ಪೂಜಾ ಹೆಗ್ಡೆ  
ಟಾಲಿವುಡ್

ಸಂಭಾವನೆ ವಿಚಾರದಲ್ಲಿ ಬದಲು? ಸರಣಿ ಫ್ಲಾಪ್​ ಬೆನ್ನಲ್ಲೇ ಸೌತ್ ಬ್ಯೂಟಿಯ ದಿಟ್ಟ ನಿರ್ಧಾರ!

ಪ್ರಮುಖ ಮುಖ್ಯಾಂಶಗಳು

  • ಸರಣಿ ಫ್ಲಾಪ್​ ಚಿತ್ರಗಳಿಂದ ಸಂಭಾವನೆ ವಿಚಾರದಲ್ಲಿ ಬದಲು
  • 2024ರಲ್ಲಿ ರಿಜೆಕ್ಟ್​ ಮಾಡಿದ್ದಕ್ಕೆ ಅವಕಾಶಗಳು ಕೈತಪ್ಪಿತು
  • ಈಗ ಟಾಲಿವುಡ್​, ಕಾಲಿವುಡ್​ ಸಿನಿಮಾಗಳಲ್ಲಿ ಬಿಜಿ
ತಮಿಳುನಾಡು: ಕಾಲಿವುಡ್​ನ ಹಿರಿಯ ನಟ ರಜಿನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ಮೋನಿಕಾ ಆಗಿ ಮನಬಿಚ್ಚಿ ಕುಣಿದ ಸೌತ್ ಬ್ಯೂಟಿ ಪೂಜಾ ಹೆಗ್ಡೆ, ಇದೀಗ ತಮ್ಮ ಮುಂಬರುವ ತಮಿಳು ಚಿತ್ರ 'ಜನನಾಯಗನ್' ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿದ್ದಾರೆ. ​
ಸೂರ್ಯ ಜತೆ 'ರೆಟ್ರೋ' ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ ಕೂಲಿಯಲ್ಲಿ ಮೋನಿಕಾ ಹಾಡಿನಲ್ಲಿ ಪೂಜಾ ಹಾಟ್​ ಬೆಡಗಿಯಾಗಿ ಮಿಂಚಿದರು. ಇದಾದ ಬಳಿಕ ತಮ್ಮ ಮುಂದಿನ ಸಿನಿಮಾಗಳತ್ತ ಹೆಚ್ಚು ಒಲವು ತೋರಿರುವ ಪೂಜಾ, ಇದಕ್ಕೂ ಮೊದಲು ಸರಣಿ ಫ್ಲಾಪ್​ನಿಂದ ಅವಕಾಶಗಳಿಂದ ದೂರ ಉಳಿದಿದ್ದರು. ಹೀಗಾಗಿ, ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಲು ಪೂಜಾ ಮುಂದಾದರು ಎಂಬ ವದಂತಿಗಳು ಸದ್ಯ ಟಾಲಿವುಡ್‌ನಲ್ಲಿ ಹರಡುತ್ತಿದೆ.
ಸಿನಿ ಮೂಲಗಳ ಪ್ರಕಾರ, 'ಆಲಾ ವೈಕುಂಠಪುರಂ' ಸಿನಿಮಾ ಬ್ಲಾಕ್​ಬಸ್ಟರ್​ ಹಿಟ್​ ಬೆನ್ನಲ್ಲೇ ತಮ್ಮ ಸಂಭಾವನೆಯನ್ನು ಪ್ರತಿ ಚಿತ್ರಕ್ಕೂ ಒಂದೂವರೆ ಕೋಟಿಯಿಂದ ಮೂರು ಕೋಟಿಗೆ ಬೇಡಿಕೆಯಿಟ್ಟ ಪೂಜಾ, ಅವಕಾಶಗಳಿಂದ ದೂರ ಉಳಿಯಲು ಮುಖ್ಯ ಕಾರಣವಾಯಿತು. 2024ರಲ್ಲಿ ತೆರೆಕಂಡ ಮಹೇಶ್​ ಬಾಬು ಅಭಿನಯದ 'ಗುಂಟೂರು ಕಾರಂ' ಚಿತ್ರಕ್ಕೆ ಮೊದಲು ನಾಯಕಿಯಾಗಿ ಆಯ್ಕೆಯಾಗಿದ್ದ ಪೂಜಾ ನಂತರದಲ್ಲಿ ಹೆಚ್ಚು ಸಂಭಾವನೆ ಕೇಳಿದ ವಿಚಾರಕ್ಕೆ ಚಿತ್ರತಂಡದಿಂದ ಹೊರಗುಳಿದರು.
ಪ್ರಸ್ತುತ, ದುಲ್ಕರ್ ಸಲ್ಮಾನ್​ ಅವರ '41' ಚಿತ್ರಕ್ಕೆ ಪೂಜಾ 3 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಅಸಲಿಗೆ, ದಳಪತಿ ವಿಜಯ್​ ಅವರ ಜನನಾಯಗನ್ ಮತ್ತು ರೆಟ್ರೋ ಚಿತ್ರಗಳಿಗೆ ಹೋಲಿಸಿದರೆ, ಈ ಸಂಭಾವನೆ ಕಡಿಮೆಯೇ. 'ರೆಟ್ರೋ' ಚಿತ್ರಕ್ಕೆ ಪೂಜಾ 4 ಕೋಟಿ ರೂ. ತೆಗೆದುಕೊಂಡಿದ್ದು, ಮುಂದಿನ ವರ್ಷ ಬಿಡುಗಡೆಯಾಗಲಿರುವ ಜನನಾಯಗನ್ ಚಿತ್ರಕ್ಕೆ 6 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಕೂಲಿಯಲ್ಲಿ ಮೋನಿಕಾ ಹಾಡಿಗೆ 3 ಕೋಟಿ ರೂ. ಪಡೆದ ಪೂಜಾ, ಈಗ ದುಲ್ಕರ್ ಚಿತ್ರಕ್ಕೆ ಅಷ್ಟೇ ಹಣವನ್ನು ಸ್ವೀಕರಿಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).