- ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ ಬಳಗಕ್ಕೆ ಘಾಸಿಯುಂಟು ಮಾಡಿದ ಹೇಳಿಕೆ
- ನಟನ ಫ್ಯಾನ್ಸ್ಗೆ ಕಡೆಗೂ ಕ್ಷಮಾಪಣೆ ಕೋರಿದ ಮಹಾನಟಿ
ಚೆನ್ನೈ: ಸೌತ್ ಸಿನಿಮಾದ ಹೆಸರಾಂತ ನಾಯಕರ ಜತೆ ನಟಿ ಕೀರ್ತಿ ಸುರೇಶ್ (Keerthy Suresh) ಕೆಲಸ ಮಾಡಿದ್ದಾರೆ. ಶಿಸ್ತಿನ ಜೀವನ ಶೈಲಿ ಪಾಲಿಸುವ ಕೀರ್ತಿ, ಯಾವುದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬುತ್ತಾರೆ ಎಂಬುದು ಬಹುತೇಕ ಸಿನಿಪ್ರಿಯರಿಗೆ ಗೊತ್ತಿರುವ ಸಂಗತಿಯೇ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ತಾವು ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿ ಬಳಗಕ್ಕೆ ಘಾಸಿಯುಂಟು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಕೀರ್ತಿ ಪ್ರತಿಕ್ರಿಯಿಸಿದ್ದು, ನಟನ ಫ್ಯಾನ್ಸ್ಗೆ ಕಡೆಗೂ ಕ್ಷಮಾಪಣೆ ಕೋರಿದ್ದಾರೆ.
ತಮ್ಮ ಮುಂಬರುವ ಕ್ರೈಮ್ ಕಾಮಿಡಿ ಜಾನರ್ನ 'ರಿವಾಲ್ವರ್ ರೀಟಾ' ಚಿತ್ರದ ಪ್ರಚಾರದಲ್ಲಿ ಸದ್ಯ ಬಿಜಿಯಾಗಿರುವ ಕೀರ್ತಿ ಸುರೇಶ್, ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾದ ಈ ಹಿಂದೆ ಮಾಡಿದ ಕಾಮೆಂಟ್ ಅನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾರೆ. 2024ರಲ್ಲಿ 'ರಘು ತಾತಾ' ಚಿತ್ರದ ಪ್ರಚಾರದ ಸಮಯದಲ್ಲಿ, ನಿಮ್ಮ ಪ್ರಕಾರ ಯಾರು ಉತ್ತಮ ಡ್ಯಾನ್ಸರ್ ಎಂದು ನೀವು ಭಾವಿಸುತ್ತೀರಿ ಎಂಬ ಪ್ರಶ್ನೆಗೆ, ಚಿರಂಜೀವಿಗಿಂತ ದಳಪತಿ ವಿಜಯ್ ಅವರೇ ಬೆಸ್ಟ್ ಎಂದಿದ್ದರು. ನಟಿಯ ಈ ಹೇಳಿಕೆಯ ವಿಡಿಯೋ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಮತ್ತು ನಟನ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಯಿತು. ಇದನ್ನು ನೆನಪಿಸಿಕೊಂಡು ಕೀರ್ತಿ ಮಾತನಾಡಿದ್ದಾರೆ.
ತೆಲುಗು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೀರ್ತಿ ಸುರೇಶ್, "ಚಿತ್ರದ ಪ್ರಚಾರದ ವೇಳೆ ಈ ವಿಷಯವನ್ನು ಪ್ರಸ್ತಾಪಿಸುತ ಚಿರಂಜೀವಿ ಫ್ಯಾನ್ಸ್ಗೆ ಕ್ಷಮೆಯಾಚಿಸಿದರು. ಈ ಹಿಂದಿನಿಂದಲೂ ನಾನು ದಳಪತಿ ವಿಜಯ್ ಅವರ ಅಪ್ಪಟ ಅಭಿಮಾನಿ. ಚಿರಂಜೀವಿ ಗಾರು ಅವರಿಗೂ ಗೊತ್ತಿದೆ ನಾನೆಷ್ಟು ದೊಡ್ಡ ಫ್ಯಾನ್ ಅವರಿಗೆ ಅಂತ. ಯಾರು ಉತ್ತಮ ಡ್ಯಾನ್ಸರ್ ಪ್ರಶ್ನೆಗೆ ನಾನು ಕೊಟ್ಟ ಉತ್ತರ ಯಾರನ್ನೂ ನೋಯಿಸಬೇಕು ಎಂದಲ್ಲ. ನನಗೆ ಚಿರಂಜೀವಿ ಸರ್ ಎಂದರೆ ಅಪಾರವಾದ ಪ್ರೀತಿ ಮತ್ತು ಗೌರವವಿದೆ" ಎಂದರು,(ಏಜೆನ್ಸೀಸ್).