ಚೀನಾದಲ್ಲಿ MBBS ಪದವಿ, ಸತತ 6 ವರ್ಷದಿಂದ ಸರಣಿ ಚಿತ್ರಗಳಲ್ಲಿ ಬಿಜಿಯಿದ್ದರೂ ಈ ನಟಿ ಬಳಿ ಇಂದಿಗೂ ಸ್ವಂತ ಕಾರಿಲ್ಲ! Star Actress
- ಆರು ವರ್ಷಗಳಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ಸ್ವಂತ ಕಾರು ಹೊಂದಿಲ್ಲದ ಟಾಲಿವುಡ್ ನಟಿ ಕಾಮಾಕ್ಷಿ ಭಾಸ್ಕರ್ಲಾ
- ಚೀನಾದಲ್ಲಿ ಎಂಬಿಬಿಎಸ್ ಪದವಿ ಮುಗಿಸಿ ಮಾಡೆಲಿಂಗ್ ಕ್ಷೇತ್ರದಿಂದ ಸಿನಿಮಾಗೆ ಬಂದ ನಟಿಯ ಸರಳ ಜೀವನ
- ಕಾರಿನ ಮೇಂಟೆನೆನ್ಸ್ ಇಷ್ಟವಿಲ್ಲದ ಕಾರಣ ಇಂದಿಗೂ ಬೈಕ್ ಹಾಗೂ ಸ್ಕೂಟಿಯಲ್ಲೇ ಸಂಚರಿಸಲು ಇಷ್ಟಪಡುವ ನಟಿ
- ಅಗಾಧ ಸಿನಿಮಾದ ಪ್ರಮೋಷನ್ ವೇಳೆ ತಮಗೆ ಶೀಘ್ರದಲ್ಲೇ ಒಂದು ಕಾರು ಬೇಕಾಗಬಹುದು ಎಂದ ಕಾಮಾಕ್ಷಿ ಭಾಸ್ಕರ್ಲಾ
- ಕಾಮಾಕ್ಷಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಅಗಾಧ ಸಿನಿಮಾ ಆಗಸ್ಟ್ 14ರಂದು ಅಧಿಕೃತವಾಗಿ ಬಿಡುಗಡೆ
ಹೈದರಾಬಾದ್: ಬಣ್ಣದ ಲೋಕದಲ್ಲಿ ಮಿಂಚಲು ಬಂದ ಬಹುತೇಕ ನಟಿಯರು ಒಂದೇ ಒಂದು ಸಿನಿಮಾದ ಯಶಸ್ಸಿನ ಬಳಿಕ ಐಷರಾಮಿ ಕಾರುಗಳು ಹಾಗೂ ದುಬಾರಿ ಬಟ್ಟೆಗಳಿಂದಲೇ ಸುದ್ದಿಯಾಗುತ್ತಾರೆ. ಆದರೆ, ತೆಲುಗು ಚಿತ್ರರಂಗದಲ್ಲಿ ಆರು ವರ್ಷಗಳಿಂದ ಸತತವಾಗಿ ಸಿನಿಮಾಗಳನ್ನು ಮಾಡುತ್ತಾ ಬಿಜಿಯಿದ್ದರೂ, ಇಂದಿಗೂ ಸ್ವಂತ ಕಾರು ಹೊಂದಿಲ್ಲದ ಆ ಸ್ಟಾರ್ ನಟಿಯ ( Star Actress ) ಸರಳ ಜೀವನ ಇದೀಗ ಎಲ್ಲರ ಗಮನ ಸೆಳೆದಿದೆ.
ಟಾಲಿವುಡ್‌ನ ಪ್ರತಿಭಾವಂತ ನಟಿ ಕಾಮಾಕ್ಷಿ ಭಾಸ್ಕರ್ಲಾ ಅವರು ಚಿತ್ರರಂಗದಲ್ಲಿ ಆರು ವರ್ಷಗಳಿಂದ ಸತತವಾಗಿ ಸಿನಿಮಾಗಳನ್ನು ಮಾಡುತ್ತಿದ್ದರೂ, ಇಂದಿಗೂ ತಮ್ಮದೇ ಆದ ಸ್ವಂತ ಕಾರನ್ನು ಹೊಂದಿಲ್ಲ ಎಂಬ ಅಚ್ಚರಿಯ ಸಂಗತಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಮಧ್ಯಮ ವರ್ಗದ ಹಿನ್ನೆಲೆಯಿಂದ ಬಂದಿರುವ ಇವರಿಗೆ ಅಂತಹ ಐಷರಾಮಿ ಜೀವನಶೈಲಿಯ ಆಕರ್ಷಣೆಗಿಂತ ತಮ್ಮ ಸರಳತೆಯೇ ಹೆಚ್ಚು ಇಷ್ಟವಂತೆ.
ಚೀನಾದಲ್ಲಿ ಎಂಬಿಬಿಎಸ್ (MBBS) ಪದವಿ ಪಡೆದು, ಆಸ್ಪತ್ರೆಯಲ್ಲಿ ಕೆಲಸ ಮಾಡಿದ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು 'ಮಿಸ್ ಇಂಡಿಯಾ ತೆಲಂಗಾಣ' ಕಿರೀಟ ಮುಡಿಗೇರಿಸಿಕೊಂಡ ಕಾಮಾಕ್ಷಿ, ರಂಗಭೂಮಿ ಕಲೆಯಲ್ಲಿಯೂ ಅನುಭವ ಹೊಂದಿದ್ದಾರೆ. ಸಣ್ಣಪುಟ್ಟ ಪಾತ್ರಗಳ ಮೂಲಕ ಸಿನಿಮಾಗಳಿಗೆ ಬಂದ ಇವರು, 'ಮಾ ಊರಿ ಪೊಲಿಮೇರ' ಚಿತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಭದ್ರವಾದ ನೆಲೆ ಕಂಡುಕೊಂಡರು.
ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮತ್ತು ಗುರುತು ಪಡೆದಿದ್ದರೂ, ಇಂದಿಗೂ ತಾವು ಬೈಕ್ ಅಥವಾ ಸ್ಕೂಟಿಯಲ್ಲೇ ಹೊರಗೆ ಹೋಗಲು ಇಷ್ಟಪಡುವುದಾಗಿ ಕಾಮಾಕ್ಷಿ ತಿಳಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ತಮ್ಮ ತಂದೆ ಬೈಕಿನಲ್ಲಿ ಶಾಲೆಗೆ ಬಿಡುತ್ತಿದ್ದರು ಮತ್ತು ಚೀನಾದಲ್ಲಿ ಓದುವಾಗಲೂ ಸ್ಕೂಟಿಯನ್ನೇ ಬಳಸುತ್ತಿದ್ದ ಕಾರಣ, ಕಾರಿನ ಮೇಂಟೆನೆನ್ಸ್ ತಮಗೆ ಇಷ್ಟವಿಲ್ಲ ಎಂದು ಅವರು ಮುಕ್ತವಾಗಿ ಹೇಳಿಕೊಂಡಿದ್ದಾರೆ.
ಸಿನಿಮಾ ಶೂಟಿಂಗ್‌ಗಳ ಸಂದರ್ಭದಲ್ಲಿ ಮಾತ್ರ ಅನಿವಾರ್ಯವಾಗಿ ನಿರ್ಮಾಣ ಸಂಸ್ಥೆಯವರು ಕಳುಹಿಸುವ ಕಾರುಗಳಲ್ಲಿ ತೆರಳುವುದಾಗಿ ತಿಳಿಸಿರುವ ನಟಿ, ಸಾಮಾನ್ಯರಂತೆ ಬೈಕಿನಲ್ಲಿ ಹೊರಹೋದಾಗ ಜನ ತಮ್ಮನ್ನು ಗುರುತಿಸಿ ಹಿಂಬಾಲಿಸುವುದರಿಂದ ಈಗ ತಮಗೂ ಶೀಘ್ರದಲ್ಲೇ ಒಂದು ಕಾರು ಖಂಡಿತ ಬೇಕಾಗುತ್ತದೆ ಎನಿಸುತ್ತಿದೆ ಎಂದಿದ್ದಾರೆ.
ಸಿನಿಮಾಗಳಲ್ಲಿ ಬಿಜಿಯಾಗಿದ್ದರೂ ತಮ್ಮ ಸರಳತೆಯನ್ನು ಬಿಡದ ಕಾಮಾಕ್ಷಿ ಭಾಸ್ಕರ್ಲಾ ಅವರ ಈ ನಡೆ ಅನೇಕರಿಗೆ ಮಾದರಿಯಾಗಿದೆ. ಪ್ರಮುಖ ಪಾತ್ರದಲ್ಲಿ ಅವರು ಅಭಿನಯಿಸಿರುವ 'ಅಗಾಧ' ಸಿನಿಮಾ ಆಗಸ್ಟ್ 14ರಂದು ಬಿಡುಗಡೆಯಾಗುತ್ತಿದ್ದು, ಪ್ರಸ್ತುತ ಈ ಚಿತ್ರದ ಪ್ರಮೋಷನ್‌ಗಳಲ್ಲಿ ಅವರು ಬಿಜಿಯಾಗಿದ್ದಾರೆ, (ಏಜೆನ್ಸೀಸ್).