ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್
- ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ರನ್ನು ಟಾಲಿವುಡ್ನ ವಿವಾದಿತ ಜೋಡಿ ಎಂದೇ ಕರೆಯಲಾಗಿದೆ
- ಮದುವೆಯಾಗಿಲ್ಲದಿದ್ದರೂ ನರೇಶ್ ಮತ್ತು ಪವಿತ್ರಾ ಇಬ್ಬರು ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ
- ಇವರಿಬ್ಬರು ಜೋಡಿಯಾಗಿಯೇ ಅನೇಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ
- ಈ ಮಧ್ಯೆ, ನರೇಶ್ ಅವರು ಪವಿತ್ರಾ ಲೋಕೇಶ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ
VK Naresh : ವಿವಾದಿತ ವ್ಯಕ್ತಿಯ ಬಗ್ಗೆ ಕೇಳಿದ್ದೇವೆ ಆದರೆ, ವಿವಾದಿತ ಜೋಡಿಯ ಬಗ್ಗೆ ಎಂದಾದರೂ ಕೇಳಿದ್ದೀರಾ? ಒಂದೊಮ್ಮೆ ಮೈಸೂರಿನ ಹೋಟೆಲ್ನಲ್ಲಿ ಒಟ್ಟಿಗೆ ಸಿಕ್ಕಿಬಿದ್ದು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು ಈ ಜೋಡಿ. ಇಂದಿಗೂ ಒಂದಲ್ಲ ಒಂದು ವಿಚಾರಕ್ಕೆ ಈ ಜೋಡಿ ಸುದ್ದಿಯಾಗುತ್ತಲೇ ಇರುತ್ತದೆ. ಅಂದರೆ, ಈ ಜೋಡಿಯನ್ನು ಟಾಲಿವುಡ್ನ ವಿವಾದಿತ ಜೋಡಿ ಎಂದೇ ಕರೆಯಲಾಗಿದೆ. ಅಷ್ಟಕ್ಕೂ ಆ ಜೋಡಿ ಯಾರು ಅನ್ನೋ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಆ ಜೋಡಿ ಬೇರೆ ಯಾರೂ ಅಲ್ಲ, ಅವರೇ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್. ವಾಸ್ತವವಾಗಿ, ಅವರಿಬ್ಬರು ಮದುವೆಯಾಗಿಲ್ಲದಿದ್ದರೂ, ಒಟ್ಟಿಗೆ ವಾಸಿಸುತ್ತಿದ್ದಾರೆ. ನರೇಶ್ ಮತ್ತು ಪವಿತ್ರಾ ಅವರು ಅನೇಕ ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ನಿಜ ಜೀವನದಲ್ಲಿಯೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಇಬ್ಬರು ಜೋಡಿಯಾಗಿಯೇ ಅನೇಕ ಕಾರ್ಯಕ್ರಮಗಳಿಗೆ ಹಾಜರಾಗುತ್ತಾರೆ. ಅಲ್ಲದೆ, ಕಾಲಕಾಲಕ್ಕೆ ಸುದ್ದಿಯಲ್ಲಿರುತ್ತಾರೆ.
ಈ ಮಧ್ಯೆ, ನರೇಶ್ ಅವರು ಪವಿತ್ರಾ ಲೋಕೇಶ್ ಬಗ್ಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಪವಿತ್ರಾ ಲೋಕೇಶ್ ನನ್ನ ಬಾಳಿಗೆ ಬಂದ ಬಳಿಕ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದಿದ್ದಾರೆ.
ಅದೃಷ್ಟ ನನ್ನ ಹುಡುಕಿ ಬಂದಿತು.
ನಾವೀಗ ಸಂಪೂರ್ಣ ವಿಷಯಕ್ಕೆ ಬರೋಣ, ಇತ್ತೀಚೆಗೆ 'ಶುಭಕೃತ್ ನಾಮ ಸಂವತ್ಸರ' ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಕಾರ್ಯಕ್ರಮದಲ್ಲಿ ನರೇಶ್ ಭಾಗವಹಿಸಿದ್ದರು. ಈ ವೇಳೆ ಪವಿತ್ರಾ ಬಗ್ಗೆ ಮಾತನಾಡುತ್ತಾ ಹೊಗಳಿಕೆಯ ಸುರಿಮಳೆಗೈದರು. ನನ್ನ ವರ್ಷಗಳ ಸಿನಿಮಾ ಅನುಭವನ್ನು ಮುಂದಿಟ್ಟು ಹೇಳುವುದಾದರೆ, ಅವಳಿಂದಲೇ ಅದೃಷ್ಟ ನನ್ನ ಹುಡುಕಿ ಬಂದಿತು. ಅವಳು ನನ್ನ ಜೀವನದಲ್ಲಿ ಬಂದ ತಕ್ಷಣ ಯಶಸ್ಸು ನನಗೆ ಬರಲು ಪ್ರಾರಂಭಿಸಿತು. ಆಕೆ ನನ್ನ ಅದೃಷ್ಟ ದೇವತೆ ಎಂದು ನರೇಶ್ ಅವರು ಸಂತೋಷ ವ್ಯಕ್ತಪಡಿಸಿದರು. ಪ್ರಸ್ತುತ, ನರೇಶ್ ಮಾಡಿದ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಅವರು ತುಂಬಾ ಬಿಜಿಯಾಗಿದ್ದಾರೆ
ನಂತರ, ಪವಿತ್ರಾ ಲೋಕೇಶ್ ಅವರು ತಮ್ಮದೇ ರೀತಿಯಲ್ಲಿ ನರೇಶ್ ಅವರನ್ನು ಹೊಗಳಿದರು. ನರೇಶ್ ಅವರ ಸಿನಿಮಾ ವೃತ್ತಿಜೀವನ ಸುಮಾರು 54 ವರ್ಷಗಳು. ಅಂತಹ ಮಹಾನ್ ವ್ಯಕ್ತಿಯೊಂದಿಗೆ ಬದುಕುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ಅವರೊಂದಿಗೆ ಮಾತನಾಡಲು ನನಗೆ ಕೇವಲ 30 ನಿಮಿಷಗಳು ಮಾತ್ರ ಸಿಗುತ್ತವೆ. ಏಕೆಂದರೆ, ಅವರು ತುಂಬಾ ಬಿಜಿಯಾಗಿದ್ದಾರೆ. ಈ ಚಿತ್ರವು ಉತ್ತಮ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತೇನೆ. ಕನ್ನಡ ನಿರ್ಮಾಪಕರೊಬ್ಬರು ತೆಲುಗು ಚಿತ್ರ ಮಾಡುತ್ತಿರುವುದು ಇನ್ನೂ ಹೆಚ್ಚು ತೃಪ್ತಿಕರವಾಗಿದೆ. ನಾನು ವಿಶೇಷವಾಗಿ ತೆಲುಗಿನಲ್ಲಿ ಮೆಚ್ಚುಗೆ ಪಡೆದಿದ್ದೇನೆ ಆದರೆ, ನನ್ನ ಮಾತೃಭಾಷೆಯ ಬಗ್ಗೆ ನನಗೆ ಹೆಚ್ಚು ಒಲವು ಇದೆ. ನರೇಶ್ ಅವರ ಕಾರಣದಿಂದಾಗಿ ನಾನು ತೆಲುಗು ಚೆನ್ನಾಗಿ ಮಾತನಾಡುತ್ತೇನೆ ಎಂದು ಪವಿತ್ರಾ ಲೋಕೇಶ್ ಹೇಳಿದರು.
ಶುಭಕೃತ್ ನಾಮ ಸಂವತ್ಸರ ಸಿನಿಮಾ ವಿಚಾರಕ್ಕೆ ಬರುವುದಾದರೆ, ನರೇಶ್ ಅವರು ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಧನಂಜಯ ಮತ್ತು ಪ್ರಕೃತಿ ನಟಿಸಿರುವ ಈ ಚಿತ್ರವನ್ನು ಎಸ್.ಎಸ್. ಸಜ್ಜನ್ ನಿರ್ದೇಶಿಸಿದ್ದಾರೆ. ಡಿ.ಆರ್. ವಿಶ್ವನಾಥ್ ನಾಯಕ್ ನಿರ್ಮಿಸಿರುವ ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಭಾರತಾದ್ಯಂತ ಬಿಡುಗಡೆಯಾಗಲಿದೆ. ಸುಧಾ ಶ್ರೀನಿವಾಸ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ, (ಏಜೆನ್ಸೀಸ್).