ನಟಿ ಮೃನಾಲ್ ಠಾಕೂರ್  
ಟಾಲಿವುಡ್

ಅದೊಂದು ಕಾರಣಕ್ಕೆ ಬಿಗ್ ಆಫರ್​ಗಳನ್ನು ದೂರ ತಳ್ಳುತ್ತಿರುವೆ! ಸೌತ್ ಬ್ಯೂಟಿ ಮೃನಾಲ್ ಓಪನ್ ಟಾಕ್​ | Mrunal Thakur

ಪ್ರಮುಖ ಮುಖ್ಯಾಂಶಗಳು

  • ಬಿಗ್ ಆಫರ್​ಗಳನ್ನು ತಿರಸ್ಕರಿಸುತ್ತಿರುವ ಸೌತ್ ಬ್ಯೂಟಿ ಮೃನಾಲ್ ಠಾಕೂರ್
  • ಅದೊಂದು ಕಾರಣಕ್ಕೆ ದೊಡ್ಡ ಬ್ಯಾನರ್​ ಅವಕಾಶಗಳನ್ನು ದೂರ ತಳ್ಳುತ್ತಿರುವೆ ಎಂದ ನಟಿ
Mrunal Thakur: ಕಳೆದ ಕೆಲವು ತಿಂಗಳುಗಳಿಂದ ಹೊಸ ಹೊಸ ಸಿನಿಮಾ ಸುದ್ದಿಗಳಿಗಿಂತ ತಮಿಳು ಸ್ಟಾರ್ ನಟ ಧನುಷ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುವ ಬಗ್ಗೆಯೇ ಸೌತ್​ ಬ್ಯೂಟಿ ಮೃನಾಲ್​ ಠಾಕೂರ್ ಹೆಸರು ಹೆಚ್ಚು ಬಾರಿ ಮುನ್ನೆಲೆಗೆ ಬಂದಿದೆ. ಈ ಮೂಲಕ ಮೃನಾಲ್​, ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಮತ್ತೊಂದೆಡೆ, ಅವರು ನೀಡಿರುವ ಇತ್ತೀಚಿನ ಹೇಳಿಕೆಯೊಂದು ಇದೀಗ ಟಾಲಿವುಡ್​ ಅಂಗಳದಲ್ಲಿ ಸದ್ದು ಮಾಡುತ್ತಿದೆ. 
ಮದುವೆ ವದಂತಿಗಳಿಗೆ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ ಮೃನಾಲ್, ಪದೇ ಪದೇ ಈ ವಿಚಾರಗಳು ಪ್ರಸ್ತಾಪವಾಗುತ್ತಿದ್ದಂತೆ ಇದೀಗ ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆ. ತಮ್ಮ ಸಿನಿ ಕರಿಯರ್​ ಕುರಿತಾಗಿ ಮಾತನಾಡಿರುವ ಮೃನಾಲ್ ಠಾಕೂರ್​, ನಾನು ಬ್ಲಾಕ್​ಬಸ್ಟರ್​ ಮತ್ತು ಬಿಗ್ ಬಿಜೆಟ್​ ಚಿತ್ರಗಳಿಂದ ದೂರ ಉಳಿಯುತ್ತಿದ್ದೇನೆ ಎಂದಿದ್ದಾರೆ. 
ಡಕಾಯರ್​ ಟ್ರೇಲರ್​ ಈವೆಂಟ್​ನಲ್ಲಿ ಮಾತನಾಡಿದ ಸೌತ್ ಬ್ಯೂಟಿ, ಸೀತಾ ರಾಮಂ, ಹಾಯ್​ ನಾನ್ನಾ ಸಿನಿಮಾಗಳು ನನಗೆ ದೊಡ್ಡ ಹಿಟ್​ ತಂದುಕೊಟ್ಟಿವೆ. ಮತ್ತು ನನಗೊಂದು ಬೆಂಚ್​ಮಾರ್ಕ್​ ಸೆಟ್ ಮಾಡಿವೆ. ಹೀಗಾಗಿ, ನನ್ನ ಮೇಲೆ ಫ್ಯಾನ್ಸ್​ಗಳಿಗೆ ದುಪ್ಪಟ್ಟು ನಿರೀಕ್ಷೆಗಳಿವೆ. ಈ ನಿಟ್ಟಿನಲ್ಲಿ, ದೊಡ್ಡ ಆಫರ್​ಗಳು ಮತ್ತು ಬಿಗ್ ಬ್ಯಾನರ್​ ಸಿನಿಮಾಗಳಿಗಿಂತ, ಕಥೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದೇನೆ ಎಂದರು. 
"ನಿಜವಾಗಲೂ, ನಿರ್ಮಾಪಕರು ನನ್ನನ್ನು ಕರೆದು, ಆಫರ್​ ನೀಡಿದಾಗ ಖುಷಿ ಆಗುತ್ತದೆ. ಒಳ್ಳೆಯ ಪ್ಯಾಕೇಜ್! ಆದರೆ, ಬಹಳ ಭಾರವಾದ ಮನಸ್ಸಿನಿಂದ ನಾನು ಇಂತಹ ಅವಕಾಶಗಳಿಗೆ ಆಗಲ್ಲ ಎನ್ನುವಂತಾಗಿದೆ. ಕಾರಣ, ಆ ಎರಡು ಸಿನಿಮಾಗಳ ಪಾತ್ರಗಳು. ಸೀತಾ ಮಹಾಲಕ್ಷ್ಮಿ ಮತ್ತು ಯಶ್ನಾ ಪಾತ್ರಗಳು ನನ್ನ ಕೆಲಸಕ್ಕೆ ಹೊಸ ಆಯಾಮ ಮತ್ತು ನಿರೀಕ್ಷೆಗಳನ್ನು ತಂದುಕೊಟ್ಟಿದೆ. ಹೀಗಾಗಿಯೇ, ತುಂಬ ನಯವಾಗಿ ರಿಜೆಕ್ಟ್​ ಮಾಡ್ತಿದ್ದೇನೆ" ಎಂದಿದ್ದಾರೆ,(ಏಜೆನ್ಸೀಸ್).