Sobhita Dhulipala: ಟಾಲಿವುಡ್‌ನ ಇಬ್ಬರು ಖ್ಯಾತ ನಟಿಯರಾದ ಶೋಭಿತಾ ಧುಲಿಪಾಲ ಮತ್ತು ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರಗಳ ಘೋಷಣೆಯಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದ್ದಾರೆ. ವಿಶೇಷವೆಂದರೆ, ಸಮಂತಾ ತಮ್ಮ ಚಿತ್ರದ ಪೋಸ್ಟರ್ ಹಂಚಿಕೊಂಡ ಮರುದಿನವೇ ಶೋಭಿತಾ ತಮ್ಮ ಹೊಸ ಚಿತ್ರದ ಬಗ್ಗೆ ಅಪ್ಡೇಟ್ ನೀಡಿದ್ದು, ಸಧ್ಯ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಚೀಕಟಿಲೋ ಚಿತ್ರದ ಪೋಸ್ಟರ್ ಹಂಚಿಕೊಂಡ ಶೋಭಿತಾ ಧುಲಿಪಾಲ!
ಚೀಕಟಿಲೋ ಕೇವಲ ಒಂದು ಅಪರಾಧದ ಕಥೆಯಲ್ಲ, ಬದಲಿಗೆ ಹೈದರಾಬಾದ್ ನಗರದ ಅತ್ಯಂತ ಕರಾಳ ಮತ್ತು ನಿಗೂಢ ರಹಸ್ಯಗಳನ್ನು ಭೇದಿಸುವ ಪ್ರಯಾಣವಾಗಿದೆ. ಶೋಭಿತಾ ಇದರಲ್ಲಿ 'ಸಂಧ್ಯಾ' ಎಂಬ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಯಕಿಯ ಬಳಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನ ನಿಗೂಢ ಸಾವಿನಿಂದ ಕಥೆ ತಿರುವು ಪಡೆದುಕೊಳ್ಳುತ್ತದೆ. ಈ ಸಾವು ಕೇವಲ ಆಕಸ್ಮಿಕವಲ್ಲ ಎಂದು ತಿಳಿದು ನಾಯಕಿ ತನಿಖೆ ನಡೆಸಲು ಮುಂದಾಗುತ್ತಾಳೆ. ಈ ಸಮಯದಲ್ಲಿ ನಗರವು ದಶಕಗಳಿಂದ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಒಂದೊಂದೆ ರಹಸ್ಯವನ್ನು ಬಯಲಿಗೆ ಬರಲು ಪ್ರಾರಂಭವಾಗುತ್ತದೆ.
ಈ ಚಿತ್ರದಲ್ಲಿ ಶೋಭಿತಾ ಧುಲಿಪಾಲ, ಚೈತನ್ಯ ವಿಶಾಲಕ್ಷ್ಮಿ, ಇಶಾ ಚಾವ್ಲಾ, ಝಾನ್ಸಿ, ಆಮಾನಿ ಮತ್ತು ವಡ್ಲಮಣಿ ಶ್ರೀನಿವಾಸ್ ಪ್ರಮುಖ ಭಾಗಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ಜನವರಿ 23 ಈ ಚಿತ್ರ ಪ್ರೈಮ್ ವಿಡಿಯೋದಲ್ಲಿ ವಿಶ್ವಾದ್ಯಂತ ಪ್ರದರ್ಶನಗೊಳ್ಳಲಿದೆ.
ಏತನ್ಮಧ್ಯೆ, ಸಮಂತಾ ಬುಧವಾರ (ಜ. 07) ರಂದು, ಅವರು ತಮ್ಮ ಮುಂಬರುವ ಚಿತ್ರ 'ಮಾ ಇಂತಿ ಬಂಗಾರಂ' ನ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಈ ಸಿನಿಮಾವನ್ನು ಅವರ ಪತಿ ರಾಜ್ ನಿಧಿಮೋರು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸಮಂತಾ ಚಿತ್ರದ ಮೊದಲ ನೋಟವನ್ನು ಹಂಚಿಕೊಂಡಿದ್ದು, ಅವರು ಕಂದು ಬಣ್ಣದ ಸೀರೆಯನ್ನುಟ್ಟು ಬಸ್ಸಿನೊಳಗೆ ನಿಂತಿರುವುದನ್ನು ನೋಡಬಹುದು. ಈ ಚಿತ್ರವು ಶುಕ್ರವಾರ (ಜ.09) ರಂದು ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಆದಾಗ್ಯೂ, ಈ ಹಿಂದೆ ಅವರು ಕಥಾವಸ್ತುವಿನ ವಿವರಗಳು ಮತ್ತು ಕಥಾಹಂದರವನ್ನು ಗೌಪ್ಯವಾಗಿಟ್ಟಿದ್ದರು (ಏಜೆನ್ಸೀಸ್).