ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದಿಂದ ಹಿರಿಯ ನಟ ಪ್ರಕಾಶ್ ರಾಜ್ಗೆ ಗೇಟ್ಪಾಸ್
- ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದ ಶೂಟಿಂಗ್ ಆರಂಭವಾಗಿದೆ
- ಕಲ್ಟ್ ನಿರ್ದೇಶಕನೆಂದೇ ಹೆಸರುವಾಸಿಯಾಗಿರುವ ಸಂದೀಪ್ ರೆಡ್ಡಿ ವಂಗಾ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ
- ಬೋಲ್ಡ್ ದೃಶ್ಯಗಳಿಂದಲೇ ಸದ್ದು ಮಾಡಿದ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ
- ಇತ್ತೀಚಗಷ್ಟೇ ಸ್ಪಿರಿಟ್ ಚಿತ್ರದ ಒಂದು ಸುದ್ದಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ
Prakash Raj : ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಸ್ಪಿರಿಟ್ ಚಿತ್ರದ ಶೂಟಿಂಗ್ ಆರಂಭವಾಗಿದೆ. ಕಲ್ಟ್ ನಿರ್ದೇಶಕನೆಂದೇ ಹೆಸರುವಾಸಿಯಾಗಿರುವ ಸಂದೀಪ್ ರೆಡ್ಡಿ ವಂಗಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಅನಿಮಲ್ ಚಿತ್ರದಲ್ಲಿ ತಮ್ಮ ಬೋಲ್ಡ್ ದೃಶ್ಯಗಳಿಂದಲೇ ಸದ್ದು ಮಾಡಿದ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ 2027ರಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಈಗಾಗಲೇ ಬಿಡುಗಡೆಯಾಗಿರುವ ವಾಯ್ಸ್ ಟೀಸರ್ ಮತ್ತು ಪ್ರಭಾಸ್ ಅವರ ಫಸ್ಟ್ ಲುಕ್ ಪೋಸ್ಟರ್ ಭಾರಿ ಪ್ರತಿಕ್ರಿಯೆ ಪಡೆದುಕೊಂಡಿದೆ.
ಈಗಾಗಲೇ ಸ್ಪಿರಿಟ್ ಸಿನಿಮಾ ಮೇಲಿನ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈ ಚಿತ್ರಕ್ಕೆ ಸಂಬಂಧಿಸಿದ ಸಣ್ಣ ಸುದ್ದಿಗಳು ಕೂಡ ಸೆಕೆಂಡುಗಳಲ್ಲಿ ವೈರಲ್ ಆಗುತ್ತಿವೆ. ಇತ್ತೀಚಗಷ್ಟೇ ಸ್ಪಿರಿಟ್ ಚಿತ್ರದ ಒಂದು ಸುದ್ದಿ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅದೇನೆಂದರೆ, ಹಿರಿಯ ನಟ ಪ್ರಕಾಶ್ ರಾಜ್ ಅವರನ್ನು ಈ ಚಿತ್ರದಿಂದ ಕೈಬಿಡಲಾಗಿದೆ ಎಂಬ ಸುದ್ದಿ ಕೇಳಿಬರುತ್ತಿದೆ.
ಅಂದಹಾಗೆ, ಸ್ಪಿರಿಟ್ ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಏಕೆಂದರೆ, ಸ್ಪಿರಿಟ್ ಸಿನಿಮಾದ ವಾಯ್ಸ್ ಟೀಸರ್‌ನಲ್ಲಿ ಪ್ರಕಾಶ್ ರಾಜ್ ಅವರ ಪಾತ್ರವನ್ನು ಪರಿಚಯಿಸಲಾಗಿತ್ತು. ಹೀಗಾಗಿ, ಈ ಚಿತ್ರದಲ್ಲಿ ಪ್ರಕಾಶ್ ರಾಜ್ ವಿಶೇಷ ಆಕರ್ಷಣೆಯಾಗುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇದೀಗ ಸ್ಪಿರಿಟ್ ಸಿನಿಮಾದಿಂದ ಅವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಬರುತ್ತಿದೆ.
ಪ್ರಕಾಶ್ ರಾಜ್ ಅವರು ಅನಿರೀಕ್ಷಿತವಾಗಿ ಸ್ಪಿರಿಟ್ನಿಂದ ಹೊರನಡೆದಿದ್ದಾರೆ ಎಂದು ಹೇಳಲಾಗಿದೆ. ಅಧಿಕೃತ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ಈ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ವೈರಲ್ ಆಗಿದೆ. ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂದು ತಿಳಿಯಲು, ಸಿನಿಮಾ ತಂಡದಿಂದ ಅಧಿಕೃತ ಘೋಷಣೆ ಬರುವವರೆಗೆ ಕಾಯಬೇಕಾಗಿದೆ.
ಕೆಲ ಸಿನಿಮಾ ಮೂಲಗಳ ಪ್ರಕಾರ, ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಜೊತೆಗಿನ ಕ್ರಿಯೇಟಿವ್ ಡಿಫರೆನ್ಸ್ ಮತ್ತು ಸೆಟ್‌ನಲ್ಲಿ ನಡೆದ ತೀವ್ರ ವಾದ-ವಿವಾದದಿಂದಾಗಿ ಪ್ರಕಾಶ್ ರಾಜ್ ಚಿತ್ರದಿಂದ ಹೊರಗುಳಿದ್ದಾರೆ ಎಂದು ವರದಿಗಳು ತಿಳಿಸಿವೆ. ಸ್ಕ್ರಿಪ್ಟ್ ಮತ್ತು ನಿರ್ದಿಷ್ಟ ಸೀನ್‌ಗಳ ನಿರ್ವಹಣೆಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದೆ ಎಂಬ ಮಾತು ಸಹ ಇದೆ.
ಈ ಹಿಂದೆ ನಾಯಕಿ ದೀಪಿಕಾ ಪಡುಕೋಣೆ ಅವರನ್ನು ಸ್ಪಿರಿಟ್ ಚಿತ್ರದಿಂದ ಕೈಬಿಡಲಾಯಿತು. ಆ ವೇಳೆ ಇದು ಕೂಡ ದೊಡ್ಡ ಸುದ್ದಿಯಾಯಿತು. ಇದೀಗ ಪ್ರಕಾಶ್ ರಾಜ್, ಸಿನಿಮಾದಿಂದ ಹೊರಬಂದಿದ್ದಾರೆ ಎಂಬ ವದಂತಿ ಕೂಡ ಭಾರಿ ಸುದ್ದಿಯಾಗುತ್ತಿದೆ. ಒಂದಲ್ಲ ಒಂದು ವಿಚಾರಕ್ಕೆ ಸ್ಪಿರಿಟ್ ಸಿನಿಮಾ ಸುದ್ದಿಯಾಗುತ್ತಲೇ ಇದೆ, (ಏಜೆನ್ಸೀಸ್).