ಮೆಗಾಸ್ಟಾರ್ ಚಿರಂಜೀವಿ ತಮ್ಮ ಮೊಮ್ಮಕ್ಕಳ ನಾಮಕರಣ ಸಮಾರಂಭ (ಚಿತ್ರ Instagram)
- ದಕ್ಷಿಣ ಭಾರತದ ಮೆಗಾಸ್ಟಾರ್ ಚಿರಂಜೀವಿ ತಮ್ಮ ಮೊಮ್ಮಕ್ಕಳ ನಾಮಕರಣ ಸಮಾರಂಭ
- ಹೃದಯಸ್ಪರ್ಶಿ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಮೆಗಾಸ್ಟಾರ್ ಚಿರಂಜೀವಿ
- ನಮ್ಮ ಮಗನ ಹೆಸರು ಶಿವರಾಮ, ಇದು ಎರಡು ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ
- ಮಗಳ ಹೆಸರು ಅನ್ವೀರಾ ದೇವಿ ಈ ಹೆಸರು ಅಪರಿಮಿತ ಧೈರ್ಯ ಮತ್ತು ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಪ್ರತಿನಿಧಿಸುತ್ತದೆ
ಹೈದರಾಬಾದ್: ದಕ್ಷಿಣ ಭಾರತದ ಮೆಗಾಸ್ಟಾರ್ ಚಿರಂಜೀವಿ ತಮ್ಮ ಮೊಮ್ಮಕ್ಕಳ ನಾಮಕರಣ ಸಮಾರಂಭದ (Naming ceremony) ಹೃದಯಸ್ಪರ್ಶಿ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋ ಜೊತೆಗೆ ಅವಳಿ ಮಕ್ಕಳ ಹೆಸರುಗಳನ್ನು ಶಿವ ರಾಮ್ ಕೊನಿಡೇಲಾ ಮತ್ತು ಅನ್ವೀರಾ ದೇವಿ ಕೊನಿಡೇಲಾ ಎಂದು ಬಹಿರಂಗಪಡಿಸಿದ್ದಾರೆ.
ನಮ್ಮ ಮಗನ ಹೆಸರು ಶಿವರಾಮ, ಇದು ಎರಡು ಆದರ್ಶಗಳನ್ನು ಪ್ರತಿಬಿಂಬಿಸುತ್ತದೆ. ಶಿವ ಮತ್ತು ರಾಮ ಎಂದರೆ ಸಂಯಮದಿಂದ ಶಕ್ತಿ, ಸದಾಚಾರದೊಂದಿಗೆ ಭಕ್ತಿ ಎಂದರ್ಥ. ಮಗಳ ಹೆಸರು ಅನ್ವೀರಾ ದೇವಿ ಈ ಹೆಸರು ಅಪರಿಮಿತ ಧೈರ್ಯ ಮತ್ತು ದೈವಿಕ ಸ್ತ್ರೀಲಿಂಗ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇವೆರಡು ಹೆಸರುಗಳು ಕೇವಲ ಕರೆಯುವದಕ್ಕಷ್ಟೆ ಸೀಮಿತವಲ್ಲ, ಅವು ಶಕ್ತಿ, ಪ್ರೀತಿ ಮತ್ತು ಧೈರ್ಯದ ಆಕಾಂಕ್ಷೆಗಳು ಎಂದು ಬಣ್ಣಿಸಿದರು.
ಇತ್ತೀಚೆಗೆ ನಟ ಮೆಗಸ್ಟಾರ್ ಚಿರಂಜೀವಿ ತಮ್ಮ ಮನೆಗೆ ಅವಳಿ ಮೊಮ್ಮಕ್ಕಳ ಆಗಮನದ ಸುದ್ದಿಯನ್ನು ಅತ್ಯಂತ ಸಂತೋಷದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಚಿರಂಜೀವಿ ಅವರ ಪೋಸ್ಟ್ನಲ್ಲೇನಿದೆ?
ಎಕ್ಸ್ ಮೂಲಕ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದ ಚಿರಂಜೀವಿ, ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ, ಒಬ್ಬ ಮಗ ಮತ್ತು ಒಬ್ಬ ಮಗಳು ಜನಿಸಿದ್ದಾರೆ ಎಂದು ಹೇಳಲು ಬಹಳ ಸಂತೋಷವಾಗುತ್ತಿದೆ. ಈ ವೇಳೆ ಶಿಶುಗಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದು ಅಜ್ಜ-ಅಜ್ಜಿಯಾದ ನಮಗೆ ದೇವರ ಆಶೀರ್ವಾದ ಮತ್ತು ಅಪಾರ ಸಂತೋಷದ ಕ್ಷಣ. ಅವರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದರು (ಏಜೆನ್ಸೀಸ್).