Rashmika Mandanna announces work comeback after hip injury 
ಟಾಲಿವುಡ್

ಇಂಜುರಿಯಿಂದ Rashmika Mandanna ಚೇತರಿಕೆ; ಶೀಘ್ರದಲ್ಲೇ ಸಿನಿಮಾ ಶೂಟಿಂಗ್​​ನತ್ತ ನ್ಯಾಶನಲ್​ ಕ್ರಶ್​​​ ಹೆಜ್ಜೆ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಶೂಟಿಂಗ್‌ಗೆ ಮರಳಲು ಸಜ್ಜಾದ ನಟಿ ರಶ್ಮಿಕಾ ಮಂದಣ್ಣ.
  • 'ಮೈಸಾ' ಚಿತ್ರದ ನೃತ್ಯದ ದೃಶ್ಯದ ಶೂಟಿಂಗ್ ವೇಳೆ ಸ್ನಾಯುರಜ್ಜು ಗಾಯಕ್ಕೆ ಒಳಗಾಗಿದ್ದ ನಟಿ.
  • ಮನೆಯಲ್ಲಿ ಪೂಜೆ, ಸಾಕು ನಾಯಿಯೊಂದಿಗೆ ಆಟ ಹಾಗೂ ಪಜಲ್ ಜೋಡಿಸುತ್ತಾ ಕಳೆದ ವಿರಾಮದ ದಿನಗಳು.

Rashmika Mandanna announces work comeback after hip injury:

ಆಕ್ಷನ್​ ಚಿತ್ರವೊಂದರ ದೃಶ್ಯ ಶೂಟಿಂಗ್​ ವೇಳೆಬಿದ್ದ ಪರಿಣಾಮ ಅವರ ಸೊಂಟದ ಸ್ನಾಯುರಜ್ಜಿಗೆ ಗಂಭೀರ ಗಾಯವಾಗಿತ್ತು. ಇದರಿಂದ ಚೇತರಿಸಿಕೊಂಡಿರುವ ಅವರು ತಮ್ಮ ಕಂಬ್ಯಾಕ್​ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​​ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಗುಡ್​ನ್ಯೂಸ್ ಕೊಟ್ಟಿದ್ದಾರೆ.

ರಣಬಲಿ ಮತ್ತು ಮೈಸಾ ಸಿನಿಮಾ ಶೂಟಿಂಗ್​ ವೇಳೆ ಶ್ರಮ ಬೇಡುವ ನೃತ್ಯ ಮತ್ತು ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ಅವರು ಗಾಯಮಾಡಿಕೊಂಡಿದ್ದರು. ಹೀಗಾಗಿ ನಟಿಗೆ ಆರು ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆದುಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ತಮ್ಮ ವಿಶ್ರಾಂತಿ ದಿನಗಳ ಬಗ್ಗೆ ರಶ್ಮಿಕಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ರಶ್ಮಿಕಾ ಹೊಸ ಪೋಸ್ಟ್​ನಲ್ಲಿ ಏನಿದೆ?

ರಶ್ಮಿಕಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಚೇತರಿಕೆಯ ದಿನಗಳ ಫೋಟೋಗಳು ಮತ್ತು ವೀಡಿಯೊಗಳ ಸರಣಿಯನ್ನು ಹಂಚಿಕೊಂಡಿದ್ದಾರೆ. ಪೂಜೆ ಮಾಡುವುದು, ಸಾಕು ನಾಯಿಯೊಂದಿಗೆ ಕಾಲ ಕಳೆಯುವುದು, ಚಿತ್ರದ ಪಜಲ್‌ಗಳನ್ನು ಬಿಡಿಸುವುದು ಮತ್ತು ತೋಟದ ಕಡೆಗೆ ನೋಡಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯಗಳು ಅದರಲ್ಲಿವೆ. "ನಾನು ಶೀಘ್ರದಲ್ಲೇ ಕೆಲಸಕ್ಕೆ ಹಿಂತಿರುಗುತ್ತಿದ್ದೇನೆ ಮತ್ತು ಖಂಡಿತವಾಗಿಯೂ ಇವೆಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೇನೆ!" ಎಂದು ಬರೆದುಕೊಂಡು ತಮ್ಮ ಮರಳುವಿಕೆಯನ್ನು ಖಚಿತಪಡಿಸಿದ್ದಾರೆ.

ರಶ್ಮಿಕಾಗೆ ಗಾಯವಾಗಿದ್ದು ಹೇಗೆ?

ಕಳೆದ ಜುಲೈನಲ್ಲಿ ವರದಿಗಳು ಹೊರಬಂದ ನಂತರ, ರಶ್ಮಿಕಾ ಅವರು ಆಗಸ್ಟ್ 3 ರಂದು ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ್ದರು. 'ಮೈಸಾ' ಸಿನಿಮಾದ ನೃತ್ಯ ದೃಶ್ಯದ ಚಿತ್ರೀಕರಣದ ವೇಳೆ ಅವರಿಗೆ ಗಾಯವಾಗಿತ್ತು. ಬಲಸೊಂಟದ ಸ್ನಾಯುರಜ್ಜು ಬೇರ್ಪಟ್ಟಿತ್ತು. ಹೀಗಾಗಿ ಆರು ವಾರಗಳ ಕಾಲ ಅವರು ರೆಸ್ಟ್​ನಲ್ಲಿದ್ದರು.

ರಶ್ಮಿಕಾರ ಮುಂಬರುವ ಸಿನಿಮಾಗಳಿವು

ಗಾಯಗೊಳ್ಳುವುದಕ್ಕೂ ಮುನ್ನ ರಶ್ಮಿಕಾ ಅವರು 'ಮೈಸಾ' ಮತ್ತು 'ರಣಬಾಲಿ' (Ranabaali) ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರು. 'ಮೈಸಾ' ಚಿತ್ರವು ಗೊಂಡ ಬುಡಕಟ್ಟು ಜನಾಂಗದ ಹಿನ್ನೆಲೆಯಲ್ಲಿ ಮೂಡಿಬರುತ್ತಿರುವ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದರಲ್ಲಿ ರಶ್ಮಿಕಾ ಗೊಂಡ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬ್ರಿಟಿಷ್ ಆಳ್ವಿಕೆಯ ಕಾಲದ ತೆಲುಗು ಪೀರಿಯಡ್ ಡ್ರಾಮಾ 'ರಣಬಲಿ' ಚಿತ್ರದಲ್ಲೂ ನಟಿಸುತ್ತಿದ್ದಾರೆ, (ಏಜೆನ್ಸೀಸ್).