ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಸೊಂಟದ ಗಾಯ
- ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣಗೆ ಸೊಂಟದ ಗಾಯ
- ಆರೋಗ್ಯ ಸ್ಥಿತಿ ಹಾಗೂ ಚೇತರಿಕೆ ಬಗ್ಗೆ ಮಾಹಿತಿ ಹಂಚಿಕೊಂಡ ನಟಿ
- ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ರಾಶ್ಮಿಕಾ ಹೇಳಿದ್ದೇನು?
ಮುಂಬೈ: ಕೆಲ ದಿನಗಳ ಹಿಂದೆ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಬಿದ್ದು ಸೊಂಟಕ್ಕೆ ನೋವು ಮಾಡಿಕೊಂಡಿದ್ದರು.
ಈ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದ ನಟಿ (Rashmika Mandanna on Hip Injury), ಈಗ ಮತ್ತೊಮ್ಮೆ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ನೋವಿಗೆ ಕಾರಣವೇನು?
ಮೈಸಾ ಎಂಬ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಮಂದಣ್ಣ, ನಾನು ಅಭಿನಯಿಸಿರುವ ಸಿನಿಮಾಗಳಲ್ಲಿ ಈ ಸಿನಿಮಾದ ಆ್ಯಕ್ಷನ್ ದೃಶ್ಯಗಳು ಅತ್ಯಂತ ಕಷ್ಟಕರವಾಗಿವೆ, ಆದರೆ ನಾನು ನೃತ್ಯ ಸಂಯೋಜನೆ ವೇಳೆ ಈ ಪೆಟ್ಟನ್ನು ಮಾಡಿಕೊಂಡಿದ್ದೆನೆಂದು ನಟಿ ಈ ಮೊದಲು ತಿಳಿಸಿದ್ದರು.
ಜೀವನ ನಿಧಾನವಾಗಿದೆ!
ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟಿ, ನಾವು ಜೀವನದಲ್ಲಿ ನಿಧಾನವಾದ ರೀತಿ ಭಾಸವಾಗುತ್ತಿದೆ. ಹೀಗೆ ಜೀವನ ನಿಧಾನವಾದಾಗ ಹುಚ್ಚರಂತೆ ಒಮ್ಮೆಲೆ ನುಗ್ಗೊಣ ಎನಿಸುತ್ತೆ, ಆದರೆ ಮತ್ತೆ ಸುಮ್ಮನಾಗಬೇಕಾಗುತ್ತದೆ. ಬಹುಶಃ ಇದನ್ನೇ ಜೀವನ ಎಂದು ಕರೆಯುತ್ತಾರೆ ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.
ಆದರೆ ನನ್ನ ಸುತ್ತಲು ಸಕಾರಾತ್ಮಕ ವಾತಾವರಣ ಹಾಗೂ ಜನರ ಪ್ರೀತಿ ಮತ್ತು ಪ್ರಾರ್ಥನೆ ನನ್ನೊಂದಿಗೆ ಸದಾ ಇದೆ, ಇರಲಿದೆ ಎಂದು ನಾನು ನಂಬುತ್ತೇನೆಂದು ನಟಿ ಹೇಳಿದ್ದಾರೆ.
ಮುಂದಿನ ಸಿನಿಮಾಗಳು
ವಿಜಯ್ ದೇವರಕೊಂಡ ಜೊತೆಗೆ ಮದುವೆಯಾದ ಬಳಿಕ ರಶ್ಮಿಕಾ ಮಂದಣ್ಣ ಅವರು ರವೀಂದ್ರ ಪುಲ್ಲೆ ನಿರ್ದೇಶನದ, ಗೊಂಡ್ ಬುಡಕಟ್ಟು ಜನಾಂಗದ ಹಿನ್ನೆಲೆಯ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದರ ಜೊತೆಗೆ ರಣಬಲಿ, ಬಹುನಿರೀಕ್ಷಿತ 'ಪುಷ್ಪ 3', 'ಅನಿಮಲ್ ಪಾರ್ಕ್' ಹಾಗೂ 'ರಾಕಾ' ಚಿತ್ರಗಳಲ್ಲೂ ನಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್).