- ಲಾವಣ್ಯ ಕೊಟ್ಟ ದೂರಿನಿಂದ ವಿವಾದಕ್ಕೆ ಗುರಿಯಾಗಿದ್ದ ರಾಜ್ ತರುಣ್
- ವಿವಾದಕ್ಕೆ ಸಂಬಂಧಿಸಿದಂತೆ ರಾಜ್ ಪ್ರತಿಕ್ರಿಯೆ
- ಏನದು ರಾಜ್-ಲಾವಣ್ಯ ವಿವಾದ
ಆಂಧ್ರಪ್ರದೇಶ: ಕಳೆದ ವರ್ಷ ತನ್ನ ಪ್ರೇಯಸಿ ಲಾವಣ್ಯ ಕೊಟ್ಟ ದೂರಿನಿಂದ ದೊಡ್ಡ ಮಟ್ಟದ ವಿವಾದಕ್ಕೆ ಗುರಿಯಾಗಿದ್ದ ಟಾಲಿವುಡ್ ಯುವ ನಟ ರಾಜ್ ತರುಣ್, ಲಾವಣ್ಯಾಳನ್ನು ಪ್ರೀತಿಯ ಜಾಲಕ್ಕೆ ಬೀಳಿಸಿ, ಮದುವೆಯಾಗುವುದಾಗಿ ಭರವಸೆ ಕೊಟ್ಟು ವಂಚಿಸಿ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಘಟನೆಯಿಂದ ತೀರ ಮನನೊಂದ ಲಾವಣ್ಯ, ಪ್ರಿಯಕರ ರಾಜ್ ವಿರುದ್ಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ವಿಚಾರ ಹಲವು ತಿಂಗಳುಗಳ ಕಾಲ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೀಗ, ವಿವಾದಕ್ಕೆ ಸಂಬಂಧಿಸಿದಂತೆ ರಾಜ್ ಪ್ರತಿಕ್ರಿಯಿಸಿದ್ದಾರೆ.
'ಕುಮಾರಿ 21F', 'ಈಡೋರಕ್ಕಂ', 'ಆಡೋರಕ್ಕಂ' ಸೇರಿ ಕೆಲವು ಹಿಟ್ ಸಿನಿಮಾಗಳ ಮೂಲಕ ತೆಲುಗು ಮಂದಿಗೆ ಪರಿಚಿತವಾಗಿದ್ದ ರಾಜ್ ತರುಣ್, ಇದೊಂದು ವಿವಾದದಿಂದ ಭಾರೀ ಟೀಕೆಗೆ ಗುರಿಯಾದರು. ಅಂದಿನಿಂದ ಎಲ್ಲಿಯೂ ಈ ವಿಚಾರಕ್ಕೆ ಸಂಬಂಧಿಸಿದಂತೆ ತುಟಿ ಬಿಚ್ಚದ ಯುವನಟ, ಇದೀಗ ತಮ್ಮ ಮುಂಬರುವ ಚಿತ್ರದ ವೇದಿಕೆಯಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
"ಪಂಚ ಮಿನಾರ್" ಎಂಬ ಹೊಸ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ರಾಜ್ ತರುಣ್, "ಅನೇಕರು ನನ್ನ ಬಗ್ಗೆ ಹಲವು ರೀತಿಯಲ್ಲಿ ಮಾತನಾಡಿದ್ದಾರೆ. ಆದರೆ, ವಿವಾದದ ಬಗ್ಗೆ ಎಲ್ಲಿಯೂ ನಾನು ಪ್ರತಿಕ್ರಿಯಿಸಿಲ್ಲ. ಅದಕ್ಕೆ ಕಾರಣ ನಾನು ಉತ್ತರಿಸಲು ಸಾಧ್ಯವಿಲ್ಲ ಅಂತಲ್ಲ. ಮತ್ತೆ ಹಿಂತಿರುಗಿ ನೋಡಲು ಇಷ್ಟವಿಲ್ಲ. ನಾನೊಂದು ರೀತಿ ಸ್ಪ್ರಿಂಗ್ ಇದ್ದಂತೆ. ಅದನ್ನು ಎಷ್ಟು ನೀವು ಒತ್ತಿ ಹಿಡಿಯುತ್ತೀರೋ, ಅದು ಅಷ್ಟೇ ವೇಗವಾಗಿ ಎತ್ತರಕ್ಕೆ ಹಾರುತ್ತದೆ. ಅಂತೆಯೇ ನಾನು. ಚಿತ್ರೋದ್ಯಮದಲ್ಲಿ ನನ್ನನ್ನು ತುಳಿಯಲು ಅನೇಕ ಪ್ರಯತ್ನಗಳು ನಡೆದಿವೆ. ಅದೂ ನನ್ನ ಪಾತ್ರ ಇಲ್ಲದಿದ್ದರೂ ಸಹ" ಎಂದಿದ್ದಾರೆ.
ಏನದು ರಾಜ್-ಲಾವಣ್ಯ ವಿವಾದ?
11 ವರ್ಷಗಳ ಲಿವ್ಇನ್ ರಿಲೇಷನ್ಶಿಪ್ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಲಾವಣ್ಯ ಗಂಭೀರ ಆರೋಪ ಹೊರಿಸಿದ್ದರು. ತನಗೆ ರಾಜ್ನಿಂದ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರ,(ಏಜೆನ್ಸೀಸ್).