Singer Mangli , Financial Fraud Case
- ನನಗೆ ಮತ್ತು ಹಣ ವಂಚನೆ ಕೇಸ್ಗೆ ಸಂಬಂಧವಿಲ್ಲ ಎಂದು ಮಂಗ್ಲಿ ಪೋಸ್ಟ್
- ನನ್ನ ವಿರುದ್ಧ ರೂಪಿಸಿರುವ ಸಂಚು, ನಾನು ನ್ಯಾಯಯುತ ಹೋರಾಟ ಮಾಡ್ತೇನೆ
- ಹಣ ಹೂಡಿಕೆ ಮಾಡಿ ವಂಚನೆಗೊಳಗಾದ ಅಮಾಯಕರ ಪರ ನಾನು ನಿಲ್ಲುತ್ತೇನೆ
Singer Mangli : ಟಾಲಿವುಡ್ ಗಾಯಕಿ ಮಂಗ್ಲಿ ವಿರುದ್ಧ ಕೇಳಿ ಬಂದಿದ್ದ ಹಣ ವಂಚನೆ ಆರೋಪ ವಿರುದ್ಧ ಮೌನ ಮುರಿದಿದ್ದಾರೆ. ಕೆಲವು ದುಷ್ಟ ಶಕ್ತಿಗಳು ನನ್ನ ವಿರುದ್ಧ ರೂಪಿಸಿರುವ ಸಂಚು ಇದು. ಈ ವಂಚನೆಗೂ ನನಗೂ ಯಾವುದೇ ಸಂಬಂಧವಿಲ್ಲ. ಉದ್ದೇಶ ಪೂರ್ವಕವಾಗಿ ನನ್ನ ವಿರುದ್ಧ ತಪ್ಪು ಮಾಹಿತಿ ಹರಡಲಾಗುತ್ತಿದೆ ಎಂದು ಇನ್ಸ್ಟಾಗ್ರಾಮ್ನಲ್ಲಿ ಹೊಸ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಮಂಗ್ಲಿ ಅವರು ಟಾಲಿವುಡ್ನಲ್ಲಿ ಜಾನಪದ ಹಾಡುಗಳನ್ನು ಹಾಡಿ, ಕುಣಿದು ತಮ್ಮದೇ ಛಾಪನ್ನು ಸೃಷ್ಟಿಸಿದ್ದರು. ಮಂಗ್ಲಿ ಅವರು ನೂರಾರು ಕೋಟಿ ವಂಚಿಸಿದ್ದಾರೆ ಎಂದು ಅವರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿತ್ತು. ಅಷ್ಟೇ ಅಲ್ಲದೇ ಸಂತ್ರಸ್ತರ ಪರ ನ್ಯಾಯ ಕೇಳಲು ಹೋದ ವಕೀಲರಾದ ಸುಬ್ಬಾರಾವ್ ಅವರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಅವರ ವಿರುದ್ಧ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಮಂಗ್ಲಿ ಪೋಸ್ಟ್ನಲ್ಲಿ ಏನಿದೆ?
ಮೈಕ್ರೋ ಫೈನಾನ್ಸ್ ಮತ್ತು ಶುಭಾ ಕ್ಷೇತ್ರ ಇನ್ಫ್ರಾದಿಂದ ಕೆಲವರಿಗೆ ಅನ್ಯಾವಾಗಿದೆ. ಅವರಿಗೆ ನ್ಯಾಯ ಸಿಗಲೆಂದು ನಾನು ಆಶಿಸುತ್ತೇನೆ. ಕಳೆದುಕೊಂಡ ಹಣ ಸಿಕ್ಕಿ ನ್ಯಾಯ ದಕ್ಕುವರೆಗೂ ಅವರ ಪರ ನಿಲ್ಲುತ್ತೇನೆ ಎಂದು ಗತ್ತಿನ ದನಿಯಲ್ಲಿ ನಾನು ಹೇಳುತ್ತೇನೆ. ನನಗೂ ಈ ಆರ್ಥಿಕ ವಂಚನೆ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ವ್ಯವಹಾರದ ಮೂಲಕ ಕೆಲವು ದುಷ್ಟ ವ್ಯಕ್ತಿಗಳು ನನ್ನ ವಿರುದ್ಧ ಸಂಚು ರೂಪಿಸುತ್ತಿದ್ದಾರೆ.
ನನ್ನ ಮೇಲೆ ಮಾಡಿರುವ ಆರೋಪಗಳು ಆಧಾರವೇ ಇಲ್ಲದ್ದು, ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪವಹಿಸಲಾಗಿದೆ. ಖಂಡಿತವಾಗಿಯೂ ಒಂದಲ್ಲ ಒಂದು ದಿನ ಸತ್ಯ ಹೊರ ಬಂದೇ ಬರುತ್ತದೆ. ನಾನು ಕಾನೂನನ್ನು ನಂಬುತ್ತೇನೆ. ಗೌರವಿಸುತ್ತೇನೆ. ನ್ಯಾಯಾಂಗ ಹೋರಾಟದ ಮೂಲಕ ನಾನು ಸತ್ಯಾಂಶ ಏನೆಂದು ಹೊರ ತರುತ್ತೇನೆ ಎಂದು ಹೇಳಿದರು.
ಮಂಗ್ಲಿ ವಿರುದ್ಧ ಕೇಳಿ ಬಂದಿದ್ದ ಆರೋಪವೇನು?
ಮಂಗ್ಲಿ ಮತ್ತವರ ತಮ್ಮ ಶಿವು ನೂರಕ್ಕು ಹೆಚ್ಚು ಮಂದಿಯಿಂದ ಹಣ ಹೂಡಿಕೆ ಮಾಡಿಸಿಕೊಂಡು ಲಾಭದ ಹಣ ನೀಡೋದಾಗಿ ಹೇಳಿ ಮೂಲ ಹಣ ಮತ್ತು ಅದರಿಂದ ಬಂದ ಲಾಭವನ್ನು ಹಿಂದುರುಗಿಸಿಲ್ಲ ಎಂದು ಆರೋಪಿಸಿ ವಕೀಲ ಸುಬ್ಬಾರಾವ್ ಅವರ ಬಳಿ ನ್ಯಾಯಕ್ಕಾಗಿ ಹೋಗಿದ್ದರಂತೆ. ಸಂತ್ರಸ್ತರ ಪರ ವಕೀಲ ಪ್ರತಿಭಟಿಸಿದ್ದಕ್ಕಾಗಿ ನಿರ್ದೇಶಕ ವೇಣು ಉಡುಗಲ, ಗಾಯಕಿ ಮಂಗ್ಲಿ ಹಾಗೂ ಅವರ ಸಹೋದರ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).