ಕಲ್ಟ್ ಟೀಸರ್​ ಲಾಂಚ್​ ಈವೆಂಟ್​ನಲ್ಲಿ ರವಿ ಬಸ್ರೂರ್​-ವಿಶ್ವಕ್​ ಸೇನ್​ 
ಟಾಲಿವುಡ್

2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದೆ! ಆ 35,000 ರೂ. ನನ್ನ ಬದುಕನ್ನೇ ಬದಲಿಸಿತು! 'ಕಲ್ಟ್'​ ವೇದಿಕೆಯಲ್ಲಿ ಕಣ್ಣೀರಿಟ್ಟ ರವಿ ಬಸ್ರೂರ್ | Ravi Basrur​

ಪ್ರಮುಖ ಮುಖ್ಯಾಂಶಗಳು

  • ವಿಶ್ವಕ್​ ಸೇನ್​ ನಿರ್ದೇಶಿಸಿ, ನಟಿಸಿರುವ 'ಕಲ್ಟ್'​ ತೆಲುಗು ಚಿತ್ರ
  • 'ಕಲ್ಟ್'​ ಚಿತ್ರದ ಟೀಸರ್​ ಲಾಂಚ್​ ವೇದಿಕೆಯಲ್ಲಿ ರವಿ ಬಸ್ರೂರ್​ ಭಾವುಕ ಮಾತು
  • ರವಿ ಬಸ್ರೂರ್​ ಅವರಿಗೆ 35 ಲಕ್ಷ ರೂ. ರೊಲೆಕ್ಸ್ ವಾಚ್​ ಉಡ
ತೆಲಂಗಾಣ: 'ಮಾಸ್​ ಕಾ ದಾಸ್'​ ಎಂದೇ ಟಾಲಿವುಡ್​ನಲ್ಲಿ ಖ್ಯಾತಿ ಗಳಿಸಿರುವ ನಟ, ನಿರ್ದೇಶಕ ವಿಶ್ವಕ್​ ಸೇನ್​ ನಿರ್ದೇಶಿಸಿ, ನಟಿಸಿರುವ 'ಕಲ್ಟ್'​ ತೆಲುಗು ಚಿತ್ರದ ಟೀಸರ್​ ಲಾಂಚ್​ ಇತ್ತೀಚೆಗಷ್ಟೇ ಅದ್ಧೂರಿಯಾಗಿ ನಡೆಯಿತು. ಈ ವೇದಿಕೆಯಲ್ಲಿ ಮಾತನಾಡಿದ ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ರವಿ ಬಸ್ರೂರ್​ ಅವರು, ತಮ್ಮ ಜೀವನದ ಕೆಲವು ಘಟನೆಗಳನ್ನು ನೆನೆದು ಭಾವುಕರಾದರು.

35 ಲಕ್ಷ ರೂ. ರೊಲೆಕ್ಸ್​ ವಾಚ್​

ಶೀಘ್ರವೇ ತೆರೆಗೆ ಬರಲು ಸಿದ್ಧವಿರುವ ಈ ಚಿತ್ರದ ಟೀಸರ್​ ಲಾಂಚ್ ಈವೆಂಟ್​ನಲ್ಲಿ ರವಿ ಬಸ್ರೂರ್​ ಅವರಿಗೆ ವೇದಿಕೆಯಲ್ಲಿ 35 ಲಕ್ಷ ರೂ. ಬೆಲೆಬಾಳುವ ರೊಲೆಕ್ಸ್​ ವಾಚ್​ ಅನ್ನು ವಿಶ್ವಕ್​ ಸೇನ್​ ಗಿಫ್ಟ್​ ಆಗಿ ನೀಡಿದರು. ಈ ಕ್ಷಣವನ್ನು ಕಂಡು ಕಣ್ಣೀರಿಟ್ಟ ಬಸ್ರೂರ್​, "18ನೇ ವಯಸ್ಸಿನಲ್ಲಿ ನಾನು ಎರಡು ಬಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೆ. ಆಗ ವ್ಯಕ್ತಿಯೊಬ್ಬರು, ನನಗೆ 35,000 ಹಣ ನೀಡಿದರು. ಅಂದು ಅವರು ಕೊಟ್ಟ ಆ ದುಡ್ಡು ನನ್ನ ಇಡೀ ಜೀವನವನ್ನೇ ಬದಲಿಸಿತು" ಎಂದರು.

ಅಂದೇ ಹೆಸರು ಬದಲು

"ನನ್ನ ಸಂಗೀತಕ್ಕೆ ಬೇಕಿದ್ದ ಬಹುಮುಖ್ಯ ಸಾಧನವಾದ ಕೀಬೋರ್ಡ್ ಖರೀದಿಸಲು 35,000 ರೂ. ಕೊಟ್ಟರು. ಅವರ ಹೆಸರೇ ರವಿ. ನನಗೆ ಮರುಜನ್ಮ ನೀಡಿದ ಅವರನ್ನು ನೆನೆದು, ಅಂದಿನಿಂದ ಕಿರಣ್​ ಎಂಬ ನನ್ನ ಹೆಸರನ್ನು ರವಿ ಎಂದೇ ಮರುನಾಮಕರಣ ಮಾಡಿಕೊಂಡೆ. ನಾನು ಬದುಕಿರುವವರೆಗೂ ಎಲ್ಲರೂ ನನ್ನನ್ನು ರವಿ ಬಸ್ರೂರ್ ಎಂದೇ ಕರೆಯುತ್ತಾರೆ. ಆ ಸಂಪೂರ್ಣ ಕ್ರೆಡಿಟ್​ ಅವರಿಗೆ ಹೋಗುತ್ತದೆ. ರವಿ ಮತ್ತು ವಿಶ್ವಕ್ ಸೇನ್​​ ಈ ಇಬ್ಬರನ್ನೂ ನನ್ನ ಜೀವನದಲ್ಲಿ ನಾನೆಂದಿಗೂ ಮರೆಯೋದಿಲ್ಲ" ಎಂದರು.
ತೆಲುಗಿನ "ಕಲ್ಟ್" ಜೊತೆಗೆ, ರಾಕಿಂಗ್​​ ಸ್ಟಾರ್​ ಯಶ್ ಅಭಿನಯದ "ಟಾಕ್ಸಿಕ್" ಮತ್ತು ಜೂ. ಎನ್​ಟಿಆರ್​-ಪ್ರಶಾಂತ್ ನೀಲ್ ಕಾಂಬೊದಲ್ಲಿ ಮೂಡಿಬರುತ್ತಿರುವ ಸಿನಿಮಾಗಳಿಗೂ ರವಿ ಬಸ್ರೂರ್ ಅವರೇ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್).