Vijay Deverakonda wishes wife Rashmika Mandanna: ಮೇಡ್ ಫಾರ್ ಈಚ್ ಅದರ್ ಎನ್ನುವಂತೆ ದಾಂಪತ್ಯ ಜೀವನ ಕಳೆಯುತ್ತಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಮಾದರಿ. ಇವರಿಬ್ಬರ ಪೋಸ್ಟ್ಗಾಗಿ ಹಲವರು ಕಾಯುತ್ತಿರುತ್ತಾರೆ. ಇಂದು ರಶ್ಮಿಕಾ ಅವರು 30ನೇ ವಂಸತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಪತಿ ದೇವರಕೊಂಡ ಹೇಗೆ ವಿಶ್ ಮಾಡಿರಬಹುದು ಎನ್ನುವ ಕಾತರಕ್ಕೆ ತೆರೆ ಬಿದ್ದಿದೆ.
ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬವು ವಿಜಯ್ ದೇವರಕೊಂಡರನ್ನು ಮದುವೆ ಮಾಡಿಕೊಂಡ ನಂತರದ ಮೊದಲ ಬರ್ತಡೇ. ಇದು ಮತ್ತಷ್ಟು ವಿಶೇಷತೆಯನ್ನು ಹೆಚ್ಚಿಸಿದೆ. ಗೀತ ಗೋವಿಂದಂ, ಕಾಮ್ರೇಡ್ ನಂತರ ಒಟ್ಟಾಗಿ ತಮ್ಮ ಜೀವನದ ಸಂಗಾತಿಯೊಂದಿಗೆ ನಟಿಸುತ್ತಿರುವುದೇ Ranabaali ಸಿನಿಮಾದಲ್ಲಿ. ಈ ಸಿನಿಮಾದ ಪಾತ್ರಕ್ಕಾಗಿ ರಶ್ಮಿಕಾರವರು ಸಜ್ಜಾಗುತ್ತಿರುವ ವಿಡಿಯೋವೊಂದನ್ನು ಹಂಚಿಕೊಂಡು ವಿಜಯ್ ದೇವರಕೊಂಡ 'ಐ ಲವ್ ಯೂ ಜಯಮ್ಮ' ಎಂದು ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ.
ಸೆಪ್ಟೆಂಬರ್ನಲ್ಲಿ ಸಿನಿಮಾ ರಿಲೀಸ್
ರಣಬಾಲಿ ಪಾತ್ರವೂ ಹಲವು ಶತಮಾನಗಳಷ್ಟು ಹಳೆಯದು. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ಪಾತ್ರದ ಹೆಸರು ಜಯಮ್ಮ ಎಂದು. ರಾಹುಲ್ ಸಂಕೃತ್ಯನ್ ನಿರ್ದೇಶನದ 'ರಣಬಾಲಿ' ಒಂದು ಮಹತ್ವಾಕಾಂಕ್ಷೆಯ ಪೀರಿಯಡ್ ಡ್ರಾಮಾ ಆಗಿದ್ದು, ಸೆಪ್ಟೆಂಬರ್ ಬಿಡುಗಡೆಗೂ ಮುನ್ನವೇ ಸಾಕಷ್ಟು ಸಕಾರಾತ್ಮಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ದೇವರಕೊಂಡ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ?
ರಣಬಾಲಿ ಸಿನಿಮಾ ಸೆಟ್ನಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ನಿರ್ದೇಶಕ ರಾಹುಲ್ ಸಂಕೃತ್ಯನ್ ಪಾತ್ರದ ಬಗ್ಗೆ ವಿವರಿಸುತ್ತಿದ್ದಾರೆ. 'ಜಯಮ್ಮ' ಪಾತ್ರಕ್ಕಾಗಿ ಸಿದ್ಧತೆ ನಡೆಸುತ್ತಿರುವ ಕ್ಷಣಗಳು ಮತ್ತು ಆ ಪಾತ್ರದ ರೂಪ ಹಾಗೂ ಭಾವಕ್ಕೆ ಜೀವ ತುಂಬಲು ಅವರು ತೋರುತ್ತಿರುವ ಆಳವಾದ ಆಸಕ್ತಿಯನ್ನು ಈ ವಿಡಿಯೋ ಒಳಗೊಂಡಿದೆ. ಜೊತೆಗೆ ಬರ್ತಡೇ ವಿಷಸ್ ಸಹ ಹೇಳಲಾಗಿದೆ. ರಶ್ಮಿಕಾರ ಹುಟ್ಟುಹಬ್ಬಕ್ಕೂ ಮೊದಲು ರಾಯಲ್ಸೀಮಾದ ಪ್ರಮುಖ ಪ್ರದೇಶ, ಅನಂತಪುರದಲ್ಲಿ ಈ ಸಿನಿಮಾದ ಕೆಲವು ಭಾಗಗಳ ಚಿತ್ರೀಕರಣ ಮುಗಿದಿದೆ ಎನ್ನಲಾಗಿದೆ.
ರಣಬಾಲಿ ಸಿನಿಮಾದ ಕಥಾ ಹಂದರವೇನು?
ರಣಬಾಲಿಯು 1854 ಮತ್ತು 1878 ರ ನಡುವೆ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದ ಘಟನೆಯನ್ನು ಸ್ಪೂರ್ತಿಯಾಗಿ ಪಡೆದು ಚಿತ್ರೀಕರಿಸಲಾಗಿದೆ. ಈ ಸಿನಿಮಾದಲ್ಲಿ ಯೋಧನ ಪಾತ್ರದಲ್ಲಿ ವಿಜಯ್ ದೇವರಕೊಂಡ ಅವರು ನಟಿಸಿದ್ದರೆ, ಪತ್ನಿಯಾಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. 19 ನೇ ಶತಮಾನದಲ್ಲಿ ಬೇರೂರಿರುವ ಆಕರ್ಷಕ ಕಥೆ ಹೊರತರುವ ಭರವಸೆಯನ್ನು ನೀಡುತ್ತದೆ.
ರಾಹುಲ್ ಸಂಕೃತ್ಯಾನ್ ನಿರ್ದೇಶನದ ಮತ್ತು ಮೈತ್ರಿ ಮೂವಿ ಮೇಕರ್ಸ್ ಬೆಂಬಲದೊಂದಿಗೆ, ಟಿ-ಸೀರೀಸ್ ಪ್ರಸ್ತುತಪಡಿಸುತ್ತಿರುವ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸಲಾಗಿದೆ. ನವೀನ್ ಯೆರ್ನೇನಿ ಮತ್ತು ವೈ ರವಿಶಂಕರ್ ನಿರ್ಮಿಸಿರುವ ರಣಬಾಲಿ, ಪ್ಯಾನ್-ಇಂಡಿಯನ್ ಚಿತ್ರವಾಗಿದೆ. ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಅಭಿಮಾನಿಗಳಿಂದ ಇಂದಿನಿಂದಲೇ ಅತ್ಯುತ್ತಮ ರೆಸ್ಪಾನ್ಸ್ ಸಿಗುತ್ತಿದೆ. (ಏಜೆನ್ಸೀಸ್).