ಡೀಪ್‌ಫೇಕ್ ಹಾವಳಿ ವಿರುದ್ಧ ಕಾನೂನು ಸಮರಕ್ಕಿಳಿದ ಮೃಣಾಲ್!(Mrunal Thakur ಚಿತ್ರ X) 
ಟಾಲಿವುಡ್

ಇದೇ ನಿಮಗೆ ಕೊನೆಯ ವಾರ್ನಿಂಗ್...: ಡೀಪ್‌ಫೇಕ್ ಹಾವಳಿ ವಿರುದ್ಧ ಕಾನೂನು ಸಮರಕ್ಕಿಳಿದ ಮೃಣಾಲ್! Mrunal Thakur

ಮುಂಬೈ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಡೀಪ್‌ಫೇಕ್ ತಂತ್ರಜ್ಞಾನದ ದುರುಪಯೋಗವು ಚಿತ್ರರಂಗದಲ್ಲಿ ಗಂಭೀರ ಆತಂಕವನ್ನು ಸೃಷ್ಟಿಸಿದೆ. ನಕಲಿ ಫೋಟೋ ಹಾಗೂ ವಿಡಿಯೋಗಳ ಹಾವಳಿಯಿಂದ ತಾರೆಯರ ವ್ಯಕ್ತಿತ್ವಕ್ಕಾಗುತ್ತಿರುವ ಧಕ್ಕೆಯನ್ನು ತಡೆಯಲು ಈಗ 'ಸೀತಾ ರಾಮಂ' ನಟಿ ಮೃಣಾಲ್ ಠಾಕೂರ್ (

Mrunal Thakur)

 ಧ್ವನಿ ಎತ್ತಿದ್ದಾರೆ.

ತಮ್ಮ ಒಪ್ಪಿಗೆಯಿಲ್ಲದೆ ತಮ್ಮ ಮುಖ, ಧ್ವನಿ ಅಥವಾ ಚಿತ್ರಗಳನ್ನು ಬಳಸಿ ಎಐ-ಚಾಲಿತ ನಕಲಿ ವಿಡಿಯೋಗಳನ್ನು ಸೃಷ್ಟಿಸುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವವರ ವಿರುದ್ಧ ಕಠಿಣ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ಮೃಣಾಲ್ ಕಟ್ಟುನಿಟ್ಟಿನ ಹೆಜ್ಜೆಯನ್ನಿಟ್ಟಿದ್ದಾರೆ.

'ಇದು ಕಾನೂನುಬಾಹಿರ': ಇನ್‌ಸ್ಟಾಗ್ರಾಮ್‌ನಲ್ಲಿ ಮೃಣಾಲ್ ಎಚ್ಚರಿಕೆ

ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ನಟಿ,  ನನ್ನ ಅನುಮತಿಯಿಲ್ಲದೆ ಎಐ ಮೂಲಕ ನಕಲಿ ವಿಷಯಗಳನ್ನು ಸೃಷ್ಟಿಸುವುದು ಮತ್ತು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಕಾನೂನುಬಾಹಿರ ಹಾಗೂ ಅಸ್ವೀಕಾರಾರ್ಹ ಕೃತ್ಯ. ಇದನ್ನು ಸೃಷ್ಟಿಸುತ್ತಿರುವ ಮತ್ತು ಶೇರ್ ಮಾಡುತ್ತಿರುವ ಪ್ರತಿಯೊಬ್ಬರಿಗೂ ಇದೊಂದು ಮುನ್ಸೂಚನೆ. ನನ್ನ ಗುರುತನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಕ್ಷಣವೇ ನಿಲ್ಲಿಸದಿದ್ದರೆ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ನ್ಯಾಯಾಲಯದ ಮೂಲಕ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಕಿಡಿಕಾರಿದ್ದಾರೆ.

ಸಿನಿರಂಗದಲ್ಲಿ ಹೆಚ್ಚುತ್ತಿರುವ ಡೀಪ್‌ಫೇಕ್ ಭೀತಿ

ತೆ ಬೆಳಕಿಗೆ ಬಂದಿತ್ತು. ಆ ಘಟನೆಯು ಅತ್ಯಂತ ಭೀಕರವಾಗಿದೆ ಎಂದು ರಶ್ಮಿಕಾ ಹೇಳಿದ್ದರು.

ಇತ್ತೀಚಿನ ದಿನಗಳಲ್ಲಿ ಮೃಣಾಲ್ ಹೊರತಾಗಿ ರುಕ್ಮಿಣಿ ವಸಂತ್, ಪ್ರಿಯಾಂಕಾ ಮೋಹನ್, ಅಕ್ಷಯ್ ಕುಮಾರ್, ನಾಗಾರ್ಜುನ, ಜೂನಿಯರ್ ಎನ್‌ಟಿಆರ್, ವರುಣ್ ಧವನ್, ಅನಿಲ್ ಕಪೂರ್, ಶಿಲ್ಪಾ ಶೆಟ್ಟಿ, ಪ್ರೀತಿ ಜಿಂಟಾ, ಕಾರ್ತಿಕ್ ಆರ್ಯನ್ ಮತ್ತು ಸುನಿಲ್ ಶೆಟ್ಟಿ ಅವರಂತಹ ಪ್ರಮುಖ ತಾರೆಯರು ತಮ್ಮ 'ವ್ಯಕ್ತಿತ್ವದ ಹಕ್ಕುಗಳನ್ನು' ರಕ್ಷಿಸಿಕೊಳ್ಳಲು ಸೈಬರ್ ದೂರು ಅಥವಾ ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.

ಮೃಣಾಲ್ ಠಾಕೂರ್ ಮುಂಬರುವ ಸಿನಿಮಾಗಳ ಬಗ್ಗೆ

ಮೃಣಾಲ್ ಠಾಕೂರ್ ಸಾಲು ಸಾಲು ದೊಡ್ಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ಅಟ್ಲೀ ನಿರ್ದೇಶನದ, ಅಲ್ಲು ಅರ್ಜುನ್, ದೀಪಿಕಾ ಹಾಗೂ ರಶ್ಮಿಕಾ ನಟಿಸುತ್ತಿರುವ ಬೃಹತ್ ಆಕ್ಷನ್ ಚಿತ್ರ ‘ರಾಕಾ’ದ ಭಾಗವಾಗಿದ್ದಾರೆ. ವೈದಿಕ ಯುಗ ಹಾಗೂ ಸಮಕಾಲೀನ ಕಾಲಘಟ್ಟದ ಕಥಾಹಂದರ ಹೊಂದಿರುವ ಈ ಸಿನಿಮಾ ಸುಮಾರು 1,000 ಕೋಟಿ ರೂ. ಬಜೆಟ್‌ನಲ್ಲಿ ಮೂಡಿಬರುತ್ತಿದೆ ಎನ್ನಲಾಗಿದೆ. 'ಫ್ಯಾಮಿಲಿ ಸ್ಟಾರ್' ಹಾಗೂ 'ಹಾಯ್ ನನ್ನಾ' ಮೂಲಕ ಗಮನ ಸೆಳೆದಿದ್ದ ಮೃಣಾಲ್, ಈ ಬಿಗ್ ಬಜೆಟ್ ಚಿತ್ರದ ಮೂಲಕ ಮತ್ತಷ್ಟು ಸದ್ದು ಮಾಡಲು ಸಜ್ಜಾಗಿದ್ದಾರೆ (ಏಜೆನ್ಸೀಸ್​).