Rashmika Mandanna Has The Best Life Advice For Distressed Fan 
ಟಾಲಿವುಡ್

'ಕೆಲವೊಮ್ಮೆ ಬದುಕು ಅಸಹ್ಯ ಎನಿಸಿಬಿಡುತ್ತೆ'...ಎಂದ ಅಭಿಮಾನಿ; ​​ನಟಿ ರಶ್ಮಿಕಾ ಮಂದಣ್ಣ ಬದುಕಿನ ಪಾಠ ಹೇಳಿದ್ದು ಹೀಗೆ..Rashmika Mandanna

ಪ್ರಮುಖ ಮುಖ್ಯಾಂಶಗಳು

  • ಬದುಕು ಬೇಸರ ಎಂದ ಅಭಿಮಾನಿಗೆ ರಶ್ಮಿಕಾ ಮಂದಣ್ಣ ಮಾಡಿದ ಪಾಠ ಹೀಗಿತ್ತು
  • ನಾವು ಎಂತಹ ಕಷ್ಟ ಎದುರಿಸಲು ಸಶಕ್ತರು ಹಾಗೆಯೇ ರೂಪುಗೊಂಡಿದ್ದೇವೆ ಎಂದು ಅಭಿಮಾನಿಗೆ ಪಾಠ
  • ಫ್ಯಾನ್​ಗೆ ಪ್ರತ್ಯುತ್ತರ ಕೊಟ್ಟು ಮತ್ತಷ್ಟು ಇಷ್ಟವಾಗುವಂತೆ ಮಾಡುತ್ತಿದ್ದಾರೆ ರಶ್ಮಿಕಾ ಮಂದಣ್ಣ
Rashmika Mandanna Best Life Advice For Distressed Fan: ನ್ಯಾಶನಲ್​​ ಕ್ರಶ್​​ ನಟಿ ರಶ್ಮಿಕಾ ಮಂದಣ್ಣ ಅವರನ್ನು ಈಗಾಗಲೇ ಸಾಕಷ್ಟು ಜನರು ಅವರನ್ನು ನೆಚ್ಚಿಕೊಂಡಿದ್ದಾರೆ. ಟಾಲಿವುಡ್​, ಬಾಲಿವುಡ್​​​ನಲ್ಲಿ ಅವರಿಗೆ ಹೆಚ್ಚೇ ಅವಕಾಶಗಳಿವೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಬಿಡುಗಡೆಗೆ ರೆಡಿಯಾಗಿರುವ ಕಾಕ್ಟೇಲ್2​ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ, ಈ ಮಧ್ಯೆಯೂ ಅವರು ಬಿಡುವು ಮಾಡಿಕೊಂಡು ಬದುಕಿನ ಬಗ್ಗೆ ಬೇಸರ ವ್ಯಕ್ತಪಡಿಸಿದ್ ಅಭಿಮಾನಿಗೆ ಸಲಹೆ ಕೊಟ್ಟಿರುವುದು ಅಚ್ಚರಿಯನ್ನುಂಟು ಮಾಡಿದೆ.
ಹೌದು ರಶ್ಮಿಕಾ ಮಂದಣ್ಣ ಸದ್ಯ ತನ್ನ ಪ್ಯಾನ್​ವೊಬ್ಬರಿಗೆ ಕೊಟ್ಟಿರುವ ಸಲಹೆಯೊಂದು ವೈರಲ್​ ಆಗಿದ್ದು, ಅಭಿಮಾನಿಳಿಗೆ ಅವರ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗುವಂತೆ ಮಾಡಿದೆ. ಇಷ್ಟೇ ಅಲ್ಲದೆ, ಅವರಿಗೆ ಬದುಕಿನ ಮೇಲೆ ಹಾಗೂ ತಮ್ಮ ಮೇಲೆ ಇರುವ ಆತ್ಮ ವಿಶ್ವಾಸ ಎಷ್ಟಿದೆ ಎನ್ನುವುದು ತೋರ್ಪಡಿಸುತ್ತಿದೆ. ಬದುಕನ್ನು ಎಷ್ಟು ಕುತೂಹಲಕಾರಿಯಾಗಿ, ಯಶಸ್ಸಿನ ಹಾದಿಯಲ್ಲಿ ನಾವು ಕೊಂಡೊಯ್ಯಬಹುದು, ನಮಗಿರುವ ತಾಕತ್ತು ಎಷ್ಟು ಎನ್ನುವುದನ್ನು ರಶ್ಮಿಕಾ ಅವರು ಹೇಳಿಕೊಟ್ಟಿದ್ದಾರೆ.
ಅಭಿಮಾನಿಯ ಪೋಸ್ಟ್​ನಲ್ಲಿ ಏನಿದೆ?
ಕೆಲವೊಮ್ಮೆ ಜೀವನ ಅಸಹ್ಯಕರವಾಗಿದೆ. ಯಾತಕ್ಕಾಗಿ ಬದುಕುತ್ತೀವೋ ಎನ್ನುವ ಭಾವನೆ ಮೂಡುತ್ತದೆ ಎಂದು ರಶ್ಮಿಕಾ ಫ್ಯಾನ್​ ಪೇಜ್​​ ನಟಿಯ ಪೋಸ್ಟ್​ನವೊಂದಕ್ಕೆ ಬೇಸರದಿಂದ ಕಾಮೆಂಟ್ ಮಾಡಿತ್ತು. ಇದಕ್ಕೆ ಜೂನ್​16ರಂದು 10:50ಕ್ಕೆ ರಶ್ಮಿಕಾ ಅವರು ಪ್ರತ್ಯುತ್ತರ ಕೊಟ್ಟಿದ್ದಾರೆ.

ರಶ್ಮಿಕಾ ಸಲಹೆ ಇದು

'ಬದುಕು ಕೆಲವೊಮ್ಮೆ ಅಷ್ಟೇ ಬೇಸರವೆನಿಸೋದು. ಆದರೆ, ಸತ್ಯಾಂಶ ಏನು ಗೊತ್ತಾ? ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟ ಎದುರಾದರೂ ಅದನ್ನು ನಿಭಾಯಿಸಿ, ಉತ್ತಮ ಬದುಕು ಕಟ್ಟಿಕೊಳ್ಳುವಷ್ಟು ಸಶಕ್ತರಾಗಿದ್ದೇವೆ.ನಾವು ಅಷ್ಟೇ ಬಲಿಷ್ಠವಾಗಿ ರೂಪುಗೊಂಡಿದ್ದೇವೆ' ಎಂದು ಸಲಹೆ ಕೊಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಲಹೆ ಇದು

ಕಾಕ್ಟೇಲ್​​​ ಸಿನಿಮಾ ಪ್ರಚಾರದಲ್ಲಿ ಬ್ಯುಸಿ

ಹೋಮಿ ಅದಜಾನಿಯಾ ನಿರ್ದೇಶನದ ಕಾಕ್ಟೇಲ್​2 ಸಿನಿಮಾ ಇದೇ ತಿಂಗಳು ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ಶಾಹಿದ್​ ಕಪೂರ್​​, ರಶ್ಮಿಕಾ ಮಂದಣ್ಣ, ಕೃತಿ ಸನೂನ್​ ನಟಿಸಿದ್ದಾರೆ. 2012ರಲ್ಲಿ ರಿಲೀಸ್​ ಆಗಿದ್ದ ಕಾಕ್ಟೇಲ್​ ಸಿನಿಮಾದ ಮುಂದುವರೆದ ಭಾಗ ಇದು ಎನ್ನಲಾಗುತ್ತಿತ್ತು. ಆದರೆ, ಇದರ ಸಂಪೂರ್ಣ ಕತೆಯೇ ಬೇರೆ ಎಂದು ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ. ಈ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದರು ತನ್ನ ಅಭಿಮಾನಿಗೆ ಬದುಕಿನ ಬಗ್ಗೆ ಪಾಠ ಹೇಳಿಕೊಟ್ಟ ರಶ್ಮಿಕಾ ಮಂದಣ್ಣ ಅವರ ನಡೆಯನ್ನು ಕಂಡು ಫ್ಯಾನ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).