ಚಿತ್ರ Instagram 
ಟಾಲಿವುಡ್

ವಿಜಯ್-ರಶ್ಮಿಕಾ ಮದುವೆ ಆಯ್ತು, ಈಗೇನಿದ್ದರೂ 'ರಣಬಾಲಿ' ಮ್ಯಾಜಿಕ್! ನಿರ್ಮಾಪಕರು ನೀಡಲಿರುವ ಆ 'ವಿಶೇಷ' ಸರ್‌ಪ್ರೈಸ್ ಏನು? Ranabali

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ಭಾರತದ ಸ್ಟಾರ್​ ಜೋಡಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೇ ಗುರುವಾರ (ಫೆ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟರು
  • ಮದುವೆ ಸಂಭ್ರಮ ಹಸಿರುರುವಾಗಲೇ, ಜೊತೆಯಾಗಿ ನಟಿಸುತ್ತಿರುವ 'ರಣಬಾಲಿ' ಚಿತ್ರತಂಡ ಉಡುಗೊರೆ ನೀಡಿದೆ
  • ಚಿತ್ರದ ಪಾತ್ರಗಳಾದ 'ರಣಬಾಲಿ' ಮತ್ತು 'ಜಯಮ್ಮ' ಅವರ ಕೈಗಳು ಮಾತ್ರ ಪರಸ್ಪರ ಕೋರಿಕೊಂಡಿರುವಂತೆ ಚಿತ್ರಿಸಲಾಗಿದೆ
ಹೈದರಾಬಾದ್: ದಕ್ಷಿಣ ಭಾರತದ ಸ್ಟಾರ್​ ಜೋಡಿ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇದೇ ಗುರುವಾರ (ಫೆ.26) ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ಮದುವೆ ಸಂಭ್ರಮ ಹಸಿರುರುವಾಗಲೇ, ಜೊತೆಯಾಗಿ ನಟಿಸುತ್ತಿರುವ 'ರಣಬಾಲಿ' (Ranabali) ಚಿತ್ರತಂಡವು ಅಭಿಮಾನಿಗಳಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ.

ವಿಶೇಷ ಪೋಸ್ಟರ್ ಅನಾವರಣ

ವಿವಾಹದ ಮರುದಿನ ಫೆ.27 ರಂದು 'ರಣಬಾಲಿ' ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ ಒಂದು ಆಕರ್ಷಕ ಪೋಸ್ಟರ್​ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ಮುಖಗಳು ಕಾಣಿಸದಿದ್ದರೂ, ಚಿತ್ರದ ಪಾತ್ರಗಳಾದ 'ರಣಬಾಲಿ' ಮತ್ತು 'ಜಯಮ್ಮ' ಅವರ ಕೈಗಳು ಮಾತ್ರ ಪರಸ್ಪರ ಕೋರಿಕೊಂಡಿರುವಂತೆ ಚಿತ್ರಿಸಲಾಗಿದೆ.
ಈ ಪೋಸ್ಟರ್ ಸಿನಿಮಾದ ಕಥಾಹಂದರದ ಬಗ್ಗೆ ಸುಳಿವು ನೀಡುವಂತಿದ್ದು, ವಿವಾಹದ ನಂತರದ ಸಂಭ್ರಮಕ್ಕೆ ಸಂಪೂರ್ಣ ಮೆರುಗನ್ನು ನೀಡುತ್ತಿದೆ. ನಮ್ಮ ರಣಬಾಲಿ ಮತ್ತು ಜಯಮ್ಮ ಈಗ ಅಧೀಕೃತವಾಗಿ ಒಂದಾಗಿದ್ದಾರೆ ಎಂಬ ಮಾಹಿತಿಯನ್ನು ಹಂಚಿದ್ದು, ಸಧ್ಯ ಎಲ್ಲೆಡೆ ವೈರಲ್​ ಆಗಿದೆ.
ಆದಾಗ್ಯೂ, ನಿರ್ಮಾಪಕರು ಕೇವಲ ಪೋಸ್ಟರ್ ಬಿಡುಗಡೆ ಮಾಡಿ ಸುಮ್ಮನಾಗಿಲ್ಲ. ಬದಲಿಗೆ ಇಂದು ವಿಶೇಷವಾದ ಅಪ್​ಡೇಟ್​ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದಾಗ್ಯೂ, ಪೋಸ್ಟ್​ನಲ್ಲಿ ಫೆಬ್ರವರಿ 28 ರಂದು ವಿಶೇಷ ಅಚ್ಚರಿ, ನೀವು ಮತ್ತೊಮ್ಮೆ ಅವರನ್ನು ಪ್ರೀತಿಸುತ್ತೀರಿ. ರಣಬಾಲಿ ಸೆಪ್ಟೆಂಬರ್ 11 ರಂದು ವಿಶ್ವಾದ್ಯಂತ ಗ್ರ್ಯಾಂಡ್ ಬಿಡುಗಡೆಯಾಗಲಿದೆ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
'ರಣಬಾಲಿ' ಒಂದು ಪಕ್ಕಾ ಕಮರ್ಷಿಯಲ್ ಮತ್ತು ಎಮೋಷನಲ್ ಸಿನಿಮಾ ಆಗಿದ್ದು, ರಶ್ಮಿಕಾ ಇದರಲ್ಲಿ 'ಜಯಮ್ಮ' ಎಂಬ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ವಿಜಯ್ ದೇವರಕೊಂಡ ಮಾಸ್ ಲುಕ್‌ನಲ್ಲಿ ಮಿಂಚಲಿದ್ದಾರೆ. ಚಿತ್ರದ ಶೂಟಿಂಗ್ ಹಂತ ಹಂತವಾಗಿ ಪೂರ್ಣಗೊಳ್ಳುತ್ತಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಗೀತಾ- ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ನಂತರ ವಿಜಯ್ -ರಶ್ಮಿಕಾ ಅವರ ಮೂರನೇ ಸಿನಿಮಾ ಇದಾಗಿದೆ.

ವಿಜಯ್ ಮತ್ತು ರಶ್ಮಿಕಾ ಮದುವೆ ಬಗ್ಗೆ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಉದಯಪುರದ ಐಷಾರಾಮಿ ಹೋಟೆಲೊಂದರಲ್ಲಿ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನೂತನ ಜೀವನಕ್ಕೆ ಕಾಲಿಟ್ಟರು. ತೆಲುಗು ಕುಟುಂಬದ ಸಂಪ್ರದಾಯದಂತೆ ಬೆಳಿಗ್ಗೆ ಮಂಗಳ ಮುಹೂರ್ತದಲ್ಲಿ ವಿವಾಹ ಕಾರ್ಯಕ್ರಮಗಳು ಜರುಗಿದರೆ. ಅದೇ ರೀತಿ ಸಂಜೆ ಕೊಡಗಿನ ಸಂಪ್ರದಾಯದಂತೆ ರಶ್ಮಿಕಾ ಕುಟುಂಬಸ್ಥರಿಂದ ಕಾರ್ಯಕ್ರಮಗಳು ನಡೆದವು ಎಂದು ವರದಿಯಾಗಿದೆ (ಏಜೆನ್ಸೀಸ್​).