 40 ವರ್ಷಗಳು ಸಂದ ಸಂಭ್ರಮದಲ್ಲಿ ಚಿತ್ರತಂಡ ನಟನ ಸ್ಟ್ ಲುಕ್ ರಿವೀಲ್ ಮಾಡಿದೆ. ‘ಲೆಫ್ಟಿನೆಂಟ್ ಕರ್ನಲ್ ವೆಂಕಟ್ ರೆಡ್ಡಿ’ ಎಂಬ ಸೈನಿಕನ ಪಾತ್ರವನ್ನು ವೆಂಕಟೇಶ್ ನಿರ್ವಹಿಸುತ್ತಿದ್ದು, ಯೋಧನ ಸಮವಸದಲ್ಲಿ ಮಿಂಚಿದ್ದಾರೆ. ಇನ್ನು ಈ ಚಿತ್ರದ ಮೂಲಕ ವೆಂಕಟೇಶ್ ಹಾಗೂ ಅನಿಲ್ ರವಿಪುಡಿ ಐದನೇ ಬಾರಿಗೆ ಒಂದಾಗುತ್ತಿದ್ದಾರೆ. ಈ ಹಿಂದೆ ‘ಎಫ್ 2: ನ್ ಆ್ಯಂಡ್ ಸ್ಟ್ರರೇಷನ್’, ‘ಎಫ್ 3’, ‘ಸಕ್ರಾಂತಿಕಿ ವಸ್ತುನ್ನಾಂ’, ‘ಮನಶಂಕರ ವರ ಪ್ರಸಾದಗಾರು’ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.-ಏಜೆನ್ಸೀಸ್