ಕಪಲ್ ಫ್ರೆಂಡ್ಲಿ ಸಿನಿಮಾದಲ್ಲಿ ನಟಿ ಮಾನಸ ವಾರಣಾಸಿ ( Manasa Varanasi ) ಲಿಪ್ಲಾಕ್
- ತೆಲುಗಿನ ಕಪಲ್ ಫ್ರೆಂಡ್ಲಿ ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ
- ನಟ ಸಂತೋಷ್ ಶೋಭನ್ ಜೊತೆಗೆ ಮಾನಸ ವಾರಣಾಸಿ ನಟಿಸಿರುವ ಸಿನಿಮಾ
- ಇತ್ತೀಚೆಗೆ ಬಿಡುಗಡೆಯಾದ ಟ್ರೈಲರ್ನಲ್ಲಿವೆ ಸಂತೋಷ್-ಮಾನಸ ನಡುವಿನ ಲಿಪ್ಲಾಕ್ ದೃಶ್ಯ
Manasa Varanasi : ಮಿಸ್ ಇಂಡಿಯಾ ಮಾನಸ ವಾರಣಾಸಿ ಅವರು ನಾಯಕಿಯಾಗಿ ಬದಲಾಗಿದ್ದು, ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಟ ಸಂತೋಷ್ ಶೋಭನ್ ಜೊತೆಗೆ ಮಾನಸ ವಾರಣಾಸಿ ನಟಿಸಿರುವ 'ಕಪಲ್ ಫ್ರೆಂಡ್ಲಿ' ಚಿತ್ರ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರದ ಭಾಗವಾಗಿ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾನಸ ವಾರಣಾಸಿ ಅವರು ನೀಡಿದ ಅಚ್ಚರಿಯ ಹೇಳಿಕೆ ಇದೀಗ ವೈರಲ್ ಆಗಿದೆ.
ಕಪಲ್ ಫ್ರೆಂಡ್ಲಿ ಸಿನಿಮಾದಲ್ಲಿ ಮಾನಸ ವಾರಣಾಸಿ ಮತ್ತು ಸಂತೋಷ್ ಶೋಭನ್ ನಡುವೆ ಲಿಪ್ಲಾಕ್ ಮತ್ತು ಪ್ರಣಯ ದೃಶ್ಯಗಳಿವೆ. ಈ ದೃಶ್ಯಗಳನ್ನು ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಈ ಟ್ರೈಲರ್ ನೋಡಿ ನಿಮ್ಮ ಕುಟುಂಬ ಯಾವ ರೀತಿ ಪ್ರತಿಕ್ರಿಯೆ ನೀಡಿತು ಎಂಬ ಪ್ರಶ್ನೆಗೆ ಮಾನಸ ಅವರು ನೀಡಿದ ಉತ್ತರ ಎಲ್ಲರ ಹುಬ್ಬೇರಿಸಿದೆ.
ನನ್ನ ಮಿತಿಯೊಳಗೆ ನಟಿಸಿದ್ದೇನೆ
ಈ ಸಿನಿಮಾದ ಕಥೆ ಹೇಳುವಾಗ, ಎರಡು ಕಿಸ್ಸಿಂಗ್ ಸೀನ್‌ಗಳು ಇರುತ್ತವೆ ಎಂದು ಹೇಳಿದ್ದರು. ಇದು ಪ್ರೇಮಕಥೆಯಾಗಿರುವುದರಿಂದ ಕಿಸ್ಸಿಂಗ್ ಸೀನ್ ಸೂಕ್ತ ಎಂದು ನನಗೆ ಅರ್ಥವಾಯಿತು. ಎರಡು ತಿಂಗಳು ಇಡೀ ತಂಡದೊಂದಿಗೆ ಪ್ರಯಾಣಿಸಿದ ನಂತರ, ನಾನು ಆರಾಮವಾಗಿದ್ದೆ ಮತ್ತು ಆ ಸೀನ್‌ಗಳನ್ನು ಯಾವುದೇ ಮುಜುಗರವಿಲ್ಲದೇ ಮಾಡಿದೆ. ಅಂತಹ ಸೀನ್‌ಗಳಲ್ಲಿ ನನಗೂ ಕೆಲವು ಮಿತಿಗಳಿವೆ. ಆ ಮಿತಿಗಳೊಳಗೆ ನಾನು ಅದನ್ನು ಮಾಡುತ್ತೇನೆ ಎಂದು ಮಾನಸ ಹೇಳಿದರು.
ನನ್ನ ಮೇಲೆ ಕೋಪಗೊಂಡರು
ಮಾತು ಮುಂದುವರಿಸಿದ ಮಾನಸ, ಕಿಸ್ಸಿಂಗ್ ಸೀನ್ಗಳ ಬಗ್ಗೆ ನಾನು ನನ್ನ ಕುಟುಂಬಕ್ಕೆ ಹೇಳಿರಲಿಲ್ಲ. ಟ್ರೈಲರ್ ನೋಡಿದ ನಂತರ, ನಮ್ಮ ಕುಟುಂಬಕ್ಕೆ ತಿಳಿಯಿತು. ಈ ವೇಳೆ ನನ್ನ ಮೇಲೆ ಕೋಪಗೊಂಡರು. ಇದು ವಾರಣಾಸಿ ಕುಟುಂಬಕ್ಕೆ ಗೌರವದ ವಿಷಯ ಎಂದು ಗದರಿದರು. ಕಿಸ್ಸಿಂಗ್ ಸೀನ್ ನೋಡಿ ನಮ್ಮ ಕುಟುಂಬದವರಿಗೆ ಸ್ವಲ್ಪ ನೋವಾಯಿತು ಎಂದರು.
ಮನವರಿಕೆ ಮಾಡಿದೆ
ವಾಸ್ತವವಾಗಿ, ನಮ್ಮ ಕುಟುಂಬದಲ್ಲಿ ಸಿನಿಮಾಗಳನ್ನೇ ಒಪ್ಪಿಕೊಳ್ಳುವುದಿಲ್ಲ. ಅದರಲ್ಲೂ ಈ ರೀತಿಯ ಚುಂಬನದ ದೃಶ್ಯವನ್ನಂತೂ ಒಪ್ಪುವ ಮಾತೇ ಇಲ್ಲ. ಹೀಗಾಗಿ, ನನ್ನ ಲಿಪ್ಲಾಕ್ ದೃಶ್ಯದಿಂದಾಗಿ ಕೋಪಗೊಂಡರು ಮತ್ತು ಅದರಿಂದ ಹೊರಬರಲು ಬಹಳ ಸಮಯ ತೆಗೆದುಕೊಂಡರು. ಕೆಲವು ಸಂಬಂಧಿಕರು ಬೇಕು ಅಂತಾನೇ ಕಾಮೆಂಟ್‌ಗಳನ್ನು ಮಾಡುತ್ತಾರೆ ಮತ್ತು ನೀವ್ಯಾರು ಆ ಕಾಮೆಂಟ್‌ಗಳನ್ನು ಗಮನಿಸಬಾರದು ಅಂತಾ ಕುಟುಂಬಕ್ಕೆ ನಾನು ಮನವರಿಕೆ ಮಾಡಿಕೊಟ್ಟೆ ಎಂದು ನಟಿ ಮಾನಸ ಹೇಳಿದ್ದಾರೆ.
ಅಂದಹಾಗೆ, ಕತೆಗೆ ತಕ್ಕಂತೆ ಭವಿಷ್ಯದ ಚಿತ್ರಗಳಲ್ಲಿಯೂ ತಾನು ಲಿಪ್ಲಾಕ್ ಮತ್ತು ಬೋಲ್ಡ್ ದೃಶ್ಯಗಳಲ್ಲಿ ನಟನೆ ಮಾಡುವುದಾಗಿ ಮಾನಸ ವಾರಣಾಸಿ ಅವರು ಹೇಳಿದ್ದಾರೆ, (ಏಜೆನ್ಸೀಸ್).