ಚಿತ್ರ Instagram 
ಟಾಲಿವುಡ್

ಮದುವೆ ಬಳಿಕ ಮೊದಲ ಬಾರಿ ಪತಿಯೊಂದಿಗೆ ಕಾಣಿಸಿಕೊಂಡ ಸಮಂತಾ Samantha Ruth Prabhu

ಹೈದರಾಬಾದ್​: ಇತ್ತಿಚೆಗೆ ವಿವಾಹವಾಗಿರುವ ಟಾಲಿವುಡ್​ ನಟಿ ಸಮಂತಾ ರುತ್ ಪ್ರಭು, ನಿರ್ಮಾಪಕ ರಾಜ್ ನಿಡಿಮೋರು ಮೊದಲನೆ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಈ ವೇಳೆ ದಂಪತಿ ಹಲವಾರು ಚಿತ್ರಗಳಿಗೆ ನಾಚಿಕೊಳ್ಳುತ್ತಾ ಪೋಸ್​ ನೀಡುತ್ತಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗಿದೆ.
ವೀಡಿಯೊಗಳಲ್ಲಿ, ಸಮಂತಾ ಬೂದು ಬಣ್ಣದ ಸ್ವೆಟರ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರೆ, ರಾಜ್​ ನಿಧಿಮೋರ್​ ನೀಲಿ, ಹಸಿರು ಬಣ್ಣದ ಟೀ ಶರ್ಟ್​ ಮತ್ತು ಡೆನಿಮ್ ಜಾಕೆಟ್ ಮತ್ತು ನೀಲಿ ಜೀನ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಮಧ್ಯೆ ಅವರು ಕಾರಿನತ್ತ ಹೋಗುವಾಗ ಸಮಂತಾ ನಾಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ರಾಜ್ ನಿಧಿಮೋರೊಂದಿಗೆ ವಿವಾಹವಾದ ಸಮಂತಾ

ಮಿಲ್ಕಿ ಬ್ಯೂಟಿ ಸಮಂತಾ ರುತ್​ ಅವರು ಡಿಸೆಂಬರ್ 1, 2025 ರಂದು ನಿರ್ದೇಶಕ ರಾಜ್ ನಿಧಿಮೋರ್​ ಅವರೊಂದಿಗೆ ವಿವಾಹವಾದರು. ಅವರ ವಿವಾಹವು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿರುವ ಲಿಂಗ ಭೈರವಿ ದೇವಿಯ ನಿವಾಸದಲ್ಲಿ ಪವಿತ್ರ ಭೂತಾ ಶುದ್ಧ ವಿವಾಹ ಸಮಾರಂಭದಲ್ಲಿ ನಡೆಯಿತು. ದಂಪತಿ ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ಸಂದರ್ಭದಲ್ಲಿ ಡೇಟಿಂಗ್​​ ಮಾಡಲು ಪ್ರಾರಂಭಿಸಿದ್ದರು ಎಂದು ವರದಿಯಾಗಿದೆ.

ಸಮಂತಾ ರುತ್ ಪ್ರಭು ಅವರ ಮುಂಬರುವ ಸಿನಿಮಾಗಳು

ತೆಲುಗು ನಟಿ ಸಮಂತಾ ರುತ್ ಪ್ರಭು ಕೊನೆಯ ಬಾರಿಗೆ ಪ್ರೈಮ್ ವಿಡಿಯೋದ ಸಿಟಾಡೆಲ್: ಹನಿ ಬನ್ನಿ ಕಾರ್ಯಕ್ರಮದಲ್ಲಿ ವರುಣ್ ಧವನ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ಈಗಾ, ರಂಗಸ್ಥಳಂ, 24, ಮತ್ತು ಯೇ ಮಾಯಾ ಚೆಸಾವೆ ಮುಂತಾದ ಚಲನಚಿತ್ರಗಳಲ್ಲಿ ಅವರ ಕೆಲಸಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಮುಂಬರುವ ಸಿನಿಮಾಗಳ ಬಗ್ಗೆ ಹೇಳುವುದಾದರೆ, ರಾಜ್ ಮತ್ತು ಡಿಕೆ ಅವರ ಸಂಯೋಗದಲ್ಲಿ ಮೂಡಿಬರಲಿರುವ ರಾಖ್ ಬ್ರಹ್ಮಂಡ್: ದಿ ಬ್ಲಡಿ ಕಿಂಗ್‌ಡಮ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ (ಏಜೆನ್ಸೀಸ್​).