Fan Suggests Baby name Samantha Ruth Prabhu Reacts
- ಗರ್ಭಾವಸ್ಥೆಯ ಸುಂದರ ಕ್ಷಣಗಳನ್ನು ಹಂಚಿಕೊಂಡಿರುವ ನಟಿ ಸಮಂತಾ ರೂತ್ ಪ್ರಭು.
- ಅಭಿಮಾನಿಯೊಬ್ಬರು ಸೂಚಿಸಿದ ಸ್ಯಾಮ್‌ರಾಜ್' ಮಗುವಿನ ಹೆಸರಿಗೆ ಸಮಂತಾ ತಮಾಷೆಯ ಪ್ರತಿಕ್ರಿಯೆ.
- ಡಿಸೆಂಬರ್‌ನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿರುವ ರಾಜ್-ಸ್ಯಾಮ್ ಜೋಡಿ.
Fan Suggests Baby name Samantha Ruth Prabhu Reacts:
ಸಮಂತಾ ಸದ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ..ಸಿನಿಮಾದಿಂದ ಬ್ರೇಕ್ ತೆಗೆದುಕೊಂಡು, ತಮ್ಮ ಪ್ರೆಗ್ನಿನ್ಸಿ ದಿನಗಳ ಬಗ್ಗೆ ಆಗಾಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ
ಇತ್ತೀಚೆಗೆ ಅವರ ದೇಹದ ತೂಕ 11 ಕೆಜಿ ಹೆಚ್ಚಾದ ಬಗ್ಗೆ ಮಾತನಾಡಿದ್ದರು. ಸದ್ಯ ಅವರ ಮಗುವಿಗೆ ಯಾವ ಹೆಸರು ಇಡಬೇಕು ಎನ್ನುವ ಸಲಹೆಗಳನ್ನು ಅಭಿಮಾನಿಗಳು ಕೊಟ್ಟಿದ್ದು, ಅದಕ್ಕೆ ಸ್ಯಾಮ್ ಕೊಟ್ಟ ಉತ್ತರ ಭಾರಿ ಸಂಚಲನವನ್ನು ಸೃಷ್ಟಿಸಿದೆ.
ಸ್ಯಾಮ್ ಕೊಟ್ಟ ರಿಯಾಕ್ಷನ್
ಐ ಆಮ್ ಅನೌಕ್ ಎಂಬುವವರು ಸಮಂತಾರ ಪೋಸ್ಟ್ವೊಂದಕ್ಕೆ ಕಾಮೆಂಟ್ ಮಾಡಿ..ನಿಮಗೆ ಹೆಣ್ಮಗು ಹುಟ್ಟಿದರೆ ಸಮೈರಾ ಎಂದು ಅಥವಾ ಗಂಡು ಹುಟ್ಟಿದರೆ ಸಮರಾಜ್ ಎನ್ನುವ ಹೆಸರು ಇಟ್ಟರೆ ಹೇಗೆ ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಸಮಂತಾ ಅವರು ಕಾಮೆಂಟ್ ಮಾಡಿ... ಸಮರಾಜ್. ಇದು ನಮ್ಮ ಬಗ್ಗೆ ನಾವೇ ಸ್ವಲ್ಪ ಹೆಚ್ಚು ಯೋಚಿಸ್ತಾ ಇದ್ದೀವಿ ಅನಿಸೋದಿಲ್ವಾ? ಎಂದು ನಗುವ ಇಮೋಜಿ ಹಾಕಿ ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ.
ಆಸ್ಕ್ ಮಿ ಎನಿಥಿಂಗ್ ಟಾಸ್ಕ್
ಸಮಂತಾ ಅವರು ಗರ್ಭಿಣಿಯಾಗಿದ್ದರೂ ಸಹ ವರ್ಕೌಟ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ನಟಿ ತಮ್ಮ ಗರ್ಭಧಾರಣೆಯ ಪ್ರಯಾಣದ ಕೆಲವು ಕ್ಷಣಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ್ಗೆ ಕೆಲವೊಂದು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 'ಆಸ್ಕ್ ಮಿ ಎನಿಥಿಂಗ್' ಸೆಷನ್ ನಡೆಸಿದ ಸಮಂತಾ, ಗರ್ಭಾವಸ್ಥೆಯ ಅನುಭವಗಳನ್ನು ಅಭಿಮಾನಿಗಳೊಂದಿಗೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಮಗುವಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಖರೀದಿಸಿದ್ದೇನೆ. ಸದ್ಯ ಆ ಎಲ್ಲಾ ವಸ್ತುಗಳನ್ನು ನೋಡಿಯೇ ನನಗೆ ಭಯವಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಮಂತಾ ರೂತ್ ಪ್ರಭು ಮತ್ತು ರಾಜ್ ದಂಪತಿ ಈ ವರ್ಷದ ಡಿಸೆಂಬರ್‌ನಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ಎದುರು ನೋಡುತ್ತಿದ್ದಾರೆ, (ಏಜೆನ್ಸೀಸ್).