- ಸ್ಟಾರ್ ನಟನ ಕೆನ್ನೆಗೆ ಬಾರಿಸಿದ್ದರಂತೆ ನಟಿ ಪೂಜಾ ಹೆಗ್ಡೆ
- ಬಿಗ್ ಬಿಜೆಟ್ ಚಿತ್ರದ ಚಿತ್ರೀಕರಣದ ವೇಳೆ ಕಹಿ ಘಟನೆ
- ಸಂದರ್ಶನವೊಂದರಲ್ಲಿ ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಸೌತ್ ಬ್ಯೂಟಿ
- ಅಸಲಿಗೆ ಇದೊಂದು ಸುಳ್ಳು ಸುದ್ದಿ ಎಂದು ಹೇಳಲಾಗುತ್ತಿದೆ
Pooja Hegde: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಕೂಲಿ’ ಚಿತ್ರದ 'ಮೋನಿಕಾ' ಹಾಡಿನಲ್ಲಿ ಮಿಂಚಿದ ಸೌತ್ ಬ್ಯೂಟಿ ಪೂಜಾ ಹೆಗ್ಡೆ, ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ 'ಜನನಾಯಗನ್' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ತೆರೆ ಕಾಣುವುದಷ್ಟೇ ಬಾಕಿ ಇದೆ. ಸದ್ಯ ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಸಖತ್ ಬಿಜಿಯಾಗಿರುವ ಪೂಜಾ, ತಮ್ಮ ಕರಿಯರ್ನಲ್ಲಿಯೂ ಕಹಿ ಘಟನೆಯೊಂದು ನಡೆದಿದೆ ಎಂಬುದನ್ನು ಇದೀಗ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾಗಿ ತೆಲುಗು ಸಿನಿ ವರದಿಗಳು ತಿಳಿಸಿವೆ. ಆದರೆ, ಇದು ಎಷ್ಟು ಸತ್ಯ ಎಂಬುದು ಮಾತ್ರ ಅಸ್ಪಷ್ಟ.
ಟಾಲಿವುಡ್ನಲ್ಲಿ ಕರಿಯರ್ ಆರಂಭಿಸಿದ ಪೂಜಾ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜತೆಗೆ ‘ಅಲಾ ವೈಕುಂಠಪುರಮುಲೋ’, ‘ಡಿಜೆ ದುವ್ವಾಡ ಜಗನ್ನಾಥಂ’ ಸೇರಿದಂತೆ ಇತ್ತೀಚೆಗೆ ತೆರೆಕಂಡ ತಮಿಳಿನ ರೆಟ್ರೋ ಚಿತ್ರಗಳಲ್ಲಿ ನಟಿಸಿ, ಅಭಿಮಾನಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಸ್ತುತ, ಕಾಲಿವುಡ್ ಮತ್ತು ಬಾಲಿವುಡ್ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿರುವ ಕರಾವಳಿ ಬೆಡಗಿ, ಸ್ಟಾರ್ ನಟನೊಬ್ಬ ತಮ್ಮೊಂದಿಗೆ ನಡೆದುಕೊಂಡ ರೀತಿಗೆ ಆತನಿಗೆ ಕಪಾಳಮೋಕ್ಷ ಮಾಡಿದ್ದರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ ನಟಿ ಸಂದರ್ಶನದಲ್ಲಿ ಮಾತನಾಡಿದ ವಿಡಿಯೋ ಅಥವಾ ಆ ಚಾನೆಲ್ ಯಾವುದು ಎಂಬುದರ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.
ಕಪಾಳಕ್ಕೆ ಹೊಡೆಯುವ ತಪ್ಪು ಆತ ಮಾಡಿದ್ದೇನು?
"ಇದು ಕೆಲವು ವರ್ಷಗಳ ಹಿಂದೆ ನಡೆದ ಘಟನೆ. ಒಂದು ಬಿಗ್ ಬಜೆಟ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ನನಗೆ ತುಂಬ ಸಂತೋಷ ತಂದಿತು. ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಇರುವುದು ನನಲ್ಲಿನ ಆತ್ಮವಿಶ್ವಾಸ ಹೆಚ್ಚಿಸಿತು. ಆ ಹೀರೋ ನಾನಿದ್ದ ಕ್ಯಾರವಾನ್‌ಗೆ ನನ್ನ ಅನುಮತಿಯಿಲ್ಲದೆ ಪ್ರವೇಶಿಸಿ, ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ. ಬಳಿಕ ಮೈಮುಟ್ಟಲು ಯತ್ನಿಸಿದ. ತಕ್ಷಣ ಅವನ ಕಪಾಳಕ್ಕೆ ಹೊಡೆದೆ. ಆ ಘಟನೆಯ ಬಳಿಕ ಇಲ್ಲಿಯವರೆಗೂ ಆತ ಮತ್ತೆ ನನ್ನೊಂದಿಗೆ ಕೆಲಸ ಮಾಡಿಲ್ಲ" ಎಂದು ಪೂಜಾ ಹೇಳಿದ್ದಾರೆ.
ಅದೊಂದು ಚಿತ್ರದಿಂದ ತೆಲುಗಿನಲ್ಲಿ ಆಫರ್ ಕುಸಿತ!
2024ರಲ್ಲಿ ತೆರೆಕಂಡ ಮಹೇಶ್ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರದಲ್ಲಿ ನಾಯಕಿಯಾಗಿ ಪೂಜಾ ನಟಿಸಬೇಕಿತ್ತು. ಆದರೆ, ಅದು ಅಂದುಕೊಂಡಂತೆ ನಡೆಯಲಿಲ್ಲ. ಅಲ್ಲಿಂದ ತಮಿಳು, ಬಾಲಿವುಡ್ ಚಿತ್ರಗಳತ್ತ ಗಮನ ಹರಿಸಿರುವ ಪೂಜಾ ಹೆಗ್ಡೆ, ಹಲವು ಬಹುನಿರೀಕ್ಷಿತ, ಬಿಗ್ ಬಿಜೆಟ್ ಹಾಗೂ ಸ್ಟಾರ್ ನಟರ ಚಿತ್ರಗಳಿಗೆ ಸಹಿ ಹಾಕಿದ್ದಾರೆ,(ಏಜೆನ್ಸೀಸ್).