ಟಾಲಿವುಡ್​ ನಿರ್ದೇಶಕ ರಾಜಮೌಳಿ ( Rajamouli ) 
ಟಾಲಿವುಡ್

ರಾಜಮೌಳಿಯ ವಾರಣಾಸಿ ಚಿತ್ರಕ್ಕೆ ಮುಗಿಬಿದ್ದ ವಿತರಕರು... ಆದ್ರೆ ಜಕ್ಕಣ್ಣನ ಮೆಗಾ ಪ್ಲಾನ್​ ಏನು ಗೊತ್ತಾ? Rajamouli

ಪ್ರಮುಖ ಮುಖ್ಯಾಂಶಗಳು

  • ಜಕ್ಕಣ್ಣ ಎಂದೇ ಖ್ಯಾತರಾಗಿರುವ ಭಾರತೀಯ ಸಿನಿಮಾ ರಂಗದ ಸ್ಟಾರ್​ ನಿರ್ದೇಶಕ ರಾಜಮೌಳಿ
  • ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಮೂಲಕ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಮಿಂಚು
  • ಜಕ್ಕಣ್ಣ ಅವರ ಬತ್ತಳಿಕೆಯಿಂದ ತಯಾರಾಗುತ್ತಿದೆ ಬಹುನಿರೀಕ್ಷಿತ ವಾರಣಾಸಿ ಸಿನಿಮಾ
  • ವಾರಣಾಸಿ ಚಿತ್ರದ ವಿತರಣಾ ಹಕ್ಕುಗಳಿಗಾಗಿ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ವಿತರಕರು
Rajamouli : ಜಕ್ಕಣ್ಣ ಎಂದೇ ಖ್ಯಾತರಾಗಿರುವ ಭಾರತೀಯ ಸಿನಿಮಾ ರಂಗದ ಸ್ಟಾರ್​ ನಿರ್ದೇಶಕ ರಾಜಮೌಳಿ ಅವರು ಬಾಹುಬಲಿ ಮತ್ತು ಆರ್‌ಆರ್‌ಆರ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾವನ್ನೂ ಮೀರಿ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ, ಜಕ್ಕಣ್ಣ ಅವರ ಬತ್ತಳಿಕೆಯಿಂದ ಬಹುನಿರೀಕ್ಷಿತ ವಾರಣಾಸಿ ಸಿನಿಮಾ ತಯಾರಾಗುತ್ತಿದೆ. 
ವಾರಣಾಸಿ ಸಿನಿಮಾದಲ್ಲಿ ಟಾಲಿವುಡ್​ ಸೂಪರ್‌ಸ್ಟಾರ್ ಮಹೇಶ್ ಬಾಬು ನಾಯಕನಾಗಿ ನಟಿಸಿದ್ದು, ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮಲಯಾಳಂ ನಾಯಕ ಪೃಥ್ವಿ ರಾಜ್ ಸುಕುಮಾರನ್ ವಿಲನ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಪ್ರಸ್ತುತ, ಈ ಸಿನಿಮಾದ ಶೂಟಿಂಗ್​ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ಮುಂದಿನ ವರ್ಷ ಅಂದರೆ, 2027, ಏಪ್ರಿಲ್ 7ರಂದು ಈ ಸಿನಿಮಾ ಬಿಡುಗಡೆಯಾಗಲಿದೆ. ಇತ್ತೀಚೆಗೆ ಈ ಸಿನಿಮಾ ಕುರಿತಾದ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಆ ಸುದ್ದಿ ಏನೆಂದು ನಾವೀಗ ತಿಳಿದುಕೊಳ್ಳೋಣ.

ಜಾರ್ಜಿಯಾಕ್ಕೆ ಚಿತ್ರತಂಡ

ಈ ಚಿತ್ರದ ಚಿತ್ರೀಕರಣವು ಕೋಕಾಪೇಟ್ ಮತ್ತು ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿ ಸುತ್ತಮುತ್ತ ನಡೆಯುತ್ತಿದೆ. ಸದ್ಯ ಶೆಡ್ಯೂಲ್​ನಲ್ಲಿ ಮಹೇಶ್ ಬಾಬು-ಪ್ರಿಯಾಂಕಾ ಚೋಪ್ರಾ ಅವರ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಈ ಶೆಡ್ಯೂಲ್​ ಮುಗಿದ ತಕ್ಷಣ, ಚಿತ್ರತಂಡ ಜಾರ್ಜಿಯಾಕ್ಕೆ ಹೋಗಲು ಸಿದ್ಧವಾಗಲಿದೆ ಎಂದು ವರದಿಯಾಗಿದೆ. 

18 ಕೋಟಿ ರೂ. ಆಫರ್​

ನಾವೀಗ ತಾಜಾ ಸಂಗತಿಯ ಕಡೆಗೆ ಬರೋಣ. ಅದೇನೆಂದರೆ, ಈ ಚಿತ್ರದ ವಿತರಣಾ ಹಕ್ಕುಗಳಿಗಾಗಿ ವಿತರಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಎಂದು ಟಾಲಿವುಡ್​ ಸಿನಿಗಲ್ಲಿಗಳಲ್ಲಿ ಸಿಕ್ಕಾಪಟ್ಟೆ ಪ್ರಚಾರ ಆಗುತ್ತಿದೆ. ಕೇವಲ ಆಂಧ್ರಪ್ರದೇಶ ಮತ್ತು ಪೂರ್ವ ಗೋದಾವರಿ ಪ್ರದೇಶಕ್ಕೇನೆ 18 ಕೋಟಿ ರೂ.ಗಳ ಆಫರ್ ನೀಡಲಾಗುತ್ತಿದೆ ಎಂದು ಸಿನಿ ವ್ಯಾಪಾರ ಮೂಲಗಳು ಚರ್ಚಿಸುತ್ತಿವೆ. 

ಜಕ್ಕಣ್ಣನ ಪ್ಲಾನ್​ ಏನು?

ವಾಸ್ತವವಾಗಿ, ಇಷ್ಟೊಂದು ದೊಡ್ಡ ಮಟ್ಟದ ಆಫರ್‌ಗಳು ಬಂದರು ಕೂಡ ರಾಜಮೌಳಿ ಸಿನಿಮಾ ತಂಡವು ತಕ್ಷಣ ವ್ಯವಹಾರವನ್ನು ಪ್ರಾರಂಭಿಸಲು ಯಾವುದೇ ಆಸಕ್ತಿ ಹೊಂದಿಲ್ಲ. ಏಕೆಂದರೆ, ಬಾಹುಬಲಿ ಮತ್ತು ಆರ್‌ಆರ್‌ಆರ್‌ನಂತೆಯೇ ವಾರಣಾಸಿ ಚಿತ್ರಕ್ಕೂ ರಾಜಮೌಳಿ ಅವರು ಒಂದು ತಂತ್ರವನ್ನು ಹೊಂದಿರುತ್ತಾರೆಂದು ಟ್ರೇಡ್​ ಮೂಲಗಳು ವಿಶ್ಲೇಷಿಸುತ್ತಿವೆ. ಅದಕ್ಕಾಗಿಯೇ, ವಾರಣಾಸಿ ಚಿತ್ರದ ಶೂಟಿಂಗ್​ ಮುಗಿದ ಬಳಿಕ ಪೂರ್ಣ ಪ್ರಮಾಣದ ಮಾರುಕಟ್ಟೆ ತಂತ್ರದೊಂದಿಗೆ ವಿತರಣೆ ಮಾಡಲು ರಾಜಮೌಳಿ ತಂಡ ಯೋಜಿಸಿದೆ ಎಂಬ ಸುದ್ದಿ ಟಾಲಿವುಡ್​ ಸಿನಿ ಗಲ್ಲಿಯಲ್ಲಿ ಹರಿದಾಡುತ್ತಿದೆ, (ಏಜೆನ್ಸೀಸ್​).