ಪ್ರಭಾಸ್ ಅಭಿನಯದ ಸ್ಪಿರಿಟ್ ಚಿತ್ರದ ಫಸ್ಟ್ ಲುಕ್
- ಪ್ರಭಾಸ್ ಬಹುನಿರೀಕ್ಷಿತ ಚಿತ್ರಗಳ ಪೈಕಿ ಸ್ಪಿರಿಟ್ ಮೇಲೆ ಹೆಚ್ಚಿನ ನಿರೀಕ್ಷೆ
- ಬಹುದೊಡ್ಡ ಯಶಸ್ಸು ತಂದೊಡಲಿದೆ ಎಂಬ ಭರವಸೆ
- ಸ್ಪಿರಿಟ್ ಚಿತ್ರವನ್ನು ತಮ್ಮ ಹಿಂದಿನ ಚಿತ್ರಗಳಂತೆ ಮಾಡಿದ್ದಾರೆ ನಿರ್ದೇಶಕರು?
ಆಂಧ್ರಪ್ರದೇಶ: ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಹಾಗೂ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ 'ಸ್ಪಿರಿಟ್' ಫಸ್ಟ್ ಲುಕ್ ಇಂದು ಅಧಿಕೃತವಾಗಿ ಹೊರಬಿದ್ದಿದೆ. ಭಾರೀ ನಿರೀಕ್ಷೆಗಳನ್ನು ಹೊತ್ತಿರುವ ಈ ಚಿತ್ರವು, ತನ್ನ ಮೇಕಿಂಗ್ ಅಥವಾ ಇತರೆ ವಿಚಾರಗಳಿಗಿಂತ ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿತು. ದೀಪಿಕಾ ಪಡುಕೋಣೆ ಅವರನ್ನು ಹೊರಗಿಟ್ಟು, ಅವರ ಸ್ಥಾನಕ್ಕೆ ಅನಿಮಲ್ ಚಿತ್ರದ ಯುವ ನಟಿ ತ್ರಿಪ್ತಿ ದಿಮ್ರಿಗೆ ಅವಕಾಶ ನೀಡಿದ ಸಂದೀಪ್, ಪ್ರಥಮ ಬಾರಿಗೆ ತಮ್ಮ ಚಿತ್ರದಲ್ಲಿ ನಾಯಕನಿಗಿಂತ ನಾಯಕಿ ಪಾತ್ರಕ್ಕೆ ಹೆಚ್ಚು ಆದ್ಯತೆ ಕೊಟ್ಟಂತಿದೆ.
ಹೊಸ ವರ್ಷಕ್ಕೆ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳಿಸಿರುವ ಚಿತ್ರತಂಡ, ಪ್ರಭಾಸ್ ಅಭಿಮಾನಿಗಳು ಹಾಗೂ ಸಿನಿಪ್ರಿಯರ ಕುತೂಹಲವನ್ನು ಕೆರಳಿಸಿದೆ. ಇದರಲ್ಲಿ, ಹೊಸ ಪ್ರಭಾಸ್ರನ್ನು ನೋಡುವ ಅವಕಾಶ ಚಿತ್ರಪ್ರೇಮಿಗಳಿಗೆ ಸಿಗಲಿದೆ ಎಂಬುದು ಖಚಿತ. ಏಕೆಂದರೆ, ಶರ್ಟ್ ಇಲ್ಲದೆ, ಗಾಯಗಳು, ಬ್ಯಾಂಡೇಜ್‌ಗಳಿರುವ, ಮದ್ಯದ ಬಾಟಲಿ, ನಾಯಕನಿಗೆ ತ್ರಿಪ್ತಿ ಸಿಗರೇಟ್ ಲೈಟ್ ಮಾಡುತ್ತಿರುವ ಫೋಟೋಗಳು ಕಥೆಯ ಮೇಲಿನ ಕುತೂಹಲವನ್ನು ದುಪ್ಪಟ್ಟಾಗಿಸಿದೆ ಎಂದೇ ಹೇಳಬಹುದು.
ಹೀರೋಯಿನ್ಗೂ ಆದ್ಯತೆ
ಸಾಮಾನ್ಯವಾಗಿ, ಪ್ಯಾನ್ ಇಂಡಿಯಾ ಹಾಗೂ ಸ್ಟಾರ್ ನಟರ ಸಿನಿಮಾಗಳ ಫಸ್ಟ್ ಲುಕ್ ಪೋಸ್ಟರ್‌ಗಳಲ್ಲಿ ಹೀರೋ ಮೇಲೆ ಮಾತ್ರ ಚಿತ್ರತಂಡ ಹೆಚ್ಚು ಫೋಕಸ್ ಮಾಡುತ್ತದೆ. ಆದರೆ, ಸಂದೀಪ್ ನಿರ್ದೇಶನದ ಸ್ಪಿರಿಟ್‌ನಲ್ಲಿ, ನಾಯಕಿಯ ಪಾತ್ರಕ್ಕೆ ಹೆಚ್ಚು ಆದ್ಯತೆ ಹಾಗೂ ಪ್ರಾಮುಖ್ಯತೆ ನೀಡಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ನಲ್ಲಿ ಹೀರೋ ಜತೆಗೆ ಹೀರೋಯಿನ್ ಕಾಣಿಸಿಕೊಂಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಎಬ್ಬಿಸಿದೆ.
ಫಸ್ಟ್ ಲುಕ್ ಚರ್ಚೆ...
ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಫಸ್ಟ್ ಲುಕ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ನಿರ್ದೇಶಕರು ತಮ್ಮ ಹಿಂದಿನ ಸೂಪರ್ಹಿಟ್ ಸಿನಿಮಾಗಳಾದ 'ಅರ್ಜುನ್ ರೆಡ್ಡಿ' ಮತ್ತು 'ಅನಿಮಲ್'ನಲ್ಲಿ ಕಂಡುಬರುವ ಟೆಂಪ್ಲೇಟ್ ಅನ್ನು ಇಲ್ಲಿಯೂ ರಿಪೀಟ್ ಮಾಡಿದ್ದಾರೆ ಎಂಬ ಅಭಿಪ್ರಾಯ, ಅನಿಸಿಕೆಗಳನ್ನು ಹೊರಹಾಕಿದ್ದಾರೆ. ಅನಿಮಲ್ ಮತ್ತು ಅರ್ಜುನ್ ರೆಡ್ಡಿ ಚಿತ್ರಗಳಲ್ಲಿ ತೋರಿಸಲಾದ ಒಂದಷ್ಟು ರಾ ದೃಶ್ಯಗಳನ್ನೇ ಇಲ್ಲಿಯೂ ಬಳಸಿರಬಹುದು ಎಂಬ ಮಾತುಗಳು ಸಹ ಇವೆ. ಕೇವಲ ಫಸ್ಟ್ ಲುಕ್ ಪೋಸ್ಟರ್, ಚಿತ್ರವು 1000 ಕೋಟಿ ಕ್ಲಬ್ ಸೇರುವ ಭರವಸೆಯನ್ನು ನೀಡಿದೆ.
ಪ್ರಭಾಸ್ ಅಭಿನಯದ ರಿಲೀಸ್ಗೆ ಸಜ್ಜಾಗಿರುವ ಸಿನಿಮಾಗಳ ಪೈಕಿ ಸ್ಪಿರಿಟ್ ಮೇಲೆ ಸಾಕಷ್ಟು ನಿರೀಕ್ಷೆಗಳು ಮೂಡಿವೆ. ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಸಿನಿಮಾದ ರಿಲೀಸ್ ಡೇಟ್ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬಹುದು ಎನ್ನಲಾಗಿದೆ,(ಏಜೆನ್ಸೀಸ್).