- ನಟನೆ ಜೊತೆ ಜೊತೆಗೆ ವೈದ್ಯ ಲೋಕಕ್ಕೂ ಎಂಟ್ರಿಕೊಟ್ಟ ಬ್ಯೂಟಿಗಳು
- ಇತ್ತೀಚೆಗಷ್ಟೇ, ಶ್ರೀಲೀಲಾ ತಮ್ಮ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದರು
- ಈ ಪಟ್ಟಿಯಲ್ಲಿ ಶ್ರೀಲೀಲಾ ಮಾತ್ರವಲ್ಲ ಇನ್ನೂ ಹಲವು ನಟಿಯರಿದ್ದಾರೆ
ಬೆಂಗಳೂರು: ನಮ್ಮೆಲ್ಲರಿಗೂ ತಿಳಿದುವರಂತೆ ಬಹುತೇಕ ಕ್ಷೇತ್ರಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳಬೇಕು ಎಂದರೆ ಅದಕ್ಕೆ ಇಂತಿಂತ ಅರ್ಹತೆಗಳ ಅಗತ್ಯವಿರುತ್ತದೆ. ಇಷ್ಟೇ ಓದಿರಬೇಕು, ಈ ಪದವಿಗಳನ್ನು ಪೂರ್ಣಗೊಳಿಸಿರಬೇಕು ಎಂದೆಲ್ಲ ಷರತ್ತುಗಳಿರುತ್ತವೆ. ಆದರೆ, ರಾಜಕೀಯ ಮತ್ತು ಸಿನಿಮಾ ಕ್ಷೇತ್ರಗಳಿಗೆ ಯಾವುದೇ ಅನುಭವ ಅಥವಾ ಡಿಗ್ರಿಗಳ ಅಗತ್ಯತೆ ಇಲ್ಲ. ಒಂದಕ್ಕೆ ಅನುಭವಿದ್ದರೆ, ಇನ್ನೊಂದಕ್ಕೆ ನಟಿಸುವ ರಸವಿರಬೇಕು.
ಕನ್ನಡದ 'ಕಿಸ್' ಬೆಡಗಿ
ಅದರಲ್ಲೂ ಚಿತ್ರರಂಗದಲ್ಲಿ ನಟಿ ಅಥವಾ ನಟನಾಗುವ ಅವಕಾಶ ಸಿಕ್ಕರೆ, ಎಷ್ಟು ಜನ ಬಿಡ್ತಾರಾ ಹೇಳಿ? ಬಹುತೇಕರು ಇಂತಹ ಚಾನ್ಸ್ ಮಿಸ್ ಮಾಡಿಕೊಳ್ಳಬಾರದು ಎಂದು ತಾವಿರುವ ಪರಿಸ್ಥಿತಿ, ತಮ್ಮ ಕೆಲಸ-ಕಾರ್ಯಗಳನ್ನು ಬಿಟ್ಟು ದಿಢೀರ್ ಜಿಗಿದು ಬಿಡುತ್ತಾರೆ. ಕೆಲವರು ತಾವು ಅದಾಗಲೇ ಮಾಡುತ್ತಿರುವ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟು ಚಿತ್ರೋದ್ಯಮಕ್ಕೆ ಎಂಟ್ರಿಕೊಟ್ಟರೆ, ಇನ್ನೂ ಕೆಲವರು ಅದನ್ನೂ ನಿರ್ವಹಿಸುತ, ಇತ್ತ ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರಿಯರಿಂದ ಸೈಎನಿಸಿಕೊಳ್ಳುತ್ತಾರೆ. ಆ ಪೈಕಿ ಈ ಸ್ಟಾರ್ ನಟಿಮಣಿಯರು ಕೂಡ ಹೌದು.
ಎಂಬಿಬಿಎಸ್ ಓದುತ್ತಲೇ ತಮ್ಮ ಸಿನಿ ಕರಿಯರ್ ಅನ್ನು ಯಶಸ್ವಿಯಾಗಿ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಅತ್ತ ಪದವಿಯನ್ನೂ ಮುಗಿಸಿ, ಇತ್ತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದಾರೆ. ಇದಕ್ಕೆ ಜ್ವಲಂತ ಸಾಕ್ಷಿ ಕನ್ನಡದ 'ಕಿಸ್' ಬೆಡಗಿ ಶ್ರೀಲೀಲಾ. ಇತ್ತೀಚೆಗಷ್ಟೇ, ತಮ್ಮ ಎಂಬಿಬಿಎಸ್ ಪದವಿ ಪೂರ್ಣಗೊಳಿಸಿದ ನಟಿ, ಅಭಿಮಾನಿಗಳಿಂದ ಮೆಚ್ಚುಗೆ, ಅಭಿನಂದನೆಗಳ ಮಹಾಪೂರವನ್ನೇ ಸ್ವೀಕರಿಸಿದರು. ಪ್ರಸ್ತುತ, ಟಾಲಿವುಡ್, ಸ್ಯಾಂಡಲ್ವುಡ್ ಮತ್ತು ಬಾಲಿವುಡ್ನಲ್ಲಿ ಮಿಂಚುತ್ತಿರುವ ಶ್ರೀಲೀಲಾ, ಎರಡನ್ನೂ ಹ್ಯಾಂಡಲ್ ಮಾಡಿ, ಹಲವರಿಗೆ ಮಾದರಿಯಾದ ರೀತಿಗೆ ಚಿತ್ರಪ್ರೇಮಿಗಳು ವಿಶೇಷವಾಗಿ ಅಭಿನಂದಿಸಿದ್ದಾರೆ.
ನಾಚ್ಯುರಲ್ ಬ್ಯೂಟಿ
ಇದೇ ರೀತಿ ಜಾರ್ಜಿಯಾದಲ್ಲಿ ಎಂಬಿಬಿಎಸ್ ಓದುತ್ತಿರುವಾಗ ನಟಿಯಾಗಿ ವೃತ್ತಿಜೀವನ ಆರಂಭಿಸಿದ ಬಹುಭಾಷಾ ನಟಿ, ನಾಚ್ಯುರಲ್ ಬ್ಯೂಟಿ ಸಾಯಿ ಪಲ್ಲವಿ, ಒಂದೆಡೆ ನಟನೆಯನ್ನು ಮುಂದುವರೆಸಿ ಮತ್ತೊಂದೆಡೆ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದರು. ಪ್ರಸ್ತುತ, ಬಿಡುವಿಲ್ಲದ ಶೆಡ್ಯೂಲ್ನಲ್ಲಿ ಸಖತ್ ಬಿಜಿಯಾಗಿರುವ ನಟಿ, ಭವಿಷ್ಯದಲ್ಲಿ ವೈದ್ಯೆಯಾಗಿ ಬಂದರೆ ಆಶ್ಚರ್ಯವಿಲ್ಲ ಎಂದೇ ಹೇಳಬಹುದು.
ಮತ್ತೊಬ್ಬ ಟಾಲಿವುಡ್ ಬೆಡಗಿ ಕಾಮಾಕ್ಷಿ ಭಾಸ್ಕರ್ಲಾ ಇವರಿಬ್ಬರಿಗಿಂತ ಕೊಂಚ ಡಿಫರೆಂಟ್ ಎನ್ನಬಹುದು. ನೆಚ್ಚಿನ ನಟನಾ ವೃತ್ತಿಗಾಗಿ ತಮ್ಮ ವೈದ್ಯ ವೃತ್ತಿಯಿಂದ ದೂರವಿದ್ದ ಈಕೆ, ಚೀನಾದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಕೆಲವು ವರ್ಷಗಳ ಕಾಲ ವೈದ್ಯೆಯಾಗಿ ಕೆಲಸ ಮಾಡಿದರು. ಆ ನಂತರ ಚಿತ್ರರಂಗಕ್ಕೆ ವಾಪಾಸ್ ಆದರು. ಇನ್ನು 'ಗೋಡ್ಸೆ' ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ ನಟಿ ಐಶ್ವರ್ಯ ಲಕ್ಷ್ಮಿ ಕೂಡ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ, ತೆಲುಗಿನಲ್ಲಿ ಸದ್ದು ಮಾಡುತ್ತಿರುವ ಈ ಸುಂದರಿ, ಕೇರಳದಲ್ಲಿ ತನ್ನ ವೈದ್ಯಕೀಯ ಶಿಕ್ಷಣವನ್ನು ಮುಗಿಸಿದ್ದಾರೆ,(ಏಜೆನ್ಸೀಸ್).