- 'ನಾಟು ನಾಟು' ಹಾಡಿನ ಗಾಯಕ ರಾಹುಲ್ ಸಿಪ್ಲಿಗುಂಜ್ ವಿರುದ್ಧ ಎಫ್ಐಆರ್
- ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿರುವ ಆರೋಪ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಕೇಸ್ ದಾಖಲು
- ಶೀಘ್ರದಲ್ಲೇ ಗಾಯಕನಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದ ವಿಶಾಖಪಟ್ಟಣಂನ ಎಂವಿಪಿ ಪೊಲೀಸರು
ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಆಸ್ಕರ್ ಪ್ರಶಸ್ತಿ ವಿಜೇತ 'ಆರ್ಆರ್ಆರ್' ಸಿನಿಮಾದ ನಾಟು ನಾಟು ಹಾಡಿನ ಗಾಯಕ ಹಾಗೂ ಬಿಗ್ಬಾಸ್3ರ ವಿಜೇತ ಗಾಯಕ ರಾಹುಲ್ ಸಿಪ್ಲಿಗುಂಜ್(
) ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ದೌರ್ಜನ್ಯ ಆರೋಪದ ಮೇರೆಗೆ ಮಹಿಳೆಯೊಬ್ಬರು ಕೊಟ್ಟ ದೂರಿನ ಮೇರೆಗೆ ಆಂಧ್ರದ ವಿಶಾಖಪಟ್ಟಣಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಹೌದು, ಗಾಯಕ ರಾಹುಲ್ ಸಿಪ್ಲಿಗುಂಜ್ ಅವರ ಸಂಬಂಧಿ ಎಂದು ಹೇಳಿಕೊಂಡು ಯುವಕನೊಬ್ಬ ಅತ್ಯಾಚಾರ, ವಂಚನೆ ಹಾಗೂ ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಿಸಿದ್ದು, ಗಾಯಕನ ಸೇರಿದಂತೆ 11 ಜನರ ವಿರುದ್ಧ ಕೇಸ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?
ರಾಹುಲ್ ಸಿಪ್ಲಿಗುಂಜ್ ಹಾಗೂ ಅವರ ಸಹೋದರ ಎಂದು ಹೇಳಿಕೊಂಡು ಪರಿಚಿತನಾದ ಕರ್ಪುರಪು ರಾಹುಲ್ ರೆಡ್ಡಿ ಎಂಬಾತ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಮೋಸ ಮಾಡಿದ್ದಾನೆ. ಖಾಸಗಿ ಫೋಟೋ ಮತ್ತು ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ರಿಲೀಸ್ ಮಾಡುತ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮುಂದುವರೆದು, ರಾಹುಲ್ ಸಿಪ್ಲಿಗುಂಜ್ ಸಹ ನನಗೆ ಬೆದರಿಕೆ ಹಾಕಿದ್ದಾರೆ. ನನ್ನಿಂದ ತಪ್ಪೊಪ್ಪಿಗೆ ವಿಡಿಯೋಗಳನ್ನು ಒತ್ತಾಯಪೂರ್ವಕವಾಗಿ ಮಾಡಿಸಿಕೊಂಡಿದ್ದಾರೆ. ಈ ಘಟನೆಯು ನನ್ನ ಗೌರವ ಮತ್ತು ವೈಯಕ್ತಿಕ ಜೀವನಕ್ಕೆ ಧಕ್ಕೆಯಾಗಿದೆ. ತಪ್ಪಿತಸ್ಥರಿಗೆ ಕಾನೂನಿನಡಿ ಶಿಕ್ಷೆಯಾಗಬೇಕು. ಯಾರ ಒತ್ತಡಕ್ಕೂ ಮಣಿಯದಂತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ.
ಪೊಲೀಸರ ಸ್ಪಷ್ಟನೆ ಏನು?
ಕರ್ಪುರಪು ರಾಹುಲ್ ರೆಡ್ಡಿ ಮತ್ತು ಗಾಯಕ ಸಿಪ್ಲಿಗುಂಜ್ ಸೇರಿದಂತೆ ಒಟ್ಟು 10 ಜನರ ವಿರುದ್ಧ
ಶೀಘ್ರದಲ್ಲೇ ಗಾಯಕನಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ರಾಹುಲ್ ಸಿಪ್ಲಿಗುಂಜ್ ಯಾರು?
ರಾಹುಲ್ ಸಿಪ್ಲಿಗುಂಜ್ ತೆಲುಗು ಚಲನಚಿತ್ರೋದ್ಯಮದಲ್ಲಿ ಗಾಯಕ ಮತ್ತು ಗೀತರಚನೆಕಾರ. ಯೂಟ್ಯೂಬ್ ಮೂಲಕ ಹೆಚ್ಚು ಪರಿಚಿತರು. 2022ರಲ್ಲಿ ರಿಲೀಸ್ ಆದ ನಿರ್ದೇಶಕ ಎಸ್ಎಸ್ ರಾಜಮೌಳಿಯವರ ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಕಂಠ ನೀಡಿದರು. ಕನ್ನಡದಲ್ಲಿಯೂ ಹಲವಾರು ಸಿನಿಮಾಕ್ಕಾಗಿ ಹಾಡಿದ್ದಾರೆ.
ಐತಿಹಾಸಿಕ ಆಸ್ಕರ್ ಪ್ರಶಸ್ತಿ ವಿಜೇತರಾದ ನಂತರ, ಸಿಪ್ಲಿಗುಂಜ್ ತೆಲಂಗಾಣ ಸರ್ಕಾರದಿಂದ 1 ಕೋಟಿ ರೂ. ನಗದು ಬಹುಮಾನ ಪಡೆದರು. ನಂತರ ಅವರು ಬಿಗ್ ಬಾಸ್ ತೆಲುಗು 3 ರಲ್ಲಿ ಭಾಗವಹಿಸಿ ರಿಯಾಲಿಟಿ ಶೋ ವಿಜೇತರಾದರು.
ಆಗಸ್ಟ್ 2025 ರಲ್ಲಿ, ಸಿಪ್ಲಿಗುಂಜ್ ಹೈದರಾಬಾದ್‌ನಲ್ಲಿ ಹರಿಣ್ಯ ರೆಡ್ಡಿ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಈ ಜೋಡಿ ನವೆಂಬರ್‌ನಲ್ಲಿ ವಿವಾಹವಾದರು. ಅವರು ಇತ್ತೀಚೆಗೆ ಪವನ್ ಕಲ್ಯಾಣ್ ಅವರ ಹರಿ ಹರ ವೀರ ಮಲ್ಲು: ಭಾಗ 1 ಮತ್ತು ಮಹೇಶ್ ಬಾಬು ಅವರ ಗುಂಟೂರು ಖಾರಂ ಸಿನಿಮಾಕ್ಕೆ ಹಾಡು ಹಾಡಿದ್ದಾರೆ, (ಏಜೆನ್ಸೀಸ್).