Kadiri Is Chiranjeevi's Next Film
Kadiri Is Chiranjeevi's Next Film Megastar Accidentally Reveals Title:
ಟಾಲಿವುಡ್ನ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಅವರು ಕೋಟ್ಯಾಂತರ ಜನ ಫ್ಯಾನ್ಸ್ ಹೊಂದಿದ್ದಾರೆ. ಅವರ ಹೊಸ ಸಿನಿಮಾಗಾಗಿ ಅಭಿಮಾನಿಗಳು ಇಂದಿಗೂ ಕಾತುರದಿಂದ ಕಾಯುತ್ತಾರೆ. 70ರಲ್ಲೂ ನಟನೆಯಲ್ಲಿ ತೊಡಗಿಕೊಂಡಿರುವ ಅವರು, ಸದ್ಯ ಗೌಪ್ಯವಾಗಿಟ್ಟಿದ್ದ ಮೆಗಾ 158 ಸಿನಿಮಾದ ಟೈ
ಟಲ್ನ್ನು ಬಾಯಿತಪ್ಪಿ ರಿವೀಲ್ ಮಾಡಿಬಿಟ್ಟಿದ್ದಾರೆ. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಟ ವರುಣ್ ತೇಜ್ ಅವರ ಕೊರಿಯನ್ ಕನಕರಾಜು ಸಿನಿಮಾ ಹಿಟ್ ಕಂಡ ಹಿನ್ನೆಲೆ, ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಭಾಗಿಯಾಗಿದ್ದ ಅವರು ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರ ನೀಡುತ್ತಾ.. ಆಕಸ್ಮಿಕವಾಗಿ ಸಿನಿಮಾ ಹೆಸರನ್ನು ರಿವೀಲ್ ಮಾಡಿಬಿಟ್ಟಿದ್ದಾರೆ. ಆಗಸ್ಟ್ 22ರಂದು 71ನೇ ವಸಂತಕ್ಕೆ ಚಿರಂಜೀವಿ ಅವರು ಕಾಲಿಡುತ್ತಿದ್ದು ಅಂದಿನ ದಿನವೇ ಮೆಗಾ 158 ಸಿನಿಮಾದ ಶೀರ್ಷಿಕೆ ಮತ್ತು ಟೀಸರ್ ರಿಲೀಸ್ ಮಾಡುವ ಪ್ಲ್ಯಾನ್ ಇತ್ತು ಎನ್ನಲಾಗಿದೆ.
20 ಸೆಕೆಂಡ್ ಸಿನಿಮಾದ ಟೀಸರ್ನ ತಯಾರಿ ಪೂರ್ಣಗೊಂಡು ರಿಲೀಸ್ಗೆ ಸಿದ್ಧವಾಗಿದೆಯೇ. ಕೊನೆಯಲ್ಲಿ 'ಕದಿರಿ' ಎಂಬ ಶೀರ್ಷಿಕೆ ಇಟ್ಟುಕೊಂಡಿದ್ದೀರಾ ಎಂದು ಕೇಳಿ ಥಟ್ಟನೆ ಎನೋ ಹೊಳೆದಂತೆ ಬಾಯ್ಮುಚ್ಚಿಕೊಂಡರು. ಈ ವೇಳೆ ಅವರನ್ನು ಸುಮ್ಮನಾಗಿಸಲು ಸಂಗೀತ ಸಂಯೋಜಕ ಥಮನ್ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅವರು ಸಿನಿಮಾ ಹೆಸರು ಹೇಳುತ್ತಲೇ ನೆರೆದಿದ್ದ ಜನರು ಹೋ ಎಂದು ಕೂಗಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಆಗಸ್ಟ್ 22ರಂದು ಕದಿರಿ ಟೀಸರ್ ರಿಲೀಸ್
ಆಗಸ್ಟ್ 22ರಂದು ಚಿರಂಜೀವಿ ಹುಟ್ಟುಹಬ್ಬದ ದಿನವೇ ಕದಿರಿ ಸಿನಿಮಾದ ಟೀಸರ್ ರಿಲೀಸ್ ಆಗಲಿದೆ. ಈ ಸಿನಿಮಾವನ್ನು ಕೆಎಸ್ ರವೀಂದ್ರ ಅವರು ನಿರ್ದೇಶೀಸಿದ್ದಾರೆ. ಪ್ರಿಯಾಮಣಿ ಹಾಗೂ ಸ್ಯಾಂಡಲ್ವುಡ್ ನಟಿ ರಚಿತಾ ರಾಮ್ ಹಾಗೂ ನಿವೇತಾ ಪೇತುರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ. ಅನಸ್ವರ ರಾಜನ್ ಸೇರಿದಂತೆ ಘಟಾನುಘಟಿ ನಾಯಕ ನಟರು ಈಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಟೀಸರ್ ಮತ್ತು ಸಿನಿಮಾದ ಹೆಸರು ಗೌಪ್ಯವಾಗಿಟ್ಟು ಆಗಸ್ಟ್ 22ರಂದು ರಿವೀಲ್ ಆಗಬೇಕಿತ್ತು. ಆದರೆ, ಆಕಸ್ಮಿಕವಾಗಿ ಚಿರಂಜೀವಿ ಅವರು ಬಾಯ್ಬಿಟ್ಟಿರುವ ಹಿನ್ನೆಲೆ, ಸಿನಿಮಾದ ಕತೆ ಹೇಗಿರಲಿದೆ. ನಿರ್ದೇಶನ ಹೇಗಿದೆ ಎನ್ನುವುದರ ಕುತೂಹಲ ಹೆಚ್ಚಾಗಿದೆ.
ಕೊನೆಯಾದಗಿ ನಟಿಸಿದ್ದು ಈ ಸಿನಿಮಾ
ಚಿರಂಜೀವಿ ಅವರು ಕೊನೆಯದಾಗಿ ಮನ ಶಂಕರ ವರ ಪ್ರಸಾದ್ ಗಾರು ಸಿನಿಮಾದಲ್ಲಿ ನಟಿಸಿದ್ದರು. ಜನವರಿಯಲ್ಲಿ ರಿಲೀಸ್ ಆದ ಈ ಸಿನಿಮಾದಲ್ಲಿ ನಯನತಾರ ಹಾಗೂ ಕ್ಯಾಥರೀನ್ ಥೆರೇಸಾ ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ 300 ಕೋಟಿಗೂ ಅಧಿಕ ಹಣವನ್ನು ಗಳಿಕೆ ಮಾಡಿತ್ತು. ಭದ್ರತಾ ಸಿಬ್ಬಂದಿ ಮತ್ತು ಆತನ ಕುಟುಂಬದ ಸುತ್ತ ಈ ಸಿನಿಮಾದ ಕತೆ ಸುತ್ತುತ್ತದೆ, (ಏಜೆನ್ಸೀಸ್).