- ಸಿನಿಮಾಗಿಂತ ವದಂತಿಗಳಿಂದಲೇ ಸದ್ದು, ಸುದ್ದಿ
- ಮೊದಲು ತಮಿಳು ನಟ ಧನುಷ್ ಜತೆ ಡೇಟಿಂಗ್
- ಈಗ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗನೊಂದಿಗೆ...
ತಮಿಳುನಾಡು: 'ಸೀತಾ ರಾಮಂ', 'ಹಾಯ್ ನಾನ್ನ' ಚಿತ್ರಗಳ ಮೂಲಕ ಸೌತ್ ಬ್ಯೂಟಿ ಆಗಿ ಮಿಂಚುತ್ತಿರುವ ನಟಿ ಮೃನಾಲ್ ಠಾಕೂರ್, ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಚ್ಚಿನ ಜನಪ್ರಿಯತೆ ಗಳಿಸಿರುವ ಮೃನಾಲ್, ಬಹಳ ಕಡಿಮೆ ಸಮಯದಲ್ಲಿ ಸೂಪರ್ಹಿಟ್ ಸಿನಿಮಾಗಳಿಂದ ಸ್ಟಾರ್ ನಟಿ ಇಮೇಜ್ ಪಡೆದುಕೊಂಡಿದ್ದಾರೆ. ತಮ್ಮ ಮುಂಬರುವ ಫಿಲಂಗಳ ಸುದ್ದಿಗಿಂತ ಇದೀಗ ಡೇಟಿಂಗ್ ವದಂತಿಗಳಿಂದಲೇ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿರುವ ಬ್ಯೂಟಿ ಈಗ ಮತ್ತೊಂದು ಲವ್ವಿಡವ್ವಿ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗಷ್ಟೇ ತಮಿಳು ಸ್ಟಾರ್ ಧನುಷ್ ಜತೆ ಮೃನಾಲ್ ಡೇಟಿಂಗ್ ಮಾಡುತ್ತಿದ್ದಾರೆ. ಇವರಿಬ್ಬರು ಶೀಘ್ರವೇ ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಇದಕ್ಕೆ ತೆರೆ ಬೀಳುವ ಮೊದಲೇ ಮತ್ತೊಬ್ಬ ಸೆಲೆಬ್ರಿಟಿಯೊಂದಿಗೆ ಸೌತ್ ಬ್ಯೂಟಿಯ ಹೆಸರು ಕೇಳಿಬಂದಿದೆ. ಅದು ಬೇರಾರು ಅಲ್ಲ, ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶ್ರೇಯಸ್ ಅಯ್ಯರ್.
ಮೃಣಾಲ್ ಠಾಕೂರ್ ಹಾಗೂ ಶ್ರೇಯಸ್ ಅಯ್ಯರ್ ಪರಸ್ಪರ ಪ್ರೀತಿಸುತ್ತಿದ್ದಾರೆ, ಕದ್ದುಮುಚ್ಚಿ ಡೇಟಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಬಲು ಜೋರಾಗಿವೆ. ಧನುಷ್ ಜತೆಗಿನ ಊಹಾಪೋಹಗಳ ನಡುವೆ ಮತ್ತೊಂದು ಡೇಟಿಂಗ್ ವಿಚಾರ ಕೇಳಿಬರುತ್ತಿದ್ದಂತೆ ನಟಿ ಸ್ಪಷ್ಟನೆಗೆ ಇಳಿದಿದ್ದಾರೆ.
"ಇಂತಹ ವದಂತಿಗಳು ಕೇಳಲು ತಮಾಷೆಯಾಗಿರುತ್ತೆ. ಅವು ಸುದ್ದಿಗಳನ್ನು ಬಿತ್ತರಿಸುತ್ತವೆ ಅಷ್ಟೇ. ಇದನ್ನೆಲ್ಲ ನೋಡಿ ನಾನು ನಗು ಬರುತ್ತೆ. ಇವು ಉಚಿತ ಪಿಆರ್ ಸ್ಟಂಟ್‌ಗಳು. ಫ್ರೀ ಎಂದ್ರೆ ನನಗೂ ಭಾರೀ ಇಷ್ಟವೇ" ಎಂದು ಪ್ರತಿಕ್ರಿಯಿಸಿದ್ದಾರೆ,(ಏಜೆನ್ಸೀಸ್).