Rashmika Mandanna suffers hip injury on film set, advised 6 weeks rest
- ಮದುವೆಯಾದ ಕೆಲವೇ ತಿಂಗಳಿಗೆ ಸೊಂಟಕ್ಕೆ ಪೆಟ್ಟು ಮಾಡಿಕೊಂಡ ರಶ್ಮಿಕಾ ಮಂದಣ್ಣ.
- ಸಿನಿಮಾ ಶೂಟಿಂಗ್ ವೇಳೆ ಜಾರಿ ಬಿದ್ದು ಸೊಂಟಕ್ಕೆ ಗಾಯ, ಆರು ವಾರ ರೆಸ್ಟ್ಗೆ ಸೂಚನೆ.
- ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಹಾರೈಕೆಯ ಕಾಮೆಂಟ್ ಹೆಚ್ಚಳ.
ಮದುವೆಯಾದ ಕೆಲವೇ ತಿಂಗಳಿಗೆ ರಣಬಲಿ, ಮೈಸಾ ಸಿನಿಮಾ ಹಾಗೂ ಬ್ರಾಂಡ್ ಪ್ರಾಡಕ್ಟ್ಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಆರು ತಿಂಗಳು ಬ್ರೇಕ್ ತೆಗೆದುಕೊಳ್ಳಲೇ ಬೇಕು ಎನ್ನುವ ಪರಿಸ್ಥಿತಿ ಎದುರಾಗಿದೆ. ಹೌದು, ಆಕ್ಷನ್ ಸಿನಿಮಾವೊಂದರ ಅದ್ದೂರಿ ಶೂಟಿಂಗ್ ವೇಳೆ ಆಯತಪ್ಪಿ ಬಿದ್ದಿರುವ ಕಾರಣ, ಅವರ ಸೊಂಟಕ್ಕೆ ಬಲವಾಗಿ ಪೆಟ್ಟು ಬಿದ್ದಿದ್ದೆ. ಹೀಗಾಗಿ ವೈದ್ಯರು ನ್ಯಾಶನಲ್ ಕ್ರಶ್ಗೆ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ.
ನಡೆದಿದ್ದೇನು?
ಹಾಡೊಂದರ ಅದ್ದೂರಿ ಸೆಟ್ನಲ್ಲಿ ಡ್ಯಾನ್ಸ್ ಶೂಟಿಂಗ್ ನಡೆಯುತ್ತಿತ್ತು. ಕ್ಯಾಮೆರಾ ಮುಂದೆ ಭರ್ಜರಿಯಾಗಿ ಸ್ಟೆಪ್ ಹಾಕುತ್ತಿದ್ದ ರಶ್ಮಿಕಾ ಅವರು ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಅವರ ಸೊಂಟಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ, ಕೂಡಲೇ ಅವರನ್ನು ವೈದ್ಯರ ಬಳಿ ತಪಾಸಣೆ ಕರೆದೊಯ್ಯಲಾಯ್ತು. ತೀವ್ರವಾಗಿ ಪೆಟ್ಟು ಬಿದ್ದ ಪರಿಣಾಮ ಆರು ವಾರ ರೆಸ್ಟ್ ಮಾಡುವ ಅವಶ್ಯಕತೆ ಇದೆ ಎನ್ನಲಾಗಿದೆ.
ರಶ್ಮಿಕಾರ ಪೋಸ್ಟ್ಗಳಿಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದು, ಶೀಘ್ರವಾಗಿ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಅಲ್ಲದೇ ಅವರ ಫ್ಯಾನ್ಪೇಜ್ಗಳು ಶೀಘ್ರ ಗುಣಮುಖರಾಗಿ ಬನ್ನಿ, ನಿಮ್ಮ ಸಿನಿಮಾಗಳಿಗೆ ಎದುರು ನೋಡುತ್ತಿದ್ದೇವೆ. ನಮ್ಮ ಶ್ರೀವಲ್ಲಿ ಬೇಗ ಹುಷಾರಾಗಲಿ, ಬೆಳ್ಳಿ ತೆರೆಮೇಲೆ ಮಿಂಚಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ
ಬ್ಯುಸಿ ಶೆಡ್ಯೂಲ್ಗೆ ಸಮಸ್ಯೆ
ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ನಲ್ಲೂ ಮಿಂಚಿದ್ದ ರಶ್ಮಿಕಾ ಮಂದಣ್ಣ. ಫೆಬ್ರವರಿಯಲ್ಲಿ ದೀರ್ಘಕಾಲದ ಗೆಳೆಯ ವಿಜಯ್ ದೇವರಕೊಂಡ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆ ಬೆನ್ನಲ್ಲೇ ಸಿನಿಮಾ ಹಾಗೂ ಬ್ರಾಂಡ್ಗಳ ಶೂಟಿಂಗ್‌ನಲ್ಲಿ ಬ್ಯುಸಿಯಾಗಿ, ದೇಶ-ವಿದೇಶಕ್ಕೆ ಸುತ್ತಾಡತೊಡಗಿದರು. ಈ ವಿದ್ಯಾಮಾನದ ಬೆನ್ನಲ್ಲೇ ಅಡಚಣೆ ಉಂಟಾಗಿದ್ದು, ಶೆಡ್ಯೂಲ್ ಆಗಿರುವ ಸಿನಿಮಾ ಶೂಟಿಂಗ್ಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ.
ರಶ್ಮಿಕಾ ಮಂದಣ್ಣ ಅವರಿಗೆ ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಲಾಗಿದೆ, ಹಾಗಾಗಿ ನಡೆಯುತ್ತಿರುವ ಶೂಟಿಂಗ್‌ಗಳು ಮತ್ತು ವಾಣಿಜ್ಯ ಕಾರ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಬೇಕಾಗಬಹುದು. ರಶ್ಮಿಕಾ ಮತ್ತು ಅವರ ತಂಡವು ಈ ವರದಿಗಳ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲವಾದರೂ, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲದ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ.
ರಶ್ಮಿಕಾ ಅವರು ನಾಲ್ಕು ದೊಡ್ಡ ಸಿನಿಮಾಗಳ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. 30 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳ ಶೂಟ್ಗೆ ಒಪ್ಪಿಗೆ ಕೊಟ್ಟಿದ್ದಾರೆ. ಅವರ ಬಿಡುವಿಲ್ಲದ ವೇಳೆಯ ಹೊರತಾಗಿಯೂ, ತಮ್ಮ ಶಕ್ತಿಯುತ ಅಭಿನಯ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಮೂಲಕ ಅವರು ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದಾರೆ. ಸದ್ಯಕ್ಕೆ ಚೇತರಿಸಿಕೊಳ್ಳುವುದೇ ಅವರ ಪ್ರಮುಖ ಆದ್ಯತೆಯಾಗಿದೆ.
ಟಾಲಿವುಡ್ನಲ್ಲಿ ಹೆಚ್ಚಾದ ಗಾಯದ ಸಂಸ್ಕೃತಿ
ಇತ್ತೀಚೆಗೆ ಟಾಲಿವುಡ್ ನಟ ಎನ್ಟಿಆರ್ ಹಾಗೂ ರಾಮ್ಚರಣ್ ಅವರಿಗೆ ತೀವ್ರ ಗಾಯವಾದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಗಾದ ಘಟನೆ ಬೆಳಕಿಗೆ ಬಂದಿತ್ತು.
ಡ್ರ್ಯಾಗನ್ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಶೂಟಿಂಗ್ ವೇಳೆ ಅವರ ಭುಜಕ್ಕೆ ಗಾಯವಾಗಿತ್ತು. ಈ ಹಿನ್ನೆಲೆ ವೈದ್ಯರು ಅವರಿಗೆ 6 ರಿಂದ 8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಇನ್ನೂ ನಟ ರಾಮ್ಚರಣ್ ಅವರಿಗೂ ಸಿನಿಮಾ ಶೂಟಿಂಗ್ ವೇಳೆ ಕೈಗೆ ಗಾಯವಾಗಿತ್ತು. ಹೀಗಾಗಿ ಕೊಯಮತ್ತೂರಿನ ಆಸ್ಪತ್ರೆಯಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿದೆ.
ಮೈಸಾ ಸಿನಿಮಾ ಬಗ್ಗೆ
ರವಿಂದ್ರ ಪುಲ್ಲೆ ನಿರ್ದೇಶನದ ಮೈಸಾ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ನಟಿಯಾಗಿ ನಟಿಸುತ್ತಿದ್ದಾರೆ. ಈಶ್ವರಿ ರಾವ್, ಗುರು ಸೋಮಸುಂದರಂ ಮತ್ತು ರಾವ್ ರಮೇಶ್ ಸಿನಿಮಾದಲ್ಲಿದ್ದಾರೆ. ಈ ಸಿನಿಮಾವು ಗಿರಿಜನರ ಸಾಂಸ್ಕೃತಿಕವಾಗಿ ಶ್ರೀಮಂತ ಹಿನ್ನೆಲೆಯ ವಿರುದ್ಧ ಹೊಂದಿಸಲಾದ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ,. ಇದ್ರಲ್ಲಿ ಬುಡಕಟ್ಟು ಮಹಿಳಾ ಯೋಧೆಯಾಗಿ ಕೆಲಸ ಮಾಡಿದ್ದಾರೆ, (ಏಜೆನ್ಸೀಸ್).