- ವಿನೋದ್ ಮೆಹ್ರಾ ಅವರ ಮಗ ರೋಹನ್ ಮೆಹ್ರಾ ಜೊತೆಗೆ ಡೇಟಿಂಗ್ನಲ್ಲಿದ್ದಾರಾ ಪೂಜಾ ಹೆಗ್ಡೆ?
- ಪೂಜಾ ಹೆಗ್ಡೆ ಡೇಟಿಂಗ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ
- ಪಾರ್ಟಿ, ಪ್ರೀಮಿಯರ್ ಶೋಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಪೂಜಾ, ರೋಹನ್
Pooja Hegde: ಕರಾವಳಿ ಭಾಗದ ನಟಿ ಪೂಜಾ ಹೆಗ್ಡೆ ಈಗ ಡೇಟಿಂಗ್ ಗಾಸಿಪ್ಸ್ಗೆ ಗುರಿಯಾಗಿದ್ದಾರೆ. ಬಾಲಿವುಡ್ನ 90ರ ದಶಕದ ತಾರೆ ವಿನೋದ್ ಮೆಹ್ರಾ ಅವರ ಮಗ ರೋಹನ್ ಮೆಹ್ರಾ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎನ್ನುವ ಊಹಾಪೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಿನಿಮಾ ರಂಗದ ತಾರೆಯರ ಬಗ್ಗೆ ಆಗಾಗ್ಗೆ ಗಾಸಿಪ್ಸ್ ಹರಿದಾಡೋದು ಸಾಮಾನ್ಯ. ಕೆಲವೊಂದು ವಿಚಾರದ ಬಗ್ಗೆ ಸೆಲಬ್ರೆಟಿಗಳೇ ಸ್ಪಷ್ಟನೆ ಕೊಟ್ಟು ಬಿಡುತ್ತಾರೆ. ಇನ್ನು ಕೆಲವು ಊಹಾಪೋಹದ ಸುಳಿಯಲ್ಲೇ ಇರುತ್ತದೆ. ಈ ಮಧ್ಯೆ ಪೂಜಾ ಹೆಗ್ಡೆ ಮದುವೆ ಯಾವಾಗ ಎಂದು ಕೇಳುತ್ತಿದ್ದ ಫ್ಯಾನ್ಸ್ಗೆ ಗುಡ್ನ್ಯೂಸ್ ಸಿಕ್ಕಿದೆಯೇ? ಎನ್ನುವುದು ಸದ್ಯದ ಕುತೂಹಲವಾಗಿದೆ.
ರೋಹನ್ ಮೆಹ್ರಾ ಜೊತೆ ಡೇಟಿಂಗ್
ಮೋನಿಕಾ ಮತ್ತು ಬುಟ್ಟಬೊಮ್ಮ ಖ್ಯಾತಿಯ ಪೂಜಾ ಹೆಗ್ಡೆ ಅವರು ಭಾರತದ ಮತ್ತೊಬ್ಬ ಪ್ರತಿಭಾವಂತ ಮತ್ತು ಹ್ಯಾಂಡ್ಸಮ್ ನಟ ರೋಹನ್ ಮೆಹ್ರಾ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎನ್ನುವ ಗುಸುಗುಸು ಹರಿದಾಡುತ್ತಿದೆ. ಪೂಜಾ ಹೆಗ್ಡೆ ಇತ್ತೀಚೆಗೆ ಯಾವ ಸಿನಿಮಾದಲ್ಲಿಯೂ ನಟಿಸುತ್ತಿಲ್ಲ. ಜೊತೆಗೆ ಮಾಡಿದ ಸಿನಿಮಾಗಳು ಹಿಟ್ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಡೇಟಿಂಗ್ ವಿಚಾರ ಬೆಳಕಿಗೆ ಬಂದಿದೆ.
ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವ ಜೋಡಿ
ರೋಹನ್ ಮೆಹ್ರಾ ಮತ್ತು ಪೂಜಾ ಹೆಗ್ಡೆ ಒಟ್ಟಾಗಿ ಸಿನಿಮಾ ಮಾಡಿಲ್ಲ. ಹೀಗಿದ್ದರೂ ಸಹ ಇಬ್ಬರು ಕೆಲವೊಂದು ಪ್ರೀಮಿಯರ್ ಶೋಗಳಲ್ಲಿ ಹಾಗೂ ವಿಮಾನ ನಿಲ್ದಾಣಗಳಲ್ಲಿ, ಕೆಲವೊಂದು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇದು ಫ್ಯಾನ್ಸ್ಗಳಲ್ಲಿ ಮತ್ತಷ್ಟು ಪ್ರಶ್ನೆಗಳು ಹುಟ್ಟಲು ಕಾರಣವಾಗಿದೆ.
ಯಾರು ಈ ರೋಹನ್ ಮೆಹ್ರಾ?
ಹಿರಿಯ ನಟ ವಿನೋದ್ ಮೆಹ್ರಾ ಅವರ ಪುತ್ರ ರೋಹನ್ ಮೆಹ್ರಾ ಇವ್ರು 1991ರಲ್ಲಿ ಕೀನ್ಯಾದಲ್ಲಿ ಹಿಟ್ಟಿದರು. 2018ರಲ್ಲಿ ಬಜಾರ್ ಎನ್ನುವ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ರೋಹನ್ 420 ಐಪಿಸಿ, ಕಾಲಾ, ಅಧ್‌ಬುದ್ಧ್ ಮತ್ತು ಫೋರ್ ಮೋರ್ ಶಾಟ್ಸ್ ಪ್ಲೀಸ್ ಎನ್ನುವ ಸಿನಿಮಾದಲ್ಲಿ ನಟಿಸಿದ್ದಾರೆ. 2015ರಲ್ಲಿ ಸಹಾಯಕ ನಿರ್ದೇಶಕರಾಗಿ ಬಾಜಿರಾವ್ ಮಸ್ತಾನಿಯಲ್ಲಿ ಕೆಲಸ ಮಾಡಿದ್ದರು.
ಪೂಜಾ ಹೆಗ್ಡೆ ಸಿನಿಮಾ ವೃತ್ತಿ
ಪೂಜಾ ಹೆಗ್ಡೆ ಅವರು ಮಂಗಳೂರಿನವರು. ಮೊಹೆಂಜೋದಾರೋ ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟು. ಅಲಾ ವೈಕುಂಟ ಪುರಂಲೋ ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ನಟಿಸಿ ಭಾರಿ ಸದ್ದು ಮಾಡಿದ್ದರು. ಜೊತೆಗೆ ಅವರನ್ನು ಹಲವರು ನೆಚ್ಚಿಕೊಂಡಿದ್ದರು. ಈ ಸಿನಿಮಾ ನಂತರ ಅವರಿಗೆ ಯಾವುದೇ ಸಿನಿಮಾ ಹಿಟ್ ಕೊಟ್ಟಿಲ್ಲ. ಮುಕುಂದ, ಒಕ ಲೈಲಾ ಕೋಸಂ, ಮಹರ್ಷಿ, ಕೂಲಿಯ ಮೋನಿಕಾ ಸಾಂಗ್ ಅವರ ಖ್ಯಾತಿಯನ್ನು ಹೆಚ್ಚಿಸಿತ್ತು.
ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ಡೇಟಿಂಗ್ ವಿಚಾರ ವೈರಲ್ ಆಗುತ್ತಿದ್ದರೂ ಸಹ ಈ ಬಗ್ಗೆ ಇಬ್ಬರು ಯಾವುದೇ ವಿಚಾರವನ್ನು ಸ್ಪಷ್ಟಪಡಿಸಿಲ್ಲ. ಈ ಹಿಂದೆ ವರುಣ್ ಧವನ್ ಜೊತೆಯೂ ಪೂಜಾ ಹೆಗ್ಡೆ ಡೇಟಿಂಗ್ನಲ್ಲಿದ್ದರು ಎನ್ನುವ ಸುದ್ದಿ ಹರಿದಾಡಿತ್ತು, (ಏಜೆನ್ಸೀಸ್).