ವಾರಣಾಸಿ ಚಿತ್ರದ ಲೀಕ್ ದೃಶ್ಯ 
ಟಾಲಿವುಡ್

ವಾರಣಾಸಿಗೂ ತಟ್ಟಿದ ಲೀಕ್ ಬಿಸಿ! : ಮಹೇಶ್‌ಬಾಬು ಚಿತ್ರೀಕರಣದ ದೃಶ್ಯಗಳು ಸೋರಿಕೆ

ಪ್ರಮುಖ ಮುಖ್ಯಾಂಶಗಳು

  • ಹಿಂದಿಯ ಕಿಂಗ್ ಬೆನ್ನಲ್ಲೇ ವಾರಣಾಸಿ ಚಿತ್ರದ ಶೂಟಿಂಗ್ ವಿಡಿಯೋ ಲೀಕ್​
  • ಎಚ್ಚೆತ್ತುಕೊಂಡು, ಕಟ್ಟುನಿಟ್ಟು ವಹಿಸಿದ ಚಿತ್ರತಂಡ
  • ಮುಂದಿನ ವರ್ಷದ ಏಪ್ರಿಲ್ ನಲ್ಲಿ ಸಿನಿಮಾ ರಿಲೀಸ್

ಎಷ್ಟೇ ಮುಂಜಾಗ್ರತೆ, ಸುರಕ್ಷತೆ ಹಾಗೂ ಕಠಿಣ ಕ್ರಮ ವಹಿಸಿದರೂ ಬಿಗ್‌ಬಜೆಟ್ ಚಿತ್ರಗಳ ಶೂಟಿಂಗ್ ಸಮಯದಲ್ಲಿನ ಫೋಟೋ, ವಿಡಿಯೋಗಳು ಸೋರಿಕೆಯಾಗುತ್ತಿರುವುದ ಕಡಿಮೆಯಾಗುತ್ತಿಲ್ಲ. ಇತ್ತೀಚೆಗೆ ನಟ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಚಿತ್ರದ ಆ್ಯಕ್ಷನ್ ಫೋಟೋವೊಂದು ಲೀಕ್ ಆಗಿತ್ತು. ಈಗ ಲೀಕ್ ಆಗಿರುವುದು ಸೇರಿ ‘ಕಿಂಗ್’ ದೃಶ್ಯ ಸೋರಿಕೆಯಾಗುತ್ತಿರುವುದು ನಾಲ್ಕನೇ ಬಾರಿಗೆ. ಹೀಗಿರುವಾಗಲೇ ಮತ್ತೊಂದು ಪ್ಯಾನ್ ವರ್ಲ್ಡ್ ಚಿತ್ರದ ದೃಶ್ಯ ಸೋರಿಕೆಯಾಗಿದೆ. ಹೌದು, ಎಸ್.ಎಸ್.ರಾಜಮೌಳಿ ನಿರ್ದೇಶನದ, ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಅಭಿನಯದ ‘ವಾರಣಾಸಿ’ ಚಿತ್ರದ ಪ್ರಮುಖದ ದೃಶ್ಯದ ಶೂಟಿಂಗ್ ವಿಡಿಯೋ ಸೋರಿಕೆಯಾಗಿದೆ. ನಟ ಮಹೇಶ್‌ಬಾಬು ನದಿಯಲ್ಲಿ ಮುಳುಗುತ್ತಿರುವ ದೃಶ್ಯ ಇದಾಗಿದೆ. ಇದರಿಂದಾಗಿ ಸದ್ಯ ರಾಜಮೌಳಿ ಚಿತ್ರೀಕರಣ ವೇಳೆ ಕಟ್ಟು ನಿಟ್ಟು ವಹಿಸಿದ್ದಾರೆ. ಚಿತ್ರೀಕರಣ ಸೆಟ್‌ನಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆಯೂ ‘ವಾರಣಾಸಿ’ ಚಿತ್ರದ ಸೆಟ್ ಹಾಗೂ ಫೋಟೋಗಳು ಲೀಕ್ ಆಗಿದ್ದವು. ಟೀಸರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದಿದ್ದ ಅಂತಾರಾಷ್ಟ್ರೀಯ ಪತ್ರಕರ್ತರು, ‘ವಾರಣಾಸಿ’ ನಗರವನ್ನು ಮರುಸೃಷ್ಟಿಸಿರುವ ಸೆಟ್‌ನ ಫೋಟೋಗಳನ್ನು ಲೀಕ್ ಮಾಡಿದ್ದರು. ಇದೀಗ ಮತ್ತೊಮ್ಮೆಸೋರಿಕೆಯಾಗಿದೆ. -ಏಜೆನ್ಸೀಸ್.