ಟಾಲಿವುಡ್ ನಟಿ ನಟಿ ಕಾಮಾಕ್ಷಿ ಭಾಸ್ಕರ್ಲಾ
- ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿದೆ
- ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ
- ಅದೇ ರೀತಿಯ ಕಾಮೆಂಟ್ಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಖಡಕ್ ಉತ್ತರ ನೀಡಿದ್ದಾರೆ
Kamakshi Bhaskarla : ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವ ಚಾಳಿ ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ನಟಿಯರ ಮನಸ್ಸು ಕದಡುವಂತಹ ಕಾಮೆಂಟ್ ಮಾಡುವುದು ಕೆಲ ನೆಟ್ಟಿಗರಿಗೆ ಅಭ್ಯಾಸವಾಗಿದೆ. ಒಂದಿಷ್ಟು ನಟಿಯರು ಕಾಮೆಂಟ್ಗಳನ್ನು ನಿರ್ಲಕ್ಷಿಸಿದರೆ, ಇನ್ನೊಂದಿಷ್ಟು ನಟಿಯರು ತಮ್ಮ ವಿರುದ್ಧದ ಕಾಮೆಂಟ್ಗಳಿಗೆ ತಕ್ಕ ಉತ್ತರ ನೀಡುವುದನ್ನು ನೋಡಿದ್ದೇವೆ. ಇದೀಗ ಅದೇ ರೀತಿಯ ಕಾಮೆಂಟ್ಗೆ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಖಡಕ್ ಉತ್ತರ ನೀಡಿದ್ದಾರೆ.
ಕಾಮಾಕ್ಷಿ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ತಮ್ಮ ಫಾಲೋವರ್ಸ್ ಜತೆ ಪ್ರಶ್ನೋತ್ತರ ಚಟುವಟಿಕೆ ನಡೆಸಿದ್ದರು. ಫಾಲೋವರ್ಸ್ ಕೇಳುವ ಪ್ರಶ್ನೆಗೆ ಉತ್ತರಿಸುವುದು ಕಾಮಾಕ್ಷಿ ಅವರ ಕೆಲಸವಾಗಿತ್ತು. ಈ ವೇಳೆ ನೆಟ್ಟಿಗನೊಬ್ಬ ಕೇಳಿದ ಅಶ್ಲೀಲ ಪ್ರಶ್ನೆಗೆ ಕಾಮಾಕ್ಷಿ ಅವರು ಖಡಕ್ ಉತ್ತರವನ್ನು ನೀಡಿದ್ದಾರೆ.
ಅಷ್ಟಕ್ಕೂ ನೆಟ್ಟಿಗ ಕೇಳಿದ ಪ್ರಶ್ನೆ ಏನೆಂದರೆ, ನಿಮ್ಮಿಷ್ಟದ ಪೊಷಿಸನ್ (ಲೈಂಗಿಕ ಭಂಗಿ) ಯಾವುದು? ಅನ್ನೋದು. ಇದಕ್ಕೆ ಉತ್ತರಿಸಿರುವ ಕಾಮಾಕ್ಷಿ, ನನ್ನಿಷ್ಟದ ಪೊಷಿಸನ್ ಬಗ್ಗೆ ನಾನು ವಿವರಣೆ ನೀಡಲಾರೆ. ನಾನು ಯಾವ ಪೊಷಿಸನ್ನಲ್ಲಿದ್ದೇನೆ ಅದನ್ನು ಗೌರವಿಸುತ್ತೇನೆ. ನಾನು ನನ್ನ ಆಯ್ಕೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದ್ದೇನೆ. ಅದು ನನ್ನ ವೃತ್ತಿ ಜೀವನದಲ್ಲಾಗಿರಬಹುದು ಅಥವಾ ವೈಯಕ್ತಿಕ ಜೀವನದಲ್ಲಾಗಿರಬಹುದು ಎಂದು ಹೇಳಿದ್ದಾರೆ.
ಈ ವಿಡಿಯೋ ನೋಡುತ್ತಿರುವವರಿಗೆ ನಾನು ಹೇಳುವುದೇನೆಂದರೆ, ನಿಮ್ಮ ಜೀವನದಲ್ಲಿ ಸ್ಪಷ್ಟತೆ ಮತ್ತು ಆತ್ಮಗೌರವ ಇರಲಿ. ಏಕೆಂದರೆ, ಜೀವನದ ಅನುಭವ ನಿಮ್ಮನ್ನು ಬಲವಾದ ಸ್ಥಾನದಲ್ಲಿ ಇರಿಸುತ್ತದೆ ಮತ್ತು ನಿಮ್ಮ ಜೀವನಕ್ಕೆ ಮೌಲ್ಯವನ್ನು ತುಂಬುತ್ತದೆ ಎನ್ನುವ ಮೂಲಕ ಪ್ರಶ್ನೆ ಕೇಳಿದವನಿಗೆ ಖಡಕ್ ಉತ್ತರ ನೀಡಿದ್ದಾರೆ.
ಅಂದಹಾಗೆ, ಕನ್ನಡಿಗರಿಗೆ ಕಾಮಾಕ್ಷಿ ಪರಿಚಯ ಇಲ್ಲದಿರಬಹುದು ಆದರೆ, ಅವರು ನಟಿಸಿದ ಸಿನಿಮಾಗಳಂತೂ ನೆನಪಿನಲ್ಲಿರುತ್ತವೆ. ಅಂತಹ ಚಿತ್ರಗಳಲ್ಲಿ ಪೋಲಿಮೆರಾ ಹಾಗೂ ದೂತಾ ಕೂಡ ಸೇರಿವೆ. ಈ ಚಿತ್ರಗಳನ್ನು ನೋಡಿದವರು ಯಾರೂ ಕಾಮಾಕ್ಷಿ ಅವರನ್ನು ಮರೆಯುವುದಿಲ್ಲ. ಈ ಸುಂದರಿ ತನ್ನ ಅಭಿನಯದಿಂದಲೇ ಪ್ರೇಕ್ಷಕರನ್ನು ತಮ್ಮತ್ತ ಸೆಳೆದಿದ್ದಾರೆ.
ಅಂದಹಾಗೆ, ಕಾಮಾಕ್ಷಿ ಅವರು ತುಂಬಾ ಗ್ಲಾಮರಸ್ ಬೆಡಗಿ. ಅವರ ಇನ್ಸ್ಟಾಗ್ರಾಂ ಪೇಜ್ ತೆಗೆದು ನೋಡಿದರೆ ಬಿಕಿನಿ ಮತ್ತು ಅರೆಬೆತ್ತಲೆ ಫೋಟೋಗಳೇ ತುಂಬಿವೆ. ಆದರೆ, ಪೋಲಿಮೆರಾ ಚಿತ್ರದಲ್ಲಿ ಕಾಮಾಕ್ಷಿ ಡಿಗ್ಲಾಮರಸ್ ಆಗಿ ಕಾಣಿಸಿಕೊಂಡರು. ಇನ್ಸ್ಟಾದಲ್ಲಿ ಅವರ ಫೋಟೋಗಳನ್ನು ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
ಕೊನೆಯದಾಗಿ ಈ ಬೆಡಗಿ '12A ರೈಲ್ವೆ ಕಾಲನಿ' ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲರಿ ನರೇಶ್ ನಾಯಕನಾಗಿ ನಟಿಸಿರುವ ಈ ಚಿತ್ರವೂ ಒಂದು ಥ್ರಿಲ್ಲರ್ ಸಿನಿಮಾ. ಆದರೆ, ಬಾಕ್ಸ್ಆಫೀಸ್ನಲ್ಲಿ ಯಶಸ್ಸು ಸಾಧಿಸಲಿಲ್ಲ, (ಏಜೆನ್ಸೀಸ್).