ವಾರಣಾಸಿ ಸಿನಿಮಾ  
ಟಾಲಿವುಡ್

ಅದ್ಧೂರಿ ಟೈಟಲ್​ ಲಾಂಚ್​ ಬೆನ್ನಲ್ಲೇ ರಾಜಮೌಳಿ-ಮಹೇಶ್ ಬಾಬು ಕಾಂಬೊ ಚಿತ್ರಕ್ಕೆ ಎದುರಾಯ್ತು ಸಂಕಷ್ಟ

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗಷ್ಟೇ ಅದ್ಧೂರಿ ಟೈಟಲ್ ಲಾಂಚ್​
  • ಮಹೇಶ್​ ಬಾಬು ಚಿತ್ರಕ್ಕೆ 'ವಾರಣಾಸಿ' ಫಿಕ್ಸ್​
  • ಒಂದೇ ಶೀರ್ಷಿಕೆ ಎರಡು ಚಿತ್ರಕ್ಕೆ!
ಆಂಧ್ರಪ್ರದೇಶ: ಇತ್ತೀಚೆಗಷ್ಟೇ ಹೈದರಾಬಾದ್​ನಲ್ಲಿ ನಡೆದ ಅದ್ಧೂರಿ ವೇದಿಕೆಯಲ್ಲಿ ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಮತ್ತು ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರದ ಶೀರ್ಷಿಕೆ ರಿವೀಲ್​ ಆಯಿತು. 'ವಾರಣಾಸಿ' ಎಂಬ ಟೈಟಲ್​ ಕೇಳ್ತಿದ್ದಂತೆ ಸಖತ್ ಥ್ರಿಲ್​ ಆದ ಅಭಿಮಾನಿಗಳಿಗೆ ಇದೀಗ ಶಾಕಿಂಗ್ ಸುದ್ದಿಯೊಂದು ಕೇಳಿ ಆಶ್ಚರ್ಯ ಮೂಡಿದೆ.
ರಾಜಮೌಳಿ 'ಗ್ಲೋಬ್‌ಟ್ರಾಟರ್' ಎಂಬ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಟೈಟಲ್​ ಅನ್ನು ಅಧಿಕೃತವಾಗಿ ಘೋಷಿಸಿದರು. ಆದರೀಗ, ಅದೇ ಶೀರ್ಷಿಕೆ ರಾಜಮೌಳಿ ಅವರನ್ನು ಸಂಕಷ್ಟಕ್ಕೆ ತಂದೊಡ್ಡಿದೆ. ಅಸಲಿಗೆ ಆಗಿದ್ದೇನು? ಎಂದು ನೋಡುವುದಾದರೆ, ಸಾಯಿ ಕುಮಾರ್ ಮತ್ತು ರಾಕುಲ್ ಪ್ರೀತ್ ಸಿಂಗ್ ನಟಿಸಿದ 'ರಫ್' ಚಿತ್ರವನ್ನು ನಿರ್ದೇಶಿಸಿದ್ದ ಸಿಎಚ್ ಸುಬ್ಬಾ ರೆಡ್ಡಿ ಬಹಳ ಸಮಯದ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆದಾಗ್ಯೂ, ಈ ಚಿತ್ರಕ್ಕೂ 'ವಾರಣಾಸಿ' ಎಂಬ ಶೀರ್ಷಿಕೆಯನ್ನೇ ಇಡಲಾಗಿದೆ. ಇದೇ ಈಗ ಸಮಸ್ಯೆಗೆ ಕಾರಣವಾಗಿರುವುದು.
ತಮ್ಮ ಸಿನಿಮಾದ ಅಧಿಕೃತ ಪೋಸ್ಟರ್ ಅನ್ನು ಕೆಲವು ದಿನಗಳ ಹಿಂದೆಯಷ್ಟೇ ಬಿಡುಗಡೆಗೊಳಿಸಿದ್ದ ನಿರ್ಮಾಪಕರು, ಇದೀಗ ನಿರ್ದೇಶಕ ರಾಜಮೌಳಿ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದಾರೆ. ದುರ್ಗಾ ಆರ್ಟ್ಸ್ ನಿರ್ಮಿಸಿದ 'ವಾರಣಾಸಿ' ಶೀರ್ಷಿಕೆಯನ್ನು ರಾಮಬ್ರಹ್ಮ ಹನುಮ ಕ್ರಿಯೇಷನ್ಸ್‌ನಲ್ಲಿ ತಮಗಿಂತ ಮೊದಲು ರಿಜಿಸ್ಟರ್​ ಮಾಡಿಸಲಾಗಿದೆ ಎಂಬ ದೂರಿನ ಪತ್ರವನ್ನು ಮಂಡಳಿಗೆ ಸಲ್ಲಿಸಿದ್ದಾರೆ. ರಾಮ ಬ್ರಹ್ಮಂ ಕ್ರಿಯೇಷನ್ಸ್ ನಿರ್ಮಾಪಕ ವಿಜಯ್ ಕೆ ಅವರು, ರಾಜಮೌಳಿ ನಮ್ಮ ಅನುಮತಿಯಿಲ್ಲದೆ ನಾವು ನೋಂದಾಯಿಸಿದ ಟೈಟಲ್​ ಅನ್ನೇ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ,(ಏಜೆನ್ಸೀಸ್).